ಬೆಳಗಾವಿ: ಹುಂಚಾನಟ್ಟಿಯ ಜಯನಗರದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬೆಳಗಾವಿ ನಗರ ಸಿ.ಇ.ಎನ್ ಅಪರಾ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮಚ್ಚೆಯ ಜಯನಗರದ ರಾಹುಲ ಬಸವರಾಜ ಸುತಾರ (20) ಬಂಧಿತ ವ್ಯಕ್ತಿ. ಈತನಿಂದ 31,875 ರೂ. ಮೌಲ್ಯದ 2 ಕೆ.ಜಿ 125 ಗ್ರಾಂ. ಗಾಂಜಾ ಮತ್ತು ದ್ವಿಚಕ್ರವಾಹನ ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಹುಂಚಾನಟ್ಟಿಯ ಜಯನಗರದ ಬಳಿ ಮಾದಕ ವಸ್ತು ಮಾರಾಟ ಮಾಡುವುದರ ಜೊತೆಗೆ ಬೆಳಗಾವಿಯ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಪೂರೈಕೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಇದನ್ನೂ ಓದಿ :ರಷ್ಯಾದಲ್ಲಿ ಹಣಕಾಸು ಸೇವೆ ಸ್ಥಗಿತಗೊಳಿಸಿದ ಅಮೆರಿಕದ ವೀಸಾ, ಮಾಸ್ಟರ್ಕಾರ್ಡ್