ETV Bharat / city

ದೇಶದ ಅತಿ ಎತ್ತರದ ಧ್ವಜಸ್ತಂಭದ ಮೇಲೆ ಧ್ವಜಾರೋಹಣ ನೆರವೇರಿಸಿದ ಶಾಸಕ ಅನಿಲ್ ಬೆನಕೆ - ETV Bharat Kannada

ಬೆಳಗಾವಿಯ ಕೋಟೆ ಕೆರೆ ಆವರಣದಲ್ಲಿರುವ 110 ಮೀಟರ್ ಎತ್ತರದ ಧ್ವಜಸ್ತಂಭದ ಮೇಲೆ 75 ಕೆ.ಜಿ. ತೂಕದ ಧ್ವಜವನ್ನು ಬಟನ್ ಒತ್ತುವ ಮೂಲಕ ಶಾಸಕ ಅನಿಲ್ ಬೆನಕೆ ಧ್ವಜಾರೋಹಣ ಮಾಡಿದರು

flag hoist on the highest flagpole in the country
ದೇಶದ ಅತಿ ಎತ್ತರದ ಧ್ವಜಸ್ತಂಭದ ಮೇಲೆ ಧ್ವಜಾರೋಹಣ
author img

By

Published : Aug 13, 2022, 1:09 PM IST

Updated : Aug 13, 2022, 2:45 PM IST

ಬೆಳಗಾವಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ 'ಹರ್ ಘರ್ ತಿರಂಗಾ' ಅಭಿಯಾನದ ನಿಮಿತ್ತ ನಗರದ ಕೋಟೆ ಕೆರೆ ಆವರಣದಲ್ಲಿ ನಿರ್ಮಾಣಗೊಂಡ ದೇಶದ ಅತಿ ಎತ್ತರದ ಧ್ವಜಸ್ತಂಭದ ಮೇಲೆ ಶಾಸಕ ಅನಿಲ್ ಬೆನಕೆ ಧ್ವಜಾರೋಹಣ ನೇರವೆರಿಸಿದರು. ಇದೇ ವೇಳೆ ಕೋಟೆಕೆರೆ ಆವರಣದಿಂದ ಅಶೋಕ ವೃತ್ತ, ಆರ್​ಟಿಓ ಸರ್ಕಲ್ ಮಾರ್ಗದ ಮೂಲಕ ಚೆನ್ನಮ್ಮ ವೃತ್ತದವರೆಗೆ ತಿರಂಗಾ ರ‍್ಯಾಲಿ ನಡೆಯಿತು.

ಇಲ್ಲಿನ ಅಶೋಕ ನಗರದ ಕೋಟೆ ಕೆರೆ ಆವರಣದಲ್ಲಿರುವ 110 ಮೀಟರ್ ಎತ್ತರದ ಧ್ವಜಸ್ತಂಭದ ಮೇಲೆ 75 ಕೆ.ಜಿ. ತೂಕದ ಧ್ವಜವನ್ನು ಬಟನ್ ಒತ್ತುವ ಮೂಲಕ ಶಾಸಕ ಅನಿಲ್ ಬೆನಕೆ ಧ್ವಜಾರೋಹಣ ಮಾಡಿದರು. ಇದಕ್ಕೂ ಮುನ್ನ ಧ್ವಜಸ್ತಂಭಕ್ಕೆ ಶಾಸಕರು ಪೂಜೆ ಸಲ್ಲಿಸಿದರು.

ಬೆಳಗಾವಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಎಂಎಲ್‌ಸಿಗಳಾದ ಚನ್ನರಾಜ ಹಟ್ಟಿಹೊಳಿ, ಸಾಬಣ್ಣ ತಳವಾರ್, ಡಿಸಿ ನಿತೇಶ್ ಪಾಟೀಲ್, ನಗರ ಪೊಲೀಸ್ ಆಯುಕ್ತ ಬೋರಲಿಂಗಯ್ಯ, ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್ ಘಾಳಿ ಸೇರಿದಂತೆ ಇತರ ಇಲಾಖೆ ಅಧಿಕಾರಿಗಳು ಇದ್ದರು. ಈ ವೇಳೆ ವಿಧ್ಯಾರ್ಥಿಗಳು ಸೇರಿದ್ದ ಜನಸ್ತೋಮ ವಂದೇ ಮಾತರಂ, ಭಾರತ್ ಮಾತಾ ಕೀ ಜೈ ಘೋಷಣೆ ಕೂಗಿ ಸಂಭ್ರಮಿಸಿದರು.

ಇದನ್ನೂ ಓದಿ : ಮನೆ ಮನೆ ತಿರಂಗಾ ಅಭಿಯಾನ.. ಸಿಎಂ ಸೇರಿ ಬಿಜೆಪಿ ನಾಯಕರಿಂದ ಮನೆ ಮುಂದೆ ಧ್ವಜಾರೋಹಣ

Last Updated : Aug 13, 2022, 2:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.