ETV Bharat / city

ಒಂದೇ ಕುಟುಂಬದ 48 ಜನರ ಕೊವೀಡ್ ತಪಾಸಣೆ: ಬೆಚ್ಚಿ ಬಿದ್ದ ಬಾವನಸೌಂದತ್ತಿ ಗ್ರಾಮ - ಬೆಳಗಾವಿ ಕೋವಿಡ್​ ವರದಿ

ಕುಟುಂಬಸ್ಥರು ಮಹಾರಾಷ್ಟ್ರದ ಸಂಬಂಧಿಕರ ಮನೆಗೆ ಭೇಟಿ ನೀಡಿದ್ದ ಹಿನ್ನೆಲೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಅಧಿಕಾರಿಗಳ ತಂಡ ಬೀಡು ಬಿಟ್ಟಿದು, ಪಾಸಿಟಿವ್ ಬಂದ ಕುಟುಂಬದ ಸುತ್ತಮುತ್ತಿನ ಮನೆಯ 250 ಜನರ ಗಂಟಲು ದ್ರವ ಪರೀಕ್ಷೆಗೆ ಆರೋಗ್ಯ ಇಲಾಖೆ ಮುಂದಾಗಿದೆ.

Covoid inspection of 48 people of the same family
ಕೊವೀಡ್ ತಪಾಸಣೆ
author img

By

Published : Mar 13, 2021, 5:49 PM IST

Updated : Mar 13, 2021, 6:45 PM IST

ಚಿಕ್ಕೋಡಿ: ರಾಜ್ಯದಲ್ಲಿ ಮತ್ತೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಗಡಿ ಭಾಗದ ಜನರಲ್ಲಿ ಆತಂಕ ಮನೆ ಮಾಡಿದೆ. ಶುಕ್ರವಾರ ಒಂದೇ ಕುಟುಂಬದ ಐವರಲ್ಲಿ ಕೋವಿಡ್​ ಸೋಂಕು ಪತ್ತೆಯಾದ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬಾವನಸೌಂದತ್ತಿ ಗ್ರಾಮದಲ್ಲಿ ನಡೆದಿದೆ.

ಒಂದೇ ಕುಟುಂಬದ 48 ಜನರ ಕೊವೀಡ್ ತಪಾಸಣೆ

ಕುಟುಂಬದ 48 ಜನರಿರುವ ಅವಿಭಕ್ತ ಕುಟುಂಬದಲ್ಲಿ ಸದ್ಯ ಐವರಲ್ಲಿ ಕೊರೊನ ಪಾಸಿಟಿವ್ ದೃಢವಾಗಿದ್ದು, ಕುಟುಂಬಕ್ಕೆ ಆತಂಕ ಶುರುವಾಗಿದೆ. ಇಂದು ಗ್ರಾಮಕ್ಕೆ ಆರೋಗ್ಯ ಅಧಿಕಾರಿಗಳ ತಂಡ ಭೇಟಿ ನೀಡಿ, ಕೋವಿಡ್​​ ಪರೀಕ್ಷೆ ನಡೆಸಿತು.

ಓದಿ-ರಾಯಬಾಗ: ಒಂದೇ ಮನೆಯ ಐವರಿಗೆ ಕೊರೊನಾ

ಇನ್ನು ಕುಟುಂಬಸ್ಥರು ಮಹಾರಾಷ್ಟ್ರದ ಸಂಬಂಧಿಕರ ಮನೆಗೆ ಭೇಟಿ ನೀಡಿದ್ದ ಹಿನ್ನೆಲೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಅಧಿಕಾರಿಗಳ ತಂಡ ಬೀಡು ಬಿಟ್ಟಿದು, ಪಾಸಿಟಿವ್ ಬಂದ ಕುಟುಂಬದ ಸುತ್ತಮುತ್ತಿನ ಮನೆಯ 250 ಜನರ ಗಂಟಲು ದ್ರವ ಪರೀಕ್ಷೆಗೆ ಆರೋಗ್ಯ ಇಲಾಖೆ ಮುಂದಾಗಿದೆ.

ಮಹಾರಾಷ್ಟ್ರ ಭೇಟಿ ಹಿನ್ನೆಲೆ ಕೊರೊನಾ ಬಂದಿರುವ ಶಂಕೆ ಇದೆ. ಇಂದು ಕಳುಹಿಸಿರುವ ವರದಿ ಬಳಿಕ ಹೆಚ್ಚು ಜನರನ್ನ ಪರೀಕ್ಷೆಗೆ ಒಳಪಡಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ ಎಂದು ರಾಯಬಾಗ ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ಎಸ್.ಎಸ್. ಬಾನೆ ಅಭಿಪ್ರಾಯ ವ್ಯಕ್ತಪಡಿಸಿದರು.

Last Updated : Mar 13, 2021, 6:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.