ETV Bharat / city

ಬಾಲಕನ ಅಪಹರಿಸಿ ಹಣಕ್ಕೆ ಬೇಡಿಕೆ ಪ್ರಕರಣ: 6 ಆರೋಪಿಗಳು ಆರೆಸ್ಟ್

ಅಪ್ರಾಪ್ತ ಬಾಲಕನ ಅಪಹರಣ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರು ಜನ ಆರೋಪಿಗಳನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

Boy kidnapped and demanded money
6 ಜನ ಆರೋಪಿಗಳು ಆರೆಸ್ಟ್
author img

By

Published : Aug 18, 2022, 9:55 PM IST

ಬೆಳಗಾವಿ: ಸಂಕೇಶ್ವರ ಪಟ್ಟಣದಲ್ಲಿ ಶಾಲೆಯಿಂದ ಮನೆಗೆ ಹೋಗುತ್ತಿದ್ದ 14 ವರ್ಷದ ಬಾಲಕನನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರು ಜನ ಆರೋಪಿಗಳನ್ನು ಇಲ್ಲಿನ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪಟ್ಟಣದ ನಿವಾಸಿ ಪ್ರಸಾದ ರಾವುತ್ (20), ನಿಪ್ಪಾಣಿ ತಾಲೂಕಿನ ಅಕ್ಕೋಳ ಗ್ರಾಮದ ದೀಪಕ ಚೀಲವಾರ (21), ಬೆಳಗಾವಿಯ ವಂಟಮೂರಿ ಕಾಲೋನಿಯ ರಾಮತೀರ್ಥ ನಗರದ ಸುಲ್ತಾನರಾಜು ಮುಜಾವರ (19), ರಮೇಶ ಯಲಪ್ಪಾ ಅಚಗತ್ತಿ (19), ನಿಪ್ಪಾಣಿಯ ಡಾಲರ್ ಕಾಲೋನಿ ಸೌರಭ ತಳವಾರ (22) ಹಾಗೂ ವಿನಾಯಕ ಪಂಡರಿನಾಥ ಪಾಂಡವ (23) ಬಂಧಿತರು‌.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ

ಪ್ರಕರಣದ ಹಿನ್ನೆಲೆ: ಬಂಧಿತರು ಆ.02 ರಂದು ಸಂಕೇಶ್ವರ ಪಟ್ಟಣದಲ್ಲಿ ಟ್ಯೂಷನ್ ಮುಗಿಸಿಕೊಂಡು ಬರುತ್ತಿದ್ದ 14 ವರ್ಷದ ಅಪ್ರಾಪ್ತ ಬಾಲಕ ಭಾಸ್ಕರ ಪ್ರಕಾಶ ಕಾಕಡೆ ಎಂಬುವವರನ್ನು ಅಪಹರಿಸಿದ್ದರು. ಬಾಲಕನನ್ನು ಪುಸಲಾಯಿಸಿ ನಿಮ್ಮ ತಂದೆಯನ್ನು ನಿಪ್ಪಾಣಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕರೆದುಕೊಂಡು ಹೋಗಿದ್ದರು. ಇದಾದ ಬಳಿಕ ಬಾಲಕ ತಂದೆಗೆ ಫೋನ್ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಪ್ರಕರಣ ದಾಖಲು: ಇತ್ತ ಮಗ ಮನೆಗೆ ಬರದಿದ್ದಾಗ ಪೋಷಕರು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಜಾಡು ಹಿಡಿದ ಪೊಲೀಸರು ಗಡಿಯಲ್ಲಿ ತೀವ್ರ ಕಟ್ಟೆಚರ ವಹಿಸಿದ್ದರು. ಇತ್ತ ಪೊಲೀಸರು ಅಲರ್ಟ್ ಆಗುತ್ತಿದ್ದಂತೆ ಅಪಹರಿಸಿದ್ದ ಬಾಲಕನನ್ನು ನಿರ್ಜನ ಪ್ರದೇಶವೊಂದರಲ್ಲಿ ಬಿಟ್ಟು ಪರಾರಿ ಆಗಿದ್ದರು.

ಇದನ್ನೂ ಓದಿ: ಬೆಳಗಾವಿ ಸಂಬಂಧಿಕರ ಮನೆಗೆ ಬಂದಿದ್ದ ಯುವತಿ ನಾಪತ್ತೆ

ಬೈಕ್ ಮತ್ತು ಮೊಬೈಲ್​ ವಶಕ್ಕೆ: ಇದಾದ ಕೆಲವೇ ಗಂಟೆಗಳಲ್ಲಿ ಬಾಲಕನನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಲ್ಲದೇ ಪರಾರಿ ಆಗಿದ್ದ ಆರೋಪಿಗಳನ್ನು ಪತ್ತೆ ಮಾಡಿ ಪೊಲೀಸರು ಜೈಲಿಗಟ್ಟಿದ್ದಾರೆ. ಆರೋಪಿತರ ಬಳಿಯಿದ್ದ 3 ಮೋಟಾರ್​ ಸೈಕಲ್‌ಗಳನ್ನು ಹಾಗೂ 9 ಮೊಬೈಲ್‌ಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ತೀವ್ರ ಕಾರ್ಯಾಚರಣೆ ನಡೆಸಿ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಅಭಿನಂದಿಸಿದ್ದಾರೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.