ETV Bharat / city

ವಿವಾದಾತ್ಮಕ ನಕ್ಷೆ: ಎಂಇಎಸ್ ಮುಖಂಡನ ವಿರುದ್ಧ ಬೆಳಗಾವಿಯಲ್ಲಿ ಎಫ್ಐಆರ್ - ಬೆಳಗಾವಿ ವಿವಾದಿತ ನಕ್ಷೆ

ವಿವಾದಿತ ನಕ್ಷೆಯನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಉದ್ಧಟತನ ಮೆರೆದಿದ್ದ ಎಂಇಎಸ್ ಮುಖಂಡ ಶುಭಂ ಶೆಳಕೆ ವಿರುದ್ಧ ಬೆಳಗಾವಿಯ ಮಾಳಮಾರುತಿ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

ಎಂಇಎಸ್ ಮುಖಂಡನ ವಿರುದ್ಧ ಬೆಳಗಾವಿಯಲ್ಲಿ ಎಫ್ಐಆರ್

author img

By

Published : May 6, 2022, 10:22 AM IST

ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಕೆದಕಿದ್ದ ಎಂಇಎಸ್ ಮುಖಂಡ ಶುಭಂ ಶೆಳಕೆ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕರ್ನಾಟಕ ಗಡಿಭಾಗವನ್ನು ಮಹಾರಾಷ್ಟ್ರಕ್ಕೆ ಸೇರಿಸಿ ಎಂದು ವಿವಾದಿತ ನಕ್ಷೆ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ಕರವೇ ಕಾರ್ಯಕರ್ತ ವಿನಾಯಕ ಭೋವಿ ನೀಡಿದ ದೂರಿನ ಮೇರೆಗೆ ಮಾಳಮಾರುತಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಈತ ಮಾಡಿದ್ದೇನು? ಐಟಿ ಆ್ಯಕ್ಟ್ 2000(U/s-66), ಐಪಿಸಿ ಸೆಕ್ಷನ್ 1860(U/s-153B)ರಡಿ ಕೇಸ್ ದಾಖಲಾಗಿದೆ. ವಿವಾದಿತ ಪೋಸ್ಟ್, ವಿಡಿಯೋ ಹಾಕಿ ಗಡಿ ತಗಾದೆ ತೆಗೆದಿದ್ದ. ಕರ್ನಾಟಕದ ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ, ಭಾಲ್ಕಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿದ ರೀತಿಯ‌ ಗ್ರಾಫಿಕ್ ವಿಡಿಯೋ, ಫೋಟೋ ಹಂಚಿಕೊಂಡಿದ್ದಾನೆ.

ಮಹಾರಾಷ್ಟ್ರವಾದಿಗಳೇ ನಮಗೆ ಮನಃಪೂರ್ವಕವಾಗಿ ಮಹಾರಾಷ್ಟ್ರ ದಿನಕ್ಕೆ ಶುಭಕೋರಲು ಆಗುತ್ತಿಲ್ಲ. ಸಂಯುಕ್ತ ಮಹಾರಾಷ್ಟ್ರಕ್ಕೆ ಬೆಳಗಾವಿ ರಕ್ತ ಹೋರಾಟದ ಮುನ್ನುಡಿ ಬರೆದಿದೆ. ಬೆಳಗಾವಿ ಸೇರಿ ಗಡಿ ಭಾಗದ ಮರಾಠಿಗರು ನ್ಯಾಯಕ್ಕಾಗಿ ಕಾಯುತ್ತಿದ್ದೇವೆ ಎಂದು ವಿಡಿಯೋದಲ್ಲಿ ಹೇಳಿದ್ದಾನೆ. ಪೋಸ್ಟ್ ಡಿಲೀಟ್ ಮಾಡುವಂತೆ ಠಾಣೆಗೆ ಕರೆಸಿ ಪೊಲೀಸರು ಎಚ್ಚರಿಕೆ ಕೊಟ್ಟಿದ್ದರು. ಹೀಗಿದ್ದರೂ ಪೋಸ್ಟ್ ಡಿಲೀಟ್ ಮಾಡದೇ ಆರೋಪಿ ಶುಭಂ ಉದ್ಧಟತನ ಮೆರೆದಿದ್ದ.

ಇದನ್ನೂ ಓದಿ: ಸರ್ಕಾರಿ ‌ಕಚೇರಿಯಲ್ಲೂ ಎಂಇಎಸ್‌ನ ಶುಭಂ ಶೆಳಕೆ ಪುಂಡಾಟಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.