ETV Bharat / city

ಮೊದಲ ಮತ ಬಿಜೆಪಿಗೆ ಹಾಕಿ, 2ನೇ ಮತ ಕಾಂಗ್ರೆಸ್​​ಗೆ ಹಾಕ್ಬೇಡಿ: ಬಾಲಚಂದ್ರ ‌ಜಾರಕಿಹೊಳಿ

ಚುನಾವಣೆಯಲ್ಲಿ ಯಾರೂ ನಿರ್ಣಾಯಕ ಅಲ್ಲ. ನಾನು ಬಿಜೆಪಿ ಪರ ಕೆಲಸ ಮಾಡುತ್ತಿದ್ದೇನೆ. ಬೆಳಗಾವಿ ಜಿಲ್ಲೆಯಿಂದ ಇಬ್ಬರು ಅಭ್ಯರ್ಥಿಗಳು ಗೆಲ್ಲಬೇಕು. ನಾವು ಬಿಜೆಪಿ ಗೆಲ್ಲಿಸಲು ಏನು ಪ್ರಯತ್ನ ಬೇಕೋ ಅದನ್ನು ಮಾಡುತ್ತಿದ್ದೇವೆ ಎಂದು ಬಾಲಚಂದ್ರ ಜಾರಕಿಹೊಳಿ‌ ಹೇಳಿದರು.

author img

By

Published : Nov 28, 2021, 11:30 AM IST

KMF President Balachandra Jarkiholi
ಬಾಲಚಂದ್ರ ‌ಜಾರಕಿಹೊಳಿ

ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಮೊದಲ ಪ್ರಾಶಸ್ತ್ಯದ ಮತವನ್ನು ಬಿಜೆಪಿಗೆ ಹಾಕಿ, ಎರಡನೇ ಮತ ಕಾಂಗ್ರೆಸ್​​ಗೆ ಹಾಕದಂತೆ ಮನವಿ ಮಾಡುವುದಾಗಿ ಕೆಎಂಎಫ್ ‌ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ‌ ಹೇಳಿದರು.

ಬೆಳಗಾವಿಯಲ್ಲಿ ಮಾತನಾಡಿದ ಅವರು, 2ನೇ ಮತ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿಗೆ ಮತ ನೀಡುವಂತೆ ಪರೋಕ್ಷವಾಗಿ ಕೇಳಿದರು. ರಮೇಶ್ ಜತೆಗೆ ಇದೀಗ ಬಾಲಚಂದ್ರ ಕೂಡ ಲಖನ್ ಪರ ಮತಯಾಚನೆ ಮಾಡುತ್ತಿದ್ದಾರೆ. ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ನಿನ್ನೆ (ಶನಿವಾರ) ಸಹಕಾರಿ ಪ್ರತಿನಿಧಿಗಳ ಸಭೆ ಕರೆಯಲಾಗಿತ್ತು. ಈ ಸಭೆಗೆ ಡಿಸಿಸಿ ಬ್ಯಾಂಕ್, ಕೆಎಂಎಫ್ ನಿರ್ದೇಶಕರು ಆಗಮಿಸಿದ್ದರು.

ಈ ಸಭೆ ಬಳಿಕ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ‌, 'ಪಕ್ಷಕ್ಕೆ ಅನುಕೂಲ ಆಗಬೇಕೆಂಬ ದೃಷ್ಟಿಯಿಂದ ಸಭೆ ಮಾಡಿ, ಯಾರಿಗೇನು ಜವಾಬ್ದಾರಿ ನೀಡಬೇಕು ಎಂಬ ಬಗ್ಗೆ ಚರ್ಚಿಸಿದ್ದೇವೆ. ಈ ಚುನಾವಣೆಯಲ್ಲಿ ಯಾರೂ ನಿರ್ಣಾಯಕ ಅಲ್ಲ. ನಾನು ಬಿಜೆಪಿ ಪರ ಕೆಲಸ ಮಾಡುತ್ತಿದ್ದೇನೆ. ಬೆಳಗಾವಿ ಜಿಲ್ಲೆಯಿಂದ ಇಬ್ಬರು ಅಭ್ಯರ್ಥಿಗಳು ಗೆಲ್ಲಬೇಕು. ನಾವು ಬಿಜೆಪಿ ಗೆಲ್ಲಿಸಲು ಏನು ಪ್ರಯತ್ನ ಬೇಕೋ ಅದನ್ನು ಮಾಡುತ್ತಿದ್ದೇವೆ' ಎಂದರು.

ಇನ್ನು ಕೆಲವು ಮತದಾರರು, ನಾಯಕರು ಅವರವರೇ ಸ್ವಂತ ನಿರ್ಧಾರ ತೆಗೆದುಕೊಂಡು ಚುನಾವಣೆ ಮಾಡುತ್ತಿದ್ದಾರೆ. ಫಲಿತಾಂಶ ಏನಾಗುತ್ತದೆ ಎಂಬುವುದು ಗೊತ್ತಾಗಲಿದೆ. ಚುನಾವಣೆ ಎಂದ ಮೇಲೆ ಎಲ್ಲ ಕಡೆಯಿಂದ ಆರೋಪಗಳು ಬರುತ್ತವೆ.

ರಮೇಶ್ ಜಾರಕಿಹೊಳಿ ಲಖನ್‌ಗೆ ಬಿಜೆಪಿ ಎರಡನೇ ಟಿಕೆಟ್ ಕೇಳಿರಲಿಲ್ಲ. ನಾನು, ಈರಣ್ಣ ಕಡಾಡಿ, ಮಂಗಳಾ ಅಂಗಡಿ, ಸಂಜಯ್ ಪಾಟೀಲ್ ಸೇರಿ ಲಖನ್‌ಗೆ ಎರಡನೇ ಟಿಕೆಟ್ ಕೇಳಿದ್ದೆವು. ಆದರೆ ಪಕ್ಷ ಒಬ್ಬರನ್ನೇ ಕಣಕ್ಕಿಳಿಸಿದ್ದು, ಲಖನ್ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಲಖನ್ ಸ್ಪರ್ಧೆಯಿಂದ ಹಿಂದೆ ಸರಿಸುವಂತೆ ವರಿಷ್ಠರಿಂದ ಒತ್ತಡ ಬಂದಿಲ್ಲ. ನಾವು ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ರಮೇಶ್ ಜಾರಕಿಹೊಳಿ ದೆಹಲಿಗೆ ಹೋಗುವ ವಿಚಾರ ನಂಗೆ ಗೊತ್ತಿಲ್ಲ ‌ಎಂದು ಇದೇ ವೇಳೆ ತಿಳಿಸಿದರು.

ಇದನ್ನೂ ಓದಿ: ರಾಜ್ಯದಲ್ಲೇ ಮೊದಲ ಪ್ರಯೋಗ: ಪುತ್ತೂರಿನ ಶಾಲಾ ಮೈದಾನದಲ್ಲಿ ಭತ್ತ ನಾಟಿ ಯಶಸ್ವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.