ETV Bharat / city

ನಮ್ಮನ್ನ ಸ್ಥಳಾಂತರಿಸಿ, ಇಲ್ಲದಿದ್ರೆ ಚುನಾವಣೆ ಬಹಿಷ್ಕರಿಸುತ್ತೇವೆ: ಗ್ರಾಮಸ್ಥರ ಎಚ್ಚರಿಕೆ - ರಮೇಶಗೌಡ ಪಾಟೀಲ್​

ಬೆಳಗಾವಿ‌ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳ ಗ್ರಾಮ ಪ್ರವಾಹದ ಸಂದರ್ಭದಲ್ಲಿ ಸಂಪೂರ್ಣ ಮುಳುಗಡೆಯಾಗುತ್ತದೆ. ಶೀಘ್ರವಾಗಿ ನಮ್ಮನ್ನು ಸ್ಥಳಾಂತರ ಮಾಡದಿದ್ರೆ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಗ್ರಾಮದ ಮುಖಂಡ ರಮೇಶಗೌಡ ಪಾಟೀಲ್​ ಎಚ್ಚರಿಕೆ ನೀಡಿದ್ದಾರೆ.

ಚುನಾವಣೆ ಬಹಿಷ್ಕರಿಸುವುದಾಗಿ ಗ್ರಾಮಸ್ಥರಿಂದ ಎಚ್ಚರಿಕೆ
author img

By

Published : Oct 3, 2019, 10:56 PM IST

ಚಿಕ್ಕೋಡಿ: ಬೆಳಗಾವಿ‌ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳ ಗ್ರಾಮ ಪ್ರವಾಹದ ಸಂದರ್ಭದಲ್ಲಿ ಸಂಪೂರ್ಣ ಮುಳುಗಡೆಯಾಗುತ್ತದೆ. ಶೀಘ್ರವಾಗಿ ನಮ್ಮನ್ನು ಸ್ಥಳಾಂತರ ಮಾಡದಿದ್ರೆ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಗ್ರಾಮದ ಮುಖಂಡ ರಮೇಶಗೌಡ ಪಾಟೀಲ್​ ಎಚ್ಚರಿಕೆ ನೀಡಿದ್ದಾರೆ.

ಚುನಾವಣೆ ಬಹಿಷ್ಕರಿಸುವುದಾಗಿ ಗ್ರಾಮಸ್ಥರಿಂದ ಎಚ್ಚರಿಕೆ

ಗ್ರಾಮದಲ್ಲಿ ಹಲವಾರು ಸಮಸ್ಯೆಗಳಿದ್ದು, ರೇಷನ್ ಕಾರ್ಡ್ ಆಧಾರಿತ ಪರಿಹಾರ ವಿತರಣೆ ವಿಳಂಬವಾಗುತ್ತಿದೆ. ಗ್ರಾಮವನ್ನು ಸಂಪೂರ್ಣವಾಗಿ ಸ್ಥಳಾಂತರ ಮಾಡಬೇಕಾದ ಅಗತ್ಯವಿದ್ದು ಸರ್ಕಾರ ಈ ಕುರಿತು ನಿರ್ಧಾರ ಕೈಗೊಳ್ಳಬೇಕಿದೆ. ನಾಳೆ ಸಹ ಮುಖ್ಯಮಂತ್ರಿಗಳು ಅಥಣಿ ತಾಲೂಕಿನ ದರೂರ ಗ್ರಾಮಕ್ಕೆ ಆಗಮಿಸುತ್ತಿದ್ದು ಸೂಕ್ತ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಬೇಕು. ಅಧಿಕಾರಿಗಳು ಗ್ರಾಮ ಸ್ಥಳಾಂತರ ಕುರಿತು ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ ಎಂದು ಆರೋಪಿಸಿದರು.

ಗ್ರಾಮದ ಸಮಸ್ಯೆಗಳ ಕುರಿತು ಸಿಎಂ ಬಿ.ಎಸ್ ಯಡಿಯೂರಪ್ಪ ಪರಿಹಾರದ ನೀಡಬೇಕು. ಇಲ್ಲದಿದ್ದರೆ ಮುಂಬರುವ ಚುನಾವಣೆಯನ್ನು ಸಮಸ್ತ ಗ್ರಾಮದ ಜನತೆ ಬಹಿಷ್ಕರಿಸುತ್ತೇವೆ. ಜನತೆಯ ಸಂಕಷ್ಟಕ್ಕೆ ಸ್ಪಂದಿಸುವುದು ಸರ್ಕಾರದ ಕರ್ತವ್ಯ. ಅಲ್ಲದೇ ನಮ್ಮನ್ನ ಸಂಕೋನಟ್ಟಿ ಗ್ರಾಮಕ್ಕೆ ಸ್ಥಳಾಂತರ ಮಾಡಿ ಆದೇಶ ನೀಡಬೇಕು. ಅಲ್ಲಿ ಮನೆಗಳನ್ನು ನಿರ್ಮಿಸಿಕೊಡಬೇಕು. ಗ್ರಾಮದ ಜನ ಈ ಕುರಿತು ಗ್ರಾಮ ಪಂಚಾಯಿತಿಗೆ ಮನವಿ ನೀಡಿದ್ದು ಸಿಎಂಗೆ‍ ಮನವಿ ಸಲ್ಲಿಸಲಿದ್ದೇವೆ ಎಂದರು.

Intro:ಗ್ರಾಮ ಸ್ಥಳಾಂತರಿಸಿ ಇಲ್ಲವೇ ಮುಂಬರುವ ಚುನಾವಣೆ ಬಹಿಷ್ಕರಿಸುತ್ತಿವೆ ಗ್ರಾಮಸ್ಥರಿಂದ ಎಚ್ಚರಿಕೆ
Body:
ಚಿಕ್ಕೋಡಿ ;

ಬೆಳಗಾವಿ‌ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳ ಗ್ರಾಮ ಪ್ರವಾಹದ ಸಂದರ್ಭದಲ್ಲಿ ಸಂಪೂರ್ಣ ಮುಳುಗಡೆಯಾಗುತ್ತದೆ ಜನರಿಗೆ ತೀವ್ರ ಸಂಕಷ್ಟ ಇದೆ. ಶೀಘ್ರ ಸ್ಥಳಾಂತರ ಆದೇಶ ನೀಡಿ. ನಮ್ಮನ್ನು ಸ್ಥಳಾಂತರ ಮಾಡದಿದ್ರೆ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಹುಲಗಬಾಳ ಗ್ರಾಮದ ಮುಖಂಡ ರಮೇಶಗೌಡ ಪಾಟೀಲ ಸರ್ಕಾರವನ್ನು ಎಚ್ಚರಿಸಿದ್ದಾರೆ.

ನಮ್ಮಗ್ರಾಮ ಹಲವಾರು ಸಮಸ್ಯೆಗಳಿಂದ ಕೂಡಿದೆ ರೇಷನ್ ಕಾರ್ಡ್ ಆಧಾರಿತ ಪರಿಹಾರ ವಿತರಣೆಯಲ್ಲಿ ಇನ್ನೂ ಪರಿಹಾರ ದೊರೆತಿಲ್ಲ. ಸಂಪೂರ್ಣ ಗ್ರಾಮವನ್ನು ಸ್ಥಳಾಂತರ ಮಾಡಬೇಕಾದ ಅಗತ್ಯವಿದ್ದು ಸರಕಾರ ಈ ಕುರಿತು ಯಾವ ನಿರ್ಧಾರ ಕೈಗೊಂಡಿಲ್ಲ.

ಶುಕ್ರವಾರ ಮುಖ್ಯಮಂತ್ರಿಗಳು ಅಥಣಿ  ತಾಲೂಕಿಗೆ ದರೂರ ಗ್ರಾಮಕ್ಕೆ ಆಗಮಿಸುತ್ತಿದ್ದು ಸೂಕ್ತ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಬೇಕು ಹಾಗೂ ನಮ್ಮ ಗ್ರಾಮ ಸ್ಥಳಾಂತರಕ್ಕೆ ಆದೇಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಅಧಿಕಾರಿಗಳು ಗ್ರಾಮ ಸ್ಥಳಾಂತರ ಕುರಿತು ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ ಎಂದು ಆರೋಪಿಸಿದರು.

ಹುಲಗಬಾಳ ಗ್ರಾಮದ ಗ್ರಾಮಸ್ಥರು ಪ್ರವಾಹದ ಸಂದರ್ಭದಲ್ಲಿ ನರಕಯಾತನೆ ಅನುಭವಿಸಿದ್ದು ಜನತೆ ಸಂಕಷ್ಟದಲ್ಲಿದ್ದಾರೆ. ಗ್ರಾಮದ ಸ್ಥಳಾಂತರ ಅಗತ್ಯವಾಗಿದ್ದು ಕೆಲವು ಜನರಿಗೆ ಹಣ ನೀಡಿದ್ದು  ಇನ್ನೂ  ಸಂಪೂರ್ಣ ಮುಳುಗಡೆಯಾಗದೆ ಇದ್ದುದು ವಿಪರ್ಯಾಸವಾಗಿದೆ .ಸಂಪೂರ್ಣ ಗ್ರಾಮದ  ಸಂಪೂರ್ಣ ಸ್ಥಳಾಂತರಕ್ಕೆ ನಾಳೆ ಅಥಣಿ ತಾಲೂಕಿಗೆ ಆಗಮಿಸುವ ಸಿಎಂ ಬಿ.ಎಸ್ ಯಡಿಯೂರಪ್ಪ ಆದೇಶ ನೀಡಬೇಕು ಹಾಗೂ ಸರಿಯಾದ ರೀತಿಯಲ್ಲಿ ಪ್ರವಾಹ ಸಂತ್ರಸ್ತರಿಗೆ ಪರಿಹಾರ ದೊರೆಯಬೇಕು. ದೊರೆಯದಿದ್ದರೆ ಮುಂಬರುವ ಚುನಾವಣೆಯನ್ನು ನಾವು ಸಮಸ್ತ ಗ್ರಾಮದ ಜನತೆ ಬಹಿಷ್ಕರಿಸುತ್ತೇವೆ.

ಹುಲಗಬಾಳ ಗ್ರಾಮ ಸಂಪೂರ್ಣ ಪ್ರವಾಹ ಪೀಡಿತವಾಗಿ ಸಾಕಷ್ಟು ಹಾನಿಯನ್ನು ಅನುಭವಿಸಿದೆ ಜನತೆ ಸಂಕಷ್ಟದಲ್ಲಿದ್ದಾರೆ ಸ್ಪಂದಿಸುವುದು ಸರಕಾರದ ಕರ್ತವ್ಯವಾಗಿದೆ.

ಮೊದಲ ಕಂತಾಗಿ 2 ಲಕ್ಷ ಹಣ ನೀಡಬೇಕು, ಅಲ್ಲದೇ ನಮ್ಮಗೆ ಸಂಕೋನಟ್ಟಿ ಗ್ರಾಮಕ್ಕೆ ಸ್ಥಳಾಂತರ ಮಾಡಿ ಆದೇಶ ನೀಡಬೇಕು. ಅಲ್ಲಿ ಮನೆಗಳನ್ನು ನಿರ್ಮಿಸಿಕೊಡಬೇಕು. ಗ್ರಾಮದ ಜನ ಈ ಕುರಿತು ಗ್ರಾಮ ಪಂಚಾಯಿತಿಗೆ ಮನವಿ ನೀಡಿದ್ದು ನಾಳೆ ಸಿಎಂ ಯಡಿಯೂರಪ್ಪನವರಿಗೆ‍ ಈ ಕುರಿತು ಮನವಿ ಸಲ್ಲಿಸಲಿದ್ದೇವೆ. ಸಿಎಂ ತಕ್ಷಣ ಈ ಕುರಿತು ಆದೇಶ ನೀಡಬೇಕು ಇಲ್ಲದಿದ್ದರೆ ಬರುವ ದಿನಮಾನದ ಚುನಾವಣೆಗಳನ್ನು ಬಹಿಷ್ಕರಿಸಲು ಗ್ರಾಮದ ಜನ ನಿರ್ಧರಿಸಿದ್ದಾರೆ.

ಬೈಟ್ 1 : ಸಂಜೀವಗೌಡ ಪಾಟೀಲ - ಹುಲಗಬಾಳಿ  ಗ್ರಾಮ ಪಂಚಾಯಿತಿ ಅಧ್ಯಕ್ಷ (ಮನವಿ ಪತ್ರ ಹಿಡಿದು ಮಾತನಾಡಿದವರು)

ಬೈಟ್ 2 : ರಮೇಶಗೌಡ ಪಾಟೀಲ್ - ಗ್ರಾಮದ ಮುಖಂಡ (ಸಿಂಗಲ್ ಆಗಿ‌ ಮಾತನಾಡಿದವರು)

ಬೈಟ್ 3 : ಹುಲಗಬಾಳ ಗ್ರಾಮದ ಸಂತ್ರಸ್ತೆ

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.