ETV Bharat / city

ಆಗ ಸಹಿ ಈಗೇಕೆ ವಿರೋಧ?..ಬಿಜೆಪಿ 'ದಾಖಲೆ' ಬಾಣಕ್ಕೆ 'ಕೈ' ಗಲಿಬಿಲಿ..ಮಾಧುಸ್ವಾಮಿ-ಸಿದ್ದರಾಮಯ್ಯ 'ಮತಾಂತರ' ಜಟಾಪಟಿ - ಮತಾಂತರ ನಿಷೇಧ ವಿಧೇಯಕ ಚರ್ಚೆಯಲ್ಲಿ ಮಾಧುಸ್ವಾಮಿ, ಸಿದ್ದರಾಮಯ್ಯ ವಾರ್‌

Anti-conversion Bill Discussion In Assembly: ಮತಾಂತರ ನಿಷೇಧ ವಿಧೇಯಕ ಮೇಲಿನ ಚರ್ಚೆ ವೇಳೆ ಆಡಳಿತ- ವಿಪಕ್ಷ ನಾಯಕರ ನಡುವೆ ಮಾತಿನ ಚಕಮಕಿ ನಡೆದು ಸವಾಲು, ಪ್ರತಿ ಸವಾಲು ಹಾಕಿದ ಪ್ರಸಂಗಕ್ಕೆ ವಿಧಾನಸಭೆ ಸಾಕ್ಷಿಯಾಗಿದೆ. ಕಲಾಪದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ನಡುವಿನ ಮಾತಿನ ಸಮರದ ಸಂಪೂರ್ಣ ಮಾಹಿತಿ ಇಲ್ಲಿದೆ.

Debate on prohibition of conversion:  J.C. Madhuswamy - Siddaramaiah talking war in assembly
ಮತಾಂತರ ನಿಷೇಧ ವಿಧೇಯಕ ಮೇಲಿನ ಚರ್ಚೆ: ಸಚಿವ ಜೆ.ಸಿ. ಮಾಧುಸ್ವಾಮಿ - ವಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು, ಪ್ರತಿ ಸವಾಲು
author img

By

Published : Dec 23, 2021, 2:03 PM IST

Updated : Dec 23, 2021, 3:45 PM IST

ಸುವರ್ಣಸೌಧ(ಬೆಳಗಾವಿ): ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಕ ವಿಧೇಯಕ- 2021 ವಿಧಾನಸಭೆಯಲ್ಲಿ ಮಂಡಿಸಲಾಗಿದ್ದು, ವಿಧೇಯಕದ ಮೇಲಿನ ಚರ್ಚೆ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ನಡುವಿನ ಸವಾಲು, ಪ್ರತಿಸವಾಲಿಗೆ ಕಲಾಪ ಸಾಕ್ಷಿಯಾಯಿತು.

ವಿಧೇಯಕ ಕುರಿತು, ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಈ ಹಿಂದೆ 2014, 2016ರ ನವೆಂಬರ್ 16ರಂದು ಕಾಂಗ್ರೆಸ್ ಕಾನೂನು ಆಯೋಗಕ್ಕೆ ವಿಧೇಯಕವನ್ನು ಮಂಡಿಸುವ ಕುರಿತು ಬರೆದಿದ್ದ ಪತ್ರ ಮತ್ತು ಪರಿಶೀಲನಾ ಸಮಿತಿ ಮುಂದೆ ಬಂದಿದ್ದನ್ನು ಪ್ರಸ್ತಾಪಿಸಿ ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದರು. ಇದು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರಿ ಕೋಲಾಹಲ, ಆರೋಪ ಪ್ರತ್ಯಾರೋಪ ನಡೆದು ಕೆಲಕಾಲ ಕಲಾಪವನ್ನು ಮುಂದೂಡಲಾಯಿತು.

ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾನೂನು ಸಚಿವ ಜೆಸಿ ಮಾಧುಸ್ವಾಮಿ ಮಾತಿನ ಸಮರ

ಅಂದಿನ ಸಮಾಜ ಕಲ್ಯಾಣ ಸಚಿವರಾಗಿದ್ದ ಹೆಚ್‌. ಆಂಜನೇಯ ಅವರು ಕರಡು ನೀತಿಯನ್ನು ಸಿದ್ಧಪಡಿಸಲು ಕಾನೂನು ಆಯೋಗಕ್ಕೆ ಪತ್ರ ಬರೆದಿದ್ದರು. ಕಾನೂನು ಆಯೋಗವು ಕರಡನ್ನು ಪರಿಶೀಲಿಸಿ ಪರಿಶೀಲನಾ ಸಮಿತಿಯ ಮುಂದೆ ಇಟ್ಟಿತ್ತು. ನೀವೇ ನಿಮ್ಮ ಅಧಿಕಾರದ ಅವಧಿಯಲ್ಲಿ ಜಾರಿಗೆ ತರಲು ಉದ್ದೇಶಿಸಿದ್ದ ಕಾಯ್ದೆ ಇದು. ದಯವಿಟ್ಟು ಸಹಕಾರ ಕೊಡಿ ಎಂದು ಮಾಧುಸ್ವಾಮಿ ಮನವಿ ಮಾಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಮುಖಂಡರಾದ ಆರ್.ವಿ. ದೇಶಪಾಂಡೆ, ಕೆ.ಜೆ.ಜಾರ್ಜ್, ಮಾಜಿ ಸ್ಪೀಕರ್ ರಮೇಶ್‍ ಕುಮಾರ್ ಸೇರಿದಂತೆ ಕಾಂಗ್ರೆಸ್‍ನ ಎಲ್ಲ ಸದಸ್ಯರು ಕರಡು ಸಿದ್ಧಪಡಿಸಲು ಕಾನೂನು ಆಯೋಗಕ್ಕೆ ಪತ್ರ ಬರೆದಿದ್ದರು. ಕಡತವನ್ನು ಸದನದ ಮುಂದಿಡಿ ಎಂದು ಸವಾಲು ಹಾಕಿದರು.

'ಆಗ ಸಹಿ ಹಾಕಿ ಈಗೇಕೆ ವಿರೋಧ'

ಈ ಸವಾಲನ್ನು ಸ್ವೀಕರಿಸಿದ ಸಚಿವ ಜೆ.ಸಿ. ಮಾಧುಸ್ವಾಮಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಾನೂನು ಆಯೋಗ ಸಿದ್ಧಪಡಿಸಿದ್ದ ಕರಡು ಮತ್ತು ಪರಿಶೀಲನಾ ಸಮಿತಿಗೆ ಶಿಫಾರಸು ಮಾಡಿದ್ದ ಕಡತಗಳನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮುಂದಿಟ್ಟರು.

ನಿಮ್ಮ ಅಧಿಕಾರದ ಅವಧಿಯಲ್ಲಿ ಈ ಕಾಯ್ದೆಯನ್ನು ಜಾರಿಗೆ ತರಲು ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು. ಈಗ ನಾವು ಸಂವಿಧಾನದ ಚೌಕಟ್ಟಿನಡಿ ಮೂರ್ನಾಲ್ಕು ಅಂಶಗಳನ್ನು ಹೊಸದಾಗಿ ಸೇರ್ಪಡೆ ಮಾಡಿದ್ದೇವೆ. ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಪತ್ರವನ್ನು ಪರಿಶೀಲಿಸಿ ಸಹಿ ಹಾಕಿದ್ದಾರೆ. ಈಗೇಕೆ ವಿರೋಧ ಎಂದು ಮಾಧುಸ್ವಾಮಿ ಪ್ರಶ್ನಿಸಿದರು.

ಆಗ ಸಿದ್ದರಾಮಯ್ಯ, ನಾನು ಪರಿಶೀಲಿಸಿ ಕ್ರಮ ಕೈಗೊಳ್ಳಿ ಎಂದು ಹೇಳಿರುವುದಕ್ಕೆ ದಾಖಲೆ ಇದ್ದರೆ ಸದನದ ಮುಂದೆ ಇಡಿ ಎಂದು ಸವಾಲು ಹಾಕಿದರು.

ವಿಧಾನಸಭೆ ಕಲಾಪದಲ್ಲಿ ಮತಾಂತರ ನಿಷೇಧ ವಿಧೇಯಕ ಮೇಲಿನ ಚರ್ಚೆ

ಈ ವೇಳೆ ಸಭಾಧ್ಯಕ್ಷರು ಕಡತವನ್ನು ಓದಿ, ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದ ಹೆಚ್.ಆಂಜನೇಯ ಅವರು, ಅಂದಿನ ಕಾನೂನು ಮತ್ತು ಸಂಸಮದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಅವರು ಟಿಪ್ಪಣಿಯನ್ನು ಸಿದ್ಧಪಡಿಸಿ ಕಾನೂನು ಆಯೋಗಕ್ಕೆ ಪತ್ರ ಬರೆದಿದ್ದಾರೆ. ಆಯೋಗವು ಕರಡನ್ನು ಸಿದ್ಧಪಡಿಸಿ ಅಂತಿಮವಾಗಿ ಪರಿಶೀಲನಾ ಸಮಿತಿಗೆ ಕಳುಹಿಸಿದೆ ಎಂದರು.

ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ

ಪರಿಶೀಲನಾ ಸಮಿತಿಯು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಟಿಪ್ಪಣಿಯನ್ನು ಕಳುಹಿಸಿಕೊಟ್ಟಿದೆ. ಈ ಟಿಪ್ಪಣಿಗೆ ಅಂದಿನ ಸಿಎಂ ಸಿದ್ದರಾಮಯ್ಯನವರೇ ಸಹಿ ಹಾಕಿದ್ದಾರೆ ಎಂದು ಕಡತಗಳನ್ನು ಉಲ್ಲೇಖಿಸಿದರು. ಈ ಹಂತದಲ್ಲಿ ಮತ್ತೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಸದನದಲ್ಲಿ ಸಚಿವ ಮಾಧುಸ್ವಾಮಿ - ಸಿದ್ದರಾಮಯ್ಯ ಮಧ್ಯೆ ಸವಾಲು, ಪ್ರತಿ ಸವಾಲು

ಬಿಜೆಪಿ ಸದಸ್ಯರು, ಸ್ಪೀಕರ್ ಅವರು ಕಡತವನ್ನು ಓದುತ್ತಿದ್ದಂತೆ ಮೇಜು ಕುಟ್ಟಿ ಸ್ವಾಗತಿಸಿದರು. ಆದರೆ ಇದಕ್ಕೆ ಕಾಂಗ್ರೆಸ್ ಸದಸ್ಯರು ವಿರೋಧಿಸಿದರು. ಈ ವೇಳೆ ಮಾತನಾಡಿದ ರಮೇಶ್‍ ಕುಮಾರ್, ಮುಖ್ಯಮಂತ್ರಿಗಳು ಕಡತಕ್ಕೆ ಸಹಿ ಹಾಕಿರಬಹುದು. ಆದರೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಎಂದಾಗಲಿ, ಇಲ್ಲವೇ ಸಂಪುಟದಲ್ಲಿ ತೀರ್ಮಾನಿಸಿ ಎಂದು ಎಲ್ಲಿಯೂ ಹೇಳಿಲ್ಲ. ಟಿಪ್ಪಣಿಗೆ ಸಹಿ ಹಾಕಿದ ತಕ್ಷಣ ಅದನ್ನು ಒಪ್ಪಿಕೊಂಡಂತಾಗುವುದಿಲ್ಲ ಎಂದು ಸಿದ್ದರಾಮಯ್ಯನವರ ಬೆಂಬಲಕ್ಕೆ ನಿಂತರು.

ಇದನ್ನೂ ಓದಿ: ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಕಾಯ್ದೆ ಯಾವುದೇ ಧರ್ಮದ ವಿರುದ್ಧ ಇಲ್ಲ- ಗೃಹ ಸಚಿವ ಆರಗ ಜ್ಞಾನೇಂದ್ರ

Last Updated : Dec 23, 2021, 3:45 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.