ETV Bharat / city

ಮಾಸ್ಕ್​ ಡ್ರೈವ್​​​: ದಂಡಕ್ಕೆ ಹೆದರಿ ಬನಿಯನ್​ನಿಂದ ಮುಖ ಮುಚ್ಚಿಕೊಂಡ ವೃದ್ಧ ಕಾರ್ಮಿಕ - ಮಾಸ್ಕ್ ಡ್ರೈವ್

ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರು ಮಾಸ್ಕ್ ಡ್ರೈವ್ ಮಾಡುವ ಸಂದರ್ಭದಲ್ಲಿ ಓರ್ವ ವೃದ್ಧ ಕಾರ್ಮಿಕ ದಂಡಕ್ಕೆ ಹೆದರಿ ಬನಿಯನ್ ಮೇಲಕ್ಕೆತ್ತಿ ಮುಖ ಮುಚ್ಚಿಕೊಂಡರು. ಬಳಿಕ ಬಟ್ಟೆ ಅಂಗಡಿಗಳಿಗೂ ತೆರಳಿ ಸಿಬ್ಬಂದಿಗಳು ಮಾಸ್ಕ್ ಹಾಕಿದ್ದಾರೆ? ಸ್ಯಾನಿಟೈಸರ್ ಇದೆಯಾ ಎಂದು ಪರಿಶೀಲನೆ ನಡೆಸಿದ್ದ ವೇಳೆ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ಮಷಿನ್ ಪ್ಲಾಸ್ಟಿಕ್‌ನಲ್ಲಿ ಕಟ್ಟಿಟ್ಟಿದ್ದ ಅಂಗಡಿ ಮಾಲೀಕನಿಗೆ ಸಿಬ್ಬಂದಿ ತರಾಟೆಗೆ ತೆಗೆದುಕೊಂಡರು.

police-department-and-belagavi-city-corporation-staff-mask-drive
ಮಾಸ್ಕ್​ ಡ್ರೈವ್​​​
author img

By

Published : Apr 20, 2021, 3:18 PM IST

ಬೆಳಗಾವಿ: ಕೋವಿಡ್​​ ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆ ನಗರದಲ್ಲಿ ಮಹಾನಗರ ಪಾಲಿಕೆ ಸಿಬ್ಬಂದಿ ಮತ್ತು ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಮಾಸ್ಕ್ ಇಲ್ಲದೇ ಓಡಾಡುತ್ತಿದ್ದ ಜನರಿಗೆ ದಂಡ ವಿಧಿಸಿದರು. ಈ ಸಂದರ್ಭದಲ್ಲಿ ವೃದ್ಧ ಕಾರ್ಮಿಕನೊಬ್ಬ ತನ್ನ ಬನಿಯನ್​​ ಅನ್ನೇ ಮೇಲಕ್ಕೆತ್ತಿ ಮುಖ ಮುಚ್ಚಿಕೊಂಡ ಘಟನೆ ನಡೆಯಿತು.

ನಗರದ ಗಣಪತಿ ಬೀದಿ, ರವಿವಾರ ಪೇಟೆ, ಖಡೇಬಜಾರ್ ಸೇರಿದಂತೆ ವಿವಿಧೆಡೆ ಜನಜಂಗುಳಿ ಇರುವ ಪ್ರದೇಶದಲ್ಲಿ ಮಾಸ್ಕ್ ಡ್ರೈವ್ ನಡೆಸಿದ ಮಹಾನಗರ ಪಾಲಿಕೆ ಸಿಬ್ಬಂದಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಾಕೀತು ಮಾಡುತ್ತಿದ್ದಾರೆ. ಅಲ್ಲದೇ ಮಾಸ್ಕ್ ಧರಿಸದೇ ಓಡಾಡುವ ಜನರಿಗೆ 100 ದಂಡ ಹಾಕುತ್ತಿದ್ದಾರೆ.

ದಂಡಕ್ಕೆ ಹೆದರಿ ಬನಿಯನ್​ನಿಂದ ಮುಖ ಮುಚ್ಚಿಕೊಂಡ ವೃದ್ಧ ಕಾರ್ಮಿಕ

ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರು ಮಾಸ್ಕ್ ಡ್ರೈವ್ ಮಾಡುವ ಸಂದರ್ಭದಲ್ಲಿ ಓರ್ವ ವೃದ್ಧ ಕಾರ್ಮಿಕ ದಂಡಕ್ಕೆ ಹೆದರಿ ಬನಿಯನ್ ಮೇಲಕ್ಕೆತ್ತಿ ಮುಖ ಮುಚ್ಚಿಕೊಂಡರು. ಬಳಿಕ ಬಟ್ಟೆ ಅಂಗಡಿಗಳಿಗೂ ತೆರಳಿ ಸಿಬ್ಬಂದಿಗಳು ಮಾಸ್ಕ್ ಹಾಕಿದ್ದಾರಾ? ಸ್ಯಾನಿಟೈಸರ್ ಇದೆಯಾ ಎಂದು ಪರಿಶೀಲನೆ ನಡೆಸಿದ್ದ ವೇಳೆ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ಮಷಿನ್ ಪ್ಲಾಸ್ಟಿಕ್‌ನಲ್ಲಿ ಕಟ್ಟಿಟ್ಟಿದ್ದ ಅಂಗಡಿ ಮಾಲೀಕನಿಗೆ ಸಿಬ್ಬಂದಿ ತರಾಟೆಗೆ ತೆಗೆದುಕೊಂಡರು.

ಬಳಿಕ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸುವಂತೆ ಮಾಲೀಕನಿಗೆ ಪಾಲಿಕೆ ಸಿಬ್ಬಂದಿ ವಾರ್ನಿಂಗ್ ಮಾಡಿದರು. ಇದಲ್ಲದೇ ಪೊಲೀಸರು ಬಟ್ಟೆ ಅಂಗಡಿಯೊಳಗೆ ಎಂಟ್ರಿ ಕೊಡ್ತಿದ್ದಂತೆ ಓಡಿ ಬಚ್ಚಿಟ್ಟುಕೊಳ್ಳಲು ಯತ್ನಿಸಿದ ಕೆಲಸಗಾರನಿಗೂ ದಂಡ ಹಾಕಿದರು. ಬಳಿಕ ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ವ್ಯಾಪಾರ ವಹಿವಾಟು ಮಾಡುವಂತೆ ಹೇಳಿದರು.

ಮೈಕ್ ಹಿಡಿದು ಕೊರೊನಾ ಜಾಗೃತಿ: ನಗರದಲ್ಲಿ ಇಂದು ಒಂದೇ ದಿನ 119 ಕೊರೊನಾ ಕೇಸ್ ಪತ್ತೆಯಾಗಿದೆ. ಮಾಸ್ಕ್ ಧರಿಸದವರ ಗಂಟಲು ದ್ರವ ಪಡೆದು ಕೈಗೆ ಸೀಲ್ ಹಾಕುತ್ತೇವೆ. ವರದಿ ಬರೋವರೆಗೂ ಕ್ವಾರಂಟೈನ್‌ನಲ್ಲಿರಬೇಕಾಗುತ್ತದೆ‌. ನಿಮ್ಮ ವ್ಯಾಪಾರಕ್ಕೂ ತೊಂದರೆ ಆಗುತ್ತದೆ‌. ಹೀಗಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ವಹಿವಾಟು ನಡಸಬೇಕೆಂದು ಪಾಲಿಕೆ ಸಿಬ್ಬಂದಿ ಮೈಕ್ ಹಿಡಿದು ಅನೌನ್ಸ್ ಮಾಡುವ ಮೂಲಕ ಕೊರೊನಾ ಜನಜಾಗೃತಿ ಮೂಡಿಸುತ್ತಿದ್ದಾರೆ.

ಇದೇ ವೇಳೆ, ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ಸಂಜಯ್ ಡುಮ್ಮಗೋಳ ಮಾಧ್ಯಮದವರೊಂದಿಗೆ ಮಾತನಾಡಿದರು. ಇಂದು ಕೇವಲ ಜನರಿಗೆ ದಂಡ ವಸೂಲಿ ಮಾಡಿ ಜಾಗೃತಿ ಮೂಡಿಸುತ್ತಿದ್ದೇವೆ. ನಾಳೆಯಿಂದ ಮಾಸ್ಕ್ ಧರಿಸದವರ ಥ್ರೋಟ್ ಸ್ವ್ಯಾಬ್ ಕಲೆಕ್ಟ್ ಮಾಡಿ ಕೈಗೆ ಕ್ವಾರಂಟೈನ್ ಸೀಲ್ ಹಾಕ್ತೇವೆ. ಬೆಳಗಾವಿ ನಗರ ಪ್ರದೇಶಗಳಲ್ಲಿ ದಿನದಿಂದ ದಿನಕ್ಕೆ ಕೊರೊನಾ‌ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಜನರು ಮುಂಜಾಗ್ರತಾ ಕ್ರಮವನ್ನು ಪಾಲಿಸಬೇಕು, ಇಲ್ಲದಿದ್ರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.