ಬೆಳಗಾವಿ : ಮೈಸೂರು ಮತ್ತು ಬೆಳಗಾವಿಯಲ್ಲಿನ ಸೋಲಿನ ಬಗ್ಗೆ ಸಮಗ್ರ ತನಿಖೆ ಮಾಡಿ ವಾಸ್ತವಿಕ ಸ್ಥಿತಿಗತಿಗಳನ್ನ ತಿಳಿದುಕೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಕ್ತ ಕ್ರಮಕೈಗೊಳ್ಳುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರು ಮತ್ತು ಬೆಳಗಾವಿಯಲ್ಲಿ ನೂರಕ್ಕೆ ನೂರರಷ್ಟು ಗೆದ್ದೇ ಗೆಲ್ತೀವಿ ಎಂಬ ವಿಶ್ವಾಸವಿತ್ತು. ಆದರೆ, ನಮಗೆ ಹಿನ್ನೆಡೆಯಾಗಿದೆ.
ಬೆಳಗಾವಿ ಮತ್ತು ಮೈಸೂರಿನಲ್ಲಿ ಅಷ್ಟು ಜನ ಶಾಸಕರು, ಸಂಸದರಿದ್ದರೂ ಸೋತಿದ್ದೇವೆ. ಆ ಸೋಲಿನ ಬಗ್ಗೆ ಚಿಂತನೆ ಮಾಡಬೇಕಿದೆ. ಸಮಗ್ರ ತನಿಖೆ ಮಾಡಿ ಯಾರು ನಮಗೆ ಸಹಕಾರ ನೀಡಿಲ್ಲ ಎಂಬ ತನಿಖೆ ಆಗಬೇಕಿದೆ ಎಂದರು.
ನಿನ್ನೆ (ಮಂಗಳವಾರ) ಸಿಎಂ ಬೊಮ್ಮಾಯಿ ನನ್ನ ಜತೆಗೆ ಚರ್ಚೆ ಮಾಡಿದ್ದಾರೆ. ಸಮಗ್ರ ತನಿಖೆ ಮಾಡಿ ವಾಸ್ತವಿಕ ಸ್ಥಿತಿಗತಿ ತಿಳಿದುಕೊಂಡು ಆ ಬಗ್ಗೆ ಸಿಎಂ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ಇದಲ್ಲದೇ ಉತ್ತರಕರ್ನಾಟಕ ಅಭಿವೃದ್ಧಿಗೆ ಎರಡು ದಿನ ಚರ್ಚೆ ಮಾಡುವಂತೆ ಸ್ಪೀಕರ್ ಹೇಳಿದ್ದಾರೆ. ಸಿಎಂ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಮಾಜಿ ಸಿಎಂ ಬಿಎಸ್ವೈ ಹೇಳಿದರು.
ಇದನ್ನೂ ಓದಿ: ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಮತ ಎಣಿಕೆ : 35 ನಿರ್ದೇಶಕ ಸ್ಥಾನಗಳ ಫಲಿತಾಂಶಕ್ಕೆ ಕ್ಷಣಗಣನೆ