ಬೆಳಗಾವಿ: ದೋಷಪೂರಿತ ಸೈಲೆನ್ಸ್ ಅಳವಡಿಸಿ ಓಡಾಡುವ ಮೂಲಕ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ನಗರದ ಬುಲೆಟ್ ಸವಾರರಿಗೆ ಬೆಳಗಾವಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ನಗರದಲ್ಲಿ ಬುಲೆಟ್ಗಳಿಂದ ಹೊರಬರುವ ಕರ್ಕಶ ಶಬ್ದದಿಂದ ಮಕ್ಕಳು ಹಾಗೂ ನಾಗರಿಕರಿಗೆ ತೊಂದರೆ ಉಂಟಾಗುತ್ತಿತ್ತು. ಈ ಬಗ್ಗೆ ಸಾರ್ವಜನಿಕರು ನಗರ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ನಗರ ಪೊಲೀಸರು ವಿಶೇಷ ಕಾರ್ಯಾಚರಣೆ ಮೂಲಕ 13 ಸವಾರರ ಮೇಲೆ ಪ್ರಕರಣ ದಾಖಲಿಸಿ ಬುಲೆಟ್ಗಳನ್ನು ವಶಕ್ಕೆ ಪಡೆದು ಆರ್ಟಿಒಗೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕೂಡ ಕಾರ್ಯಾಚರಣೆ ಮುಂದುವರೆಸಲು ಪೊಲೀಸರು ನಿರ್ಧರಿಸಿದ್ದಾರೆ.
ನಗರದಲ್ಲಿ 10 ಸಾವಿರಕ್ಕೂ ಅಧಿಕ ಜನರು ಬುಲೆಟ್ ಹೊಂದಿದ್ದಾರೆ. ಬಹುತೇಕರು ದೋಷಪೂರಿತ ಸೈಲೆನ್ಸರ್ ಅಳವಡಿಸಿಕೊಂಡಿದ್ದಾರೆ. ಈ ಎಲ್ಲರ ಬಗ್ಗೆಯೂ ಪೊಲೀಸರು ನಿಗಾ ಇಟ್ಟಿದ್ದಾರೆ.
(ಬುಲೆಟ್ ರೈಡ್, ಕುದುರೆ ಸವಾರಿಗೆ ಸೈ ಎಂದ ಮಹಿಳೆ...ಪುಟ್ಟ ಹಳ್ಳಿಯ ಸೀರೆಯುಟ್ಟ ನಾರಿಯ ಸಾಹಸ)