ಬೆಳಗಾವಿ: ಪೊಲೀಸರ ಜೊತೆ ಸೇರಿ 4.9 ಕೆಜಿ ಸ್ಮಗ್ಲಿಂಗ್ ಚಿನ್ನ ಕಳ್ಳತನ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಹುಬ್ಬಳ್ಳಿ ಮೂಲದ ಕಿರಣ್ ವೀರನಗೌಡರ ವಿರುದ್ಧ ಬೆಳಗಾವಿಯ ಕ್ಯಾಂಪ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.
ನಿವೃತ್ತ ಡಿವೈಎಸ್ಪಿ ಪುತ್ರನಾಗಿರುವ ಕಿರಣ್ ವೀರನಗೌಡರ ಕ್ರೈಂ ಹಿಸ್ಟರಿ ಬಗೆದಷ್ಟು ಬಯಲಾಗ್ತಿದೆ. ಪೊಲೀಸ್ ಅಧಿಕಾರಿಗಳು ಹಾಗೂ ಆರೋಪಿಗಳ ಮಧ್ಯೆ ಮಿಡಿಯೇಟರ್ ಆಗಿ ಕೆಲಸ ಮಾಡಿದ್ದ ಮತ್ತೊಂದು ಪ್ರಕರಣ ಬಯಲಿಗೆ ಬಂದಿದೆ. ಓರ್ವ ಅಪರಿಚಿತ ಪೊಲೀಸ್ ಅಧಿಕಾರಿ ಹಾಗೂ ಕಿರಣ್ ವೀರನಗೌಡರ ವಿರುದ್ಧ ಕ್ಯಾಂಪ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಅಪರಿಚಿತ ಪೊಲೀಸ್ ಅಧಿಕಾರಿ ಎ1 ಆರೋಪಿಯಾದ್ರೆ, ಕಿರಣ್ ವೀರನಗೌಡರ ಎ2 ಆರೋಪಿಯಾಗಿದ್ದಾನೆ. ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿ ದಾಖಲಾದ ಪ್ರಕರಣವೊಂದರ ಆರೋಪಿ ನೆರವಿಗೆ ದಾವಿಸಿದ್ದ ಕಿರಣ್ ವಿರುದ್ಧ 10 ಲಕ್ಷ ಲಂಚ ಕೊಡಿಸಿದ ಆರೋಪ ಕೇಳಿ ಬಂದಿದೆ.
ಪೊಲೀಸರಿಂದ ತೊಂದರೆ ಆಗದಂತೆ ನೋಡಿಕೊಳ್ಳಲು ಲಂಚ ನೀಡಲಾಗಿದೆ. 2020ರ ನವೆಂಬರ್ ಮೊದಲ ವಾರದಲ್ಲಿ ಆರೋಪಿ ಕಡೆಯಿಂದ ಪೊಲೀಸ್ ಅಧಿಕಾರಿಗೆ 10 ಲಕ್ಷ ರೂ. ಲಂಚ ಕೊಡಿಸಿದ್ದಾನೆ ಎಂದು ಹೇಳಲಾಗ್ತಿದೆ. ಪೊಲೀಸರ ಜೊತೆ ಸೇರಿ ಸ್ಮಗ್ಲಿಂಗ್ ಚಿನ್ನ ಕದ್ದ ಆರೋಪದಡಿ ಸದ್ಯ ಕಿರಣ್ ಸಿಐಡಿ ವಶದಲ್ಲಿದ್ದಾರೆ.
ಇದನ್ನೂ ಓದಿ: Murder: ಬೆಂಗಳೂರಲ್ಲಿ ಕಿರುಕುಳ ತಾಳದೆ ಪತಿಯ ಹತ್ಯೆಗೆ ಪತ್ನಿಯೇ ಕೊಟ್ಟಳಾ ಸುಪಾರಿ?