ETV Bharat / city

ಪಂಚಮಸಾಲಿ ಸಮಾಜದಲ್ಲಿ ಇನ್ನೂ ಐದು ಪೀಠ ಸ್ಥಾಪನೆ ಕುರಿತ ಮಾತು ಕೇಳಿ ಬರುತ್ತಿವೆ : ಶಾಸಕ ಕುಮಟಳ್ಳಿ

ಪಂಚಮಸಾಲಿ ಸಮಾಜದ 3ನೇ ಪೀಠ ಸಚಿವ ನಿರಾಣಿ ಅವರ ಪೀಠ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಆರೋಪಕ್ಕೆ ಪ್ರತಿಕ್ರಿಯಿಸಿ, ಯಾರು ಆರೋಪ ಮಾಡುತ್ತಾರೆ ಎಂಬುದು ಗೊತಿಲ್ಲ. ಪೀಠ, ಧರ್ಮ ಗುರುಗಳು ಹೆಚ್ಚಾದರೆ ಒಳ್ಳೆಯದು. ಸಮಾಜ ಪರ ಸೇವೆಯನ್ನು ಮಾಡಲಿ..

mla mahesh kumatalli
ಅಥಣಿ ಶಾಸಕ ಮಹೇಶ್ ಕುಮಟಳ್ಳಿ
author img

By

Published : Feb 12, 2022, 7:27 PM IST

ಅಥಣಿ (ಬೆಳಗಾವಿ) : ನಾಳೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲೂರು ಗ್ರಾಮದಲ್ಲಿ ಪಂಚಮಸಾಲಿ ಸಮಾಜದ ಮೂರನೇ ಪೀಠ ಸ್ಥಾಪನೆ ಆಗುತ್ತಿದೆ. ಸಮಾಜಪರ ಪೀಠಗಳು ಇನ್ನಷ್ಟು ಒಳ್ಳೆಯ ಕಾರ್ಯವನ್ನು ಮಾಡಲಿ ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಹೇಳಿದರು.

ಅಥಣಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಮಾಜದಲ್ಲಿ ಧರ್ಮ ಗುರುಗಳು ಹಾಗೂ ಪೀಠಗಳು ಸ್ಥಾಪನೆ ಆದರೆ ಸಮಾಜ ಸುಧಾರಣೆ ಆಗುತ್ತದೆ. ಪಂಚಮಸಾಲಿ ಮೂರನೇ ಪೀಠ ಸ್ಥಾಪನೆಗೆ ಸಹಮತ ಇದೆ. ಎಲ್ಲಾ ಪೀಠಗಳಿಗೂ ನಾನು ಸಮಾನವಾಗಿ ಗೌರವಿಸುತ್ತೇನೆ ಎಂದರು.

ಪಂಚಮಸಾಲಿ ಸಮುದಾಯದ 3ನೇ ಪೀಠದ ಸ್ಥಾಪನೆ ಕುರಿತಂತೆ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಪ್ರತಿಕ್ರಿಯೆ ನೀಡಿರುವುದು..

ಪಂಚಮಸಾಲಿ ಸಮಾಜದಲ್ಲಿ ಮೊದಲೇ ಪೀಠ ಸ್ಥಾಪನೆಗೆ ಪರ-ವಿರೋಧದ ಮಾತುಗಳು ಕೇಳಿ ಬರುತ್ತಿದ್ದವು. ಆದರೆ, ಸದ್ಯ ಸಮಾಜದಲ್ಲಿ ಎರಡು ಪೀಠಗಳು ಸ್ಥಾಪನೆಯಾಗಿವೆ. ಇದರೊಂದಿಗೆ ಮತ್ತೆ ಮೂರನೇ ಪೀಠ ಸ್ಥಾಪನೆ ಆಗುತ್ತಿದೆ. ಇನ್ನು ಐದು ಪೀಠಗಳು ಸ್ಥಾಪನೆ ಆಗಲಿದ್ದಾವೆ ಎಂಬ ಮಾತುಗಳು ಕೇಳಿ ಬರುತ್ತಿವೆ ಎಂದು ಅಚ್ಚರಿಯ ಹೇಳಿಕೆ ನೀಡಿದರು.

ವೀರಶೈವ-ಲಿಂಗಾಯುತ ಸಮುದಾಯದಲ್ಲಿ ಹಲವಾರು ಪಂಗಡಗಳು ಇವೆ. ಇದರಲ್ಲಿ ಪಂಚಮಸಾಲಿ ಸಮಾಜವು ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಪರಿಣಾಮ 2ಎ ಮೀಸಲಾತಿ ಕೇಳುತ್ತಿದ್ದಾರೆ.

ಸಚಿವರಾದ ಸಿ.ಸಿ ಪಾಟೀಲ್, ಮುರುಗೇಶ್ ನಿರಾಣಿ, ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಮೀಸಲಾತಿ ಸೌಲಭ್ಯ ಕಲ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: 'ನೂತನ ಪೀಠದ ಬಗ್ಗೆ ಮಾತನಾಡೋರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ'

ಪಂಚಮಸಾಲಿ ಸಮಾಜದ 3ನೇ ಪೀಠ ಸಚಿವ ನಿರಾಣಿ ಅವರ ಪೀಠ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಆರೋಪಕ್ಕೆ ಪ್ರತಿಕ್ರಿಯಿಸಿ, ಯಾರು ಆರೋಪ ಮಾಡುತ್ತಾರೆ ಎಂಬುದು ಗೊತಿಲ್ಲ. ಪೀಠ, ಧರ್ಮ ಗುರುಗಳು ಹೆಚ್ಚಾದರೆ ಒಳ್ಳೆಯದು. ಸಮಾಜ ಪರ ಸೇವೆಯನ್ನು ಮಾಡಲಿ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.