ETV Bharat / city

ನನಗ್ಯಾರೂ ಕಾಂಪಿಟೇಟರ್ಸ್ ಇಲ್ಲ, ಮತದಾರರ ತೀರ್ಮಾನಕ್ಕೆ ಬದ್ಧ: ಲಖನ್ ಜಾರಕಿಹೊಳಿ‌

ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಲಖನ್ ಜಾರಕಿಹೊಳಿ‌ ನನಗೆ ಯಾರೂ ಕಾಂಪಿಟೇಟರ್ಸ್ ಇಲ್ಲ, ಮತದಾರರ ತೀರ್ಮಾನಕ್ಕೆ ಬದ್ಧ ಎಂದು ಹೇಳಿದ್ದಾರೆ.

independent candidate lakhan jarkiholi
ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ‌
author img

By

Published : Nov 23, 2021, 8:59 PM IST

ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯಲ್ಲಿ ನನಗೆ ಯಾರೂ ಕಾಂಪಿಟೇಟರ್ಸ್ ಇಲ್ಲ, ಅದರ ಬಗ್ಗೆ ನಾನು ಯೋಚಿಸಲ್ಲ, ಮತದಾರರ ತೀರ್ಮಾನಕ್ಕೆ ಬದ್ಧ ಎಂದು ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ‌ ಹೇಳಿದರು.

ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಹೋದರ ಬಾಲಚಂದ್ರ ಜಾರಕಿಹೊಳಿ‌ ಬಿಜೆಪಿ ಟಿಕೆಟ್ ಕೇಳಿದ್ದರೇನೋ, ಆದರೆ ನಾನು ಪಕ್ಷೇತರ ಅಭ್ಯರ್ಥಿ ಆಗಿ ಸ್ಪರ್ಧಿಸಲು ಮೊದಲೇ ತೀರ್ಮಾನಿಸಿದ್ದೆ. ನಮ್ಮ ಬೆಂಬಲಿಗರು, ಕಾರ್ಯಕರ್ತರು ಹೇಳಿದ್ದಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೇನೆ ಎಂದು ತಿಳಿಸಿದರು.

ಈ ಚುನಾವಣೆಯಲ್ಲಿ ನಮಗೆ ಕಾಂಪಿಟೇಟರ್ ಯಾರೂ ಇಲ್ಲ. ಎದುರಾಳಿಗಳ ಬಗ್ಗೆ ನಾನು ವಿಚಾರ ಮಾಡುವುದಿಲ್ಲ. ಮೂವರು ಸಹೋದರರು ಬೇರೆ ಬೇರೆ ಪಕ್ಷದಲ್ಲಿದ್ದಾರೆ. ಅವರು ಅವರ ಪಕ್ಷದ ಪರವಾಗಿ ಕೆಲಸ ಮಾಡುತ್ತಾರೆ ಎಂದರು.

ಇದನ್ನೂ ಓದಿ: ಪರಿಷತ್​​ ಚುನಾವಣೆ.. ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕಿಳಿದ ಲಖನ್​ ಜಾರಕಿಹೊಳಿ

ಲಖನ್ ನಾಮಪತ್ರ ಹಿಂಪಡೆಯಲಿದ್ದಾರೆ ಎಂಬ ಸತೀಶ್ ಜಾರಕಿಹೊಳಿ‌ ಹೇಳಿಕೆಗೆ ಪ್ರತಿಕ್ರಿಯಿಸಿ, ಸತೀಶ್ ಏನೇ ಹೇಳಿದರೂ ಅವರು ನಮ್ಮ ಅಣ್ಣ. ಆದರೆ ನಾನು ಯಾವುದೇ ಕಾರಣಕ್ಕೂ ನಾಮಪತ್ರ ವಾಪಸ್ ಪಡೆಯುವುದಿಲ್ಲ. ಸತೀಶ್ ಜಾರಕಿಹೊಳಿ‌ ಸುತ್ತಮುತ್ತ ಇದ್ದವರೇ ಊಹಾಪೋಹ ಎಬ್ಬಿಸುತ್ತಿದ್ದಾರೆ. ಅಭಿವೃದ್ಧಿಗೋಸ್ಕರ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇನೆ, ಶಕ್ತಿ ಪ್ರದರ್ಶನ ಮಾಡಿಲ್ಲ. ಅಭಿಮಾನಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ನನ್ನೊಂದಿಗೆ ಬಂದಿದ್ದಾರೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.