ETV Bharat / city

ಸಾಮಾಜಿಕ ಕಾಳಜಿ ಇರುವವರನ್ನ ಬಳಸಿಕೊಳ್ಳುವ ಕಾಲ ಬಂದಿದೆ.. ಬೆಳಗಾವಿ ಜಿಪಂ ಸಿಇಒ

ಆರ್‌ಟಿಪಿಸಿಆರ್‌ಇ ಟೆಸ್ಟ್ ನಡೆಸಲು 45 ವರ್ಷದೊಳಗಿನ ಶಾಲಾ ಶಿಕ್ಷಕರನ್ನು ಬಳಸಿಕೊಂಡು ಸರ್ವೆ ಮಾಡಿ. ಎರಡು ಗ್ರಾಮ ಪಂಚಾಯತ್‌ಗೆ ಒಬ್ಬರು ಶಿಕ್ಷಕರನ್ನು ಬಳಸಿಕೊಳ್ಳಿ. 400 ಜನ ಶಿಕ್ಷಕರ ಪಟ್ಟಿ ಮಾಡಿ 55 ಗ್ರಾಮ ಪಂಚಾಯತ್ ಮಟ್ಟದಲ್ಲಿ ಕೆಲಸಕ್ಕೆ ನಿಯೋಜಿಸಿ..

Meeting to avoid corona
Meeting to avoid corona
author img

By

Published : Jul 26, 2020, 9:55 PM IST

ಅಥಣಿ(ಬೆಳಗಾವಿ) : ಕೊರೊನಾ ಹರಡುವಿಕೆ ತಡೆಗೆ ಸಂಬಂಧಪಟ್ಟ ಅಧಿಕಾರಿಗಳು ಕಾರ್ಯಪ್ರೌವೃತ್ತರಾಗಬೇಕೆಂದು ಜಿಪಂ ಸಿಇಒ ರಾಜೇಂದ್ರ ತಿಳಿಸಿದರು.

ಅಥಣಿ ಮತ್ತು ಕಾಗವಾಡ ತಾಲೂಕಿನಲ್ಲಿ ಅಧಿಕ ಸಂಖ್ಯೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಕಂಡು ಬಂದ ಹಿನ್ನೆಲೆಯಲ್ಲಿಂದು ಜಿಪಂ ಸಿಇಒ ರಾಜೇಂದ್ರ ಅವರ ನೇತೃತ್ವದಲ್ಲಿ ಅಥಣಿ ಪಟ್ಟಣದ ಆರ್ ಹೆಚ್ ಕುಲಕರ್ಣಿ ಸಭಾ ಭವನದಲ್ಲಿ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದರು.

ಈ ವೇಳೆ ಮಾತನಾಡಿದ ಜಿಪಂ ಸಿಇಒ ರಾಜೇಂದ್ರ, ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆ ಜಾಗೃತರಾಗಿ ಕೆಲಸ ನಿರ್ವಹಿಸಬೇಕು. ಕಂಟೈನ್ಮೆಂಟ್ ಝೋನ್‌ಗಳಲ್ಲಿ ಜನರಿಗೆ ದಿನ ಬಳಕೆಯ ವಸ್ತುಗಳು ಸಿಗುವಂತೆ ಮಾಡಿ ಕಟ್ಟುನಿಟ್ಟಿನ ಸೀಲ್‌ಡೌನ್ ಮಾಡಿ ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ಇನ್ನೂ ರ‍್ಯಾಪಿಡ್ ಆಂಟಿಜೆನ್ ಟೆಸ್ಟ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನಡೆಸಬೇಕು. ಕರ್ತವ್ಯ ಲೋಪ ಕಂಡು ಬಂದ್ರೆ ಅಂತಹವರನ್ನ ಐಪಿಸಿ ಸೆಕ್ಷನ್ 188ರ ಅಡಿ ಅಮಾನತು ಮಾಡಲು ಅವಕಾಶ ಇದೆ ಎಂದು ಎಚ್ಚರಿಸಿದರು.

ಆರ್‌ಟಿಪಿಸಿಆರ್‌ಇ ಟೆಸ್ಟ್ ನಡೆಸಲು 45 ವರ್ಷದೊಳಗಿನ ಶಾಲಾ ಶಿಕ್ಷಕರನ್ನು ಬಳಸಿಕೊಂಡು ಸರ್ವೆ ಮಾಡಿ. ಎರಡು ಗ್ರಾಮ ಪಂಚಾಯತ್‌ಗೆ ಒಬ್ಬರು ಶಿಕ್ಷಕರನ್ನು ಬಳಸಿಕೊಳ್ಳಿ. 400 ಜನ ಶಿಕ್ಷಕರ ಪಟ್ಟಿ ಮಾಡಿ 55 ಗ್ರಾಮ ಪಂಚಾಯತ್ ಮಟ್ಟದಲ್ಲಿ ಕೆಲಸಕ್ಕೆ ನಿಯೋಜಿಸಿ ಎಂದರು. ಸ್ವ್ಯಾಬ್ ಕೊಟ್ಟವರು ಮನೆಯಲ್ಲೇ ಇರುವಂತೆ ನೋಡಬೇಕು ಮತ್ತು ಸೋಂಕಿತರು ಹೊರಗೆ ಅಲೆಯದಂತೆ ನೋಡಿಕೊಳ್ಳಿ ಎಂದು ತಿಳಿಸಿದರು.

ಸಾಮಾಜಿಕ ಕಳಕಳಿ ಇರುವವರನ್ನು ಕೆಲಸಕ್ಕೆ ಬಳಸಿಕೊಳ್ಳುವ ಕಾಲ ಬಂದಿದೆ. ಎನ್‌ಜಿಒ, ಸಾಮಾಜಿಕ ಕಾರ್ಯಕರ್ತರು, ಮಾಧ್ಯಮ ಪ್ರತಿನಿಧಿಗಳ ಮೂಲಕ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಬೇಕಿದೆ. ಎಲ್ಲಾ ಅಧಿಕಾರಿಗಳು ಜಾಗ್ರತೆಯಿಂದ ಕಟ್ಟುನಿಟ್ಟಾಗಿ ಕ್ರಮವಹಿಸಿದ್ದಲ್ಲಿ ಸೋಂಕು ಹರಡದಂತೆ ತಡೆಯಲು ಸಾಧ್ಯ ಎಂದರು. ಈ ವೇಳೆ ತಾಲೂಕಿನ ವೈದ್ಯಕೀಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ತಾಲೂಕಾಡಳಿತದ ಎಲ್ಲಾ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.