ಬೆಳಗಾವಿ: ಕ್ಷೇತ್ರದ ಹಿರಿಯ ಮುಖಂಡರು, ಕಾರ್ಯಕರ್ತರ ಸಲಹೆ ಸೂಚನೆ ಮೇರೆಗೆ ಮುಂದಿನ ರಾಜಕೀಯ ನಿರ್ಧಾರ ಕೈಗೊಳ್ಳುವುದಾಗಿ ಎಂದು ಜೆಡಿಎಸ್ ಮುಖಂಡ ಅಶೋಕ್ ಪೂಜಾರಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳವಾರ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ ಅವರು ಗೋಕಾಕ್ ತಾಲೂಕಿನ ವೀರಶೈವ ಮುಖಂಡರು, ಸೇರಿದಂತೆ ಎಲ್ಲರನ್ನು ಪಕ್ಷಕ್ಕೆ ಆಹ್ವಾನಿಸುತ್ತಿದ್ದೇವೆ. ಅದೇ ರೀತಿ ನಿಮ್ಮನ್ನು ಅಧಿಕೃತವಾಗಿ ಆಹ್ವಾನಿಸಲು ಆಗಮಿಸಿದ್ದೇನೆ. ಗೋಕಾಕ್ ವ್ಯವಸ್ಥೆ ವಿರುದ್ಧ ನಡೆದಿರುವ ನಿಮ್ಮ ಹೋರಾಟ, ನಮ್ಮ ಹೋರಾಟ ಒಂದೇ ಆಗಿದೆ. ಹೀಗಾಗಿ, ನಮ್-ನಿಮ್ಮ ವಿಚಾರಧಾರೆ ಒಂದೇ ಆಗಿರುವುದರಿಂದ ಎಲ್ಲರೂ ಕೂಡಿ ಹೊಸ ಅಧ್ಯಾಯ ಆರಂಭಿಸೋಣ ಎಂದು ಸೌಜನ್ಯದ ಆಹ್ವಾನ ಕೊಟ್ಟಿದ್ದಾರೆ. ಆದ್ದರಿಂದ ಕಳೆದ ನಾಲ್ಕು ಚುನಾವಣೆಗಳಲ್ಲಿ ನನ್ನ ಪರವಾಗಿ ದುಡಿದಿರುವ ನನ್ನ ಮುಖಂಡರು, ಕಾರ್ಯಕರ್ತರು, ಹಿತೈಷಿಗಳು ಅಭಿಪ್ರಾಯದ ಮೇರೆಗೆ ನನ್ನ ಮುಂದಿನ ರಾಜಕೀಯ ನಡೆಯಾಗಿರುತ್ತದೆ ಎಂದು ಸತೀಶ ಜಾರಕಿಹೊಳಿ ಅವರಿಗೆ ತಿಳಿಸಿದ್ದೇನೆ ಎಂದು ಹೇಳಿದರು.
ಇದಲ್ಲದೇ, ನನ್ನ ರಾಜಕೀಯ ಜೀವನದ ಗಾಡ್ ಫಾದರ್ ಹೆಚ್.ಡಿ.ದೇವೇಗೌಡರು, ಅದೇ ರೀತಿ ಹೆಚ್.ಡಿ.ಕುಮಾರಸ್ವಾಮಿ ಅವರು ಕೂಡ ನನ್ನ ನಾಯಕರು. ಹೀಗಾಗಿ ಅವರ ಮೇಲೆ ನನಗೆ ವಿಶೇಷ ಗೌರವ, ಅಭಿಮಾನವಿದೆ. ಇಲ್ಲಿ ಏನೇ ಬೆಳವಣಿಗೆ ಆದ್ರೂ ಕೂಡ ಅವರ ಗಮನಕ್ಕೆ ತಂದು ಅವರ ಜೊತೆ ಮಾತನಾಡಿ, ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಓದಿ: ಭಿಕ್ಷುಕಿ ಮೇಲಿನ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ: ನಾಲ್ವರು ಕಾಮುಕರು ಅರೆಸ್ಟ್, ಮತ್ತೊಬ್ಬ ಎಸ್ಕೇಪ್
ಕಾಂಗ್ರೆಸ್‍ನಿಂದ ಬೆಳಗಾವಿ ಬೈಎಲೆಕ್ಷನ್ ಟಿಕೆಟ್ ನಿಮಗೆ ಕೊಡುತ್ತಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಈಗ ಕಾಂಗ್ರೆಸ್ ಪಕ್ಷದಲ್ಲಿಲ್ಲ. ಅಧಿಕೃತವಾಗಿ ನಾನು ಜೆಡಿಎಸ್ ಪಕ್ಷದಲ್ಲಿದ್ದೇನೆ. ಜೆಡಿಎಸ್ ಪಕ್ಷದ ಸದಸ್ಯನಾಗಿದ್ದೇನೆ. ಹೀಗಾಗಿ, ನನಗೆ ಕಾಂಗ್ರೆಸ್ ಟಿಕೆಟ್ ಕೊಡುವ ಪ್ರಶ್ನೆ ಉದ್ಭವ ಆಗೋದಿಲ್ಲ ಎಂದರು.