ಚಿಕ್ಕೋಡಿ :ಬರಗಾಲದಿಂದ ಬತ್ತಿ ಹೋಗಿರುವ ಕೃಷ್ಣಾ ನದಿ ತೀರದಲ್ಲಿ ಒಡಲ ಕೊರೆದು, ಅಕ್ರಮವಾಗಿ ಮರಳು ಸಂಗ್ರಹಣೆ ಮಾಡುತ್ತಿದ್ದ ಅಡ್ಡೆಯ ಮೇಲೆ ಪೋಲಿಸರು ಏಕಾಏಕಿ ದಾಳಿ ನಡೆಸಿ ಮರಳು ವಶಪಡಿಸಿಕೊಂಡಿದ್ದಾರೆ.
ಜಿಲ್ಲೆಯ ಕಾಗವಾಡ ತಾಲೂಕಿನ ಬನಿಜವಾಡ ಗ್ರಾಮದಲ್ಲಿ ಅಕ್ರಮವಾಗಿ ಮಾಡುತಿದ್ದ ಮರಳು ಧಂದೆಯ ಕುರಿತು ಈಟಿವಿ ಭಾರತ ವರದಿ ಮಾಡಿತ್ತು. ವರದಿ ನೋಡಿ ಎಚೆತ್ತ ಅಧಿಕಾರಿಗಳು, ಜಿಲ್ಲೆಯ ಕಾಗವಾಡ ತಾಲೂಕಿನ ತಹಸೀಲ್ದಾರ ಪ್ರಮೀಳಾ ದೇಶಪಾಂಡೆ, ಗ್ರೇಡ್-2 ತಹಸೀಲ್ದಾರ ವಿಜಯ ಚೌಗುಲೆ, ಪಿಎಸ್‍ಐ ಹನಮಂತ ಶಿರಹಟ್ಟಿ ಅವರ ಸಿಬ್ಬಂದಿಯೊಂದಿಗೆ ಕೃಷ್ಣಾ ನದಿ ತೀರದ ಬನಿಜವಾಡ ಗ್ರಾಮದಲ್ಲಿ ಅಡ್ಡೆಯ ಮೆಲೆ ದಾಳಿ ನಡೆಸಿದ್ದಾರೆ.
ಈ ಗ್ರಾಮದಲ್ಲಿ ಜನರು ಮನೆ ಮುಂದೆ ಅನಧಿಕೃತವಾಗಿ ಮರಳನ್ನು ಸಂಗ್ರಹಿಸಿಟ್ಟದ್ದು, ಏಕ ಕಾಲಕ್ಕೆ ಅಧಿಕಾರಿಗಳು ಬನಿಜವಾಡ ಗ್ರಾಮಕ್ಕೆ ಧಾವಿಸಿ ಪ್ರತಿಯೊಬ್ಬರ ಮನೆಯಲ್ಲಿ ಸಂಗಹಿಸಿದ್ದ, 92 ಬ್ರಾಸ್ ಮರಳು ವಶಪಡಿಸಿಕೊಂಡಿದ್ದಾರೆ.