ಬೆಳಗಾವಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ತವರು ಜಿಲ್ಲೆಯಲ್ಲಿ ಭಾವುಕರಾಗಿ ಕಣ್ಣೀರು ಹಾಕಿರುವುದು ಮುಂದೆ ಜಾಗ (ಸಿಎಂ ಸ್ಥಾನ) ಖಾಲಿ ಮಾಡುವ ಮುನ್ಸೂಚನೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಸಿ.ಎಂ. ಇಬ್ರಾಹಿಂ ತಿಳಿಸಿದರು.
ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಸಿಎಂ ಭಾವನಾತ್ಮಕ ಭಾಷಣ ವಿಚಾರವಾಗಿ ಪ್ರತಿಕ್ರಿಯಿಸಿ, ಅಧಿಕಾರ ಶಾಶ್ವತವಲ್ಲ ಅಂತ ಹೇಳ್ತಾರೆ. ಜೀವನವೇ ಶಾಶ್ವತವಲ್ಲ, ಇನ್ನು ಕುರ್ಚಿ ಯಾವ ಶಾಶ್ವತ?. ಅದನ್ನು ನೋಡಿ ಬಸವಕೃಪದವರು ಬಸವಕೃಪದಲ್ಲೇ ಇರಿ. ಕೇಶವ ಕೃಪ ನಂಬಿಹೋದ್ರೆ ಅಲ್ಲೂ ಇಲ್ಲ, ಇಲ್ಲೂ ಇಲ್ಲ. ನಾ ಘರ್ ಕಾ, ನಾ ಘಾಟ್ ಕಾ, ನಾ ಬಸ್ ಸ್ಟಾಂಡ್ ಕಾ ಆಗುತ್ತದೆ ಎಂದು ವ್ಯಂಗ್ಯವಾಡಿದರು.
ವಾಟಾಳ್ ನೋಡಿ ಕಲಿರಿ : ಬೆಳಗಾವಿಯಲ್ಲಿ ಎಂಇಎಸ್ ಗಲಾಟೆ ವಿಚಾರವಾಗಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರಿಗೆ ಎಂಇಎಸ್ ಬಗ್ಗೆ ಮಾತನಾಡಲು ಧಮ್ ಇಲ್ಲ. ವಾಟಾಳ್ ನಾಗರಾಜ್ ಗೆ ಇರುವ ಧೈರ್ಯ ಇಲ್ಲಿನ ನಾಯಕರಿಗ ಇಲ್ಲ. ಬೆಂಗಳೂರಿಗೆ ಹೋಗಿ ನಾರಾಯಣಗೌಡರನ್ನ ನೋಡಿ. ವಾಟಾಳ್ ನಾಗಾರಾಜ್ ಗಿರುವ ಬುದ್ಧಿ ಇವರಿಗಿಲ್ಲ ಎಂದು ಕಿಡಿಕಾರಿದರು.
ಪೊಲೀಸರಿಗೆ ಸ್ವಾತಂತ್ರ್ಯ ಕೊಟ್ಟು ನೋಡಿ : ರಾಯಣ್ಣ ಮೂರ್ತಿ ಧ್ವಂಸ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಲಾಯ ತಸ್ಮೈ ನಮಃ. ನಾವು ಮಾಡಿದ್ದೇವೆ ಎಂದು ಧೈರ್ಯವಾಗಿ ಹೇಳ್ತಿಲ್ಲ ಅವರು. ಪೊಲೀಸರು ಬೆಳಗಾವಿಯಲ್ಲಿ ಒಳ್ಳೆ ಕೆಲಸ ಮಾಡ್ತಿದ್ದಾರೆ. ಪೊಲೀಸರಿಗೆ ಫ್ರೀಡಂ ಕೊಡಿ. 24 ಗಂಟೆಯಲ್ಲಿ ರಿಸಲ್ಟ್ ಕೊಡ್ತಾರೆ ಎಂದು ಸಿ.ಎಂ ಇಬ್ರಾಹಿಂ ಹೇಳಿದ್ರು.