ಬೆಳಗಾವಿ : ದಾರಿಲ್ಲಿ ಹೋಗೋರೆಲ್ಲಾ ಬಂದು ಹೇಳಿದ್ರೆ ತನಿಖೆಗೆ ನೀಡಲಾಗುತ್ತಾ. ಭ್ರಷ್ಟಾಚಾರ ರಹಿತ ಸರ್ಕಾರ ಬೊಮ್ಮಾಯಿ ನೇತೃತ್ವದ ಸರ್ಕಾರ ನೀಡುತ್ತಿದೆ ಎಂದು ಸಚಿವ ಆರ್.ಅಶೋಕ್ ತಿಳಿಸಿದರು.
ಪರ್ಸಂಟೇಜ್ ಕುರಿತು ಅಶೋಕ್ ಹೇಳಿಕೆ : ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಟ್ರ್ಯಾಕ್ಟರ್ ರ‍್ಯಾಲಿವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅವರು ಮಾತನಾಡೋದು ಹೇಗಿದೆ ಅಂದ್ರೆ, ಬೂತದ ಬಾಯಲ್ಲಿ ಭಗವದ್ಗಿತೆ ಬಂದಂತಿದೆ. ಭ್ರಷ್ಟಾಚಾರದ ಪಿತಾಮಹರು ಕಾಂಗ್ರೆಸ್ನವರು. ಭ್ರಷ್ಟಾಚಾರ ರಹಿತ ಸರ್ಕಾರ ಬೊಮ್ಮಾಯಿ ನೇತೃತ್ವದ ಸರ್ಕಾರ ನೀಡುತ್ತಿದೆ. ಅವರ ಸರ್ಕಾರದಲ್ಲೇ ಹಲವು ಹಗರಣ ನಡೆದಿತ್ತು. ಅವರೇ ಕಾಂಟ್ರಾಕ್ಟರ್ಗಳಿಗೆ ಹೇಳಿ ಮಾಡಿಸಿದ್ದಾರೆ ಎಂದು ಆರೋಪಿಸಿದರು.
ದಾಖಲೆ ಬಿಡುಗಡೆ ಮಾಡಲಿ : ರಾಜಕೀಯ ಮಾಡಲು ಈ ರೀತಿ ಮಾಡಿದ್ದಾರೆ. ಭ್ರಷ್ಟಾಚಾರ ಮಾಡಿದ್ರೆ ದಾಖಲೆ ಬಿಡುಗಡೆ ಮಾಡಲಿ. ದಾಖಲೆ ಇಲ್ಲ ಅವರ ಬಳಿ ಸುಮ್ಮನಿದ್ದಾರೆ. ಬಿಟ್ ಕಾಯಿನ್ ಅಂತ ದಿನಾ ಬೊಬ್ಬೆ ಹೊಡೆದ್ರು. ನಾವು ವಿಪಕ್ಷದಲ್ಲಿದ್ದಾಗ ಇವರನ್ನ ನೋಡಿದ್ದೇವೆ. ಅವರು ದಾಖಲೆ ನೀಡಿದ್ರೆ, ತನಿಖೆಗೆ ಸಿದ್ಧ ಎಂದು ಆರ್. ಅಶೋಕ್ ತಿಳಿಸಿದರು.