ಬೆಳಗಾವಿ: ಬಿಡದೆ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ಖಾನಾಪುರ ತಾಲೂಕಿನ ಶಿವಥಾಣ ರೈಲ್ವೆ ನಿಲ್ದಾಣದ ಬಳಿ ಭೂ ಕುಸಿತವಾಗಿದೆ. ಲೋಂಡಾದಿಂದ ಹುಬ್ಬಳ್ಳಿಗೆ ರೈಲು ಪಾಸಾದ ಕೆಲವೇ ಕ್ಷಣದಲ್ಲಿ ಈ ಘಟನೆ ಸಂಭವಿಸಿದ್ದು, ಭಾರೀ ಅನಾಹುತ ತಪ್ಪಿದಂತಾಗಿದೆ.
ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಹಿನ್ನೆಲೆ ಪಾಂಡ್ರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪಾಂಡ್ರಿ ನದಿ ಪಾತ್ರದಲ್ಲಿ ಶಿವಥಾಣ ರೈಲ್ವೆ ನಿಲ್ದಾಣವಿದೆ. ನದಿ ನೀರಿನ ಸೆಳೆತಕ್ಕೆ ರೈಲ್ವೆ ಹಳಿ ಪಕ್ಕದಲ್ಲಿರುವ ಭೂಮಿ ಕುಸಿದಿದೆ.