ಬೆಳಗಾವಿ : ಕಾಂಗ್ರೆಸ್ಗೆ ಹಿನ್ನಡೆಯಾದರೂ, ಜನರ ವಿಶ್ವಾಸವನ್ನು ಗಳಿಸಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರದ ಮಾಜಿ ಸಚಿವ ಸುದರ್ಶನ್ ನಾಚಿಅಪ್ಪಣ ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1920ರ ಕಾಂಗ್ರೆಸ್ಗೆ ತನ್ನದೇ ಆದ ಇತಿಹಾಸವಿದೆ. ದೇಶದಲ್ಲಿ ಕಾಂಗ್ರೆಸ್ ಸಮೃದ್ಧಿಯ ಆಡಳಿತ ನಡೆಸಿದೆ. ಇತ್ತೀಚೆಗೆ ಜನರ ವಿಶ್ವಾಸ ಗೆಲ್ಲುವಲ್ಲಿ ಅಲ್ಪ ಹಿನ್ನೆಡೆಯಾಗಿದೆ.
ಕಾಂಗ್ರೆಸ್ ಸೋಲು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ರಾಷ್ಟ್ರಕ್ಕೆ ಕೈ ಅನೇಕ ಕೊಡುಗೆ ನೀಡಿದೆ. ಸದ್ಯ ಅಧಿಕಾರಿಕ್ಕೆ ಬಂದಿರುವ ಬಿಜೆಪಿ, ಕಾಂಗ್ರೆಸ್ ಸೇವೆ ಬಗ್ಗೆ ಕೀಳಾಗಿ ಮಾತನಾಡುತ್ತಿದೆ. ರಾಷ್ಟ್ರಕ್ಕೆ ಸಮೃದ್ಧಿಯ ಆಡಳಿತ ನೀಡುವ ಏಕೈಕ ಪಕ್ಷವೆಂದರೆ ಕಾಂಗ್ರೆಸ್ ಮಾತ್ರ. ಅದನ್ನು ಅರಿತು ಬಿಜೆಪಿ ಮಾತನಾಡಬೇಕು ಎಂದರು.
ದೇಶದಲ್ಲಿ ಭ್ರಷ್ಟಾಚಾರ ಹಾಗೂ ಅನೈತಿಕ ಚಟುವಟಿಕೆಗಳಿಗೆ ಕಾಂಗ್ರೆಸ್ ಬ್ರೇಕ್ ಹಾಕಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಈ ಕೃತ್ಯಗಳು ಹೆಚ್ಚಾಗಿವೆ. ಅದನ್ನು ಮರೆಮಾಚಿ ಮತಬೇಟೆ ಆಡುತ್ತಿದೆ. ಇವರಿಂದ ದೇಶದ ಜನತೆಗೆ ಭದ್ರತೆ ಇಲ್ಲವಾಗಿದೆ ಎಂದು ಎಚ್ಚರಿಸಿದರು. ಸದಸ್ಯತ್ವ ಅಭಿಯಾನ ಸಭೆ ನಡೆಸಲಾಗುತ್ತಿದೆ. ಕಾಂಗ್ರೆಸ್ ಒಂದು ಮಾಸ್ ಬೇಸ್ ಪಕ್ಷ, ಸಮಾಜ ಸೇವೆ ನಿಂತಿರುವುದು ಕಾಂಗ್ರೆಸ್ಗೆ ಅಲ್ಪ ಹಿನ್ನಡೆಯಾಗಿದೆ.
ಸೋಲನ್ನು ಸಹಿಸಿಕೊಂಡು ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಸದಸ್ಯತ್ವ ಅಭಿಯಾನ ಎಲ್ಲಾ ಜಿಲ್ಲೆಗಳಲ್ಲಿ ಆರಂಭವಾಗಿದೆ. ಕಾಂಗ್ರೆಸ್ಗೆ ಹಿನ್ನಡೆಯಾದರೂ, ಚೇತರಿಸಿಕೊಂಡು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ದುರಾಡಳಿತ, ಭ್ರಷ್ಟಾಚಾರಕ್ಕೆ ಜನರು ಬೇಸತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಚಾಟಿ ಬೀಸಿದರು.