ETV Bharat / city

ಗೋಕಾಕ: 9 ತಿಂಗಳ ಹಿಂದೆ ನಡೆದ ಯುವಕನ ಕೊಲೆ ಪ್ರಕರಣಕ್ಕೆ ದಿನಕ್ಕೊಂದು ತಿರುವು

ಮಂಜುನಾಥ್ ಮುರುಕಿಭಾವಿ ಕೊಲೆ ಪ್ರಕರಣ ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಕೊಲೆಗೆ ಬಬಲಿ ಕುಟುಂಬದ ಯುವತಿಯೊಂದಿಗಿನ ಪ್ರೀತಿಯೇ ಕಾರಣ ಎಂದು ಮಂಜುನಾಥ್ ಕುಟುಂಬಸ್ಥರು ದೂರಿದ್ದಾರೆ.

Belgaum Manjunath murder case
ಸಿದ್ದವ್ವ ಕುರಿ ಮಾಧ್ಯಮಗೋಷ್ಠಿ
author img

By

Published : Apr 27, 2022, 10:28 PM IST

ಬೆಳಗಾವಿ: ಮಂಜುನಾಥ್ ಮುರುಕಿಭಾವಿ ಕೊಲೆ ಪ್ರಕರಣ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಕೊಲೆಯಾದ ಮೃತ ಮಂಜು ಮುರಕಿಭಾವಿ ಕುಟುಂಬಸ್ಥರಿಂದ ಸುದ್ದಿಗೋಷ್ಠಿ ನಡೆಸಿ ಬಬಲಿ ಕುಟುಂಬದ ಯುವತಿ ಮತ್ತು ಮಂಜುನಾಥ್ ಜೊತೆಗಿರುವ ಫೋಟೋ ಬಿಡುಗಡೆ ಮಾಡಿದ್ದಾರೆ. ಪ್ರೀತಿ ವಿಚಾರಕ್ಕೆ ಬಬಲಿ ಕುಟುಂಬದವರು ಮಂಜುನಾಥ್​ನನ್ನು ಕೊಲೆ ಮಾಡಿದ್ದಾರೆ. ಈಗ ಕುಟುಂಬದವರು ಪ್ರಕರಣದ ದಿಕ್ಕು ಬದಲಾಯಿಸಲು ಪೊಲೀಸರ ಮಾಲೆ ಆರೋಪ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಕಳೆದ 2021ರ ಜುಲೈ 17ರಂದು ಗೋಕಾಕನ ಮಹಾಂತೇಶ ನಗರದ ಬಡಾವಣೆಯಲ್ಲಿ ಮಂಜುನಾಥ ಮುರಕಿಭಾವಿ ಕೊಲೆಯಾಗಿತ್ತು. ತಲೆ ಮೇಲೆ ಕಲ್ಲು ಎತ್ತಿ ಹಾಕಿ ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿದ್ದರು. ಪ್ರಕರಣ ಸಂಬಂಧ ಗೋಕಾಕ್‌ನ ಸಿದ್ದಪ್ಪ ಬಬಲಿ ಹಾಗೂ ಮಕ್ಕಳಾದ ಕೃಷ್ಣಾ, ಅರ್ಜುನ್ ಬಂಧಿಸಲಾಗಿದೆ. ಸಿದ್ದಪ್ಪ ಬಬಲಿ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ.

ಇಂದು ಮಂಜುನಾಥ್​ ಮುರಕಿಭಾವಿ ಕುಟುಂಬಸ್ಥರು ಸುದ್ದಿಗೋಷ್ಠಿ ನಡೆಸಿ ಪೊಲೀಸರು ಸರಿಯಾಗಿ ತನಿಖೆ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಬಲಿ ಕುಟುಂಬಸ್ಥರಿಂದ ನಮಗೆ ಜೀವ ಬೇದರಿಕೆ‌ ಇದೆ. ಮೃತ ಮಂಜು ಮುಕರಿಭಾವಿ ಹಾಗೂ ಬಬಲಿ ಕುಟುಂಬದ ಯುವತಿ ಪರಸ್ಪರ ‌ಪ್ರೀತಿ‌ ಮಾಡುತ್ತಿದ್ದರು. ಅದೇ ಸೇಡನ್ನು ಇಟ್ಟುಕೊಂಡು ಮಂಜುನಾಥ ಮುರಕಿಭಾವಿಯನ್ನು ಕೊಲೆ ಮಾಡಲಾಗಿದೆ‌ ಎಂದು ದೂರಿದ್ದಾರೆ.

ಇದನ್ನೂ ಓದಿ: ಕೊಲೆ ಪ್ರಕರಣದಲ್ಲಿ ಅಮಾಯಕರಿಂದ ₹15 ಲಕ್ಷ ಹಣ ಪೀಕಿದ್ರಾ ಗೋಕಾಕ್ ಸಿಪಿಐ,ಪಿಎಸ್‍ಐ?

ಕೊಲೆ ಪ್ರಕರಣದಲ್ಲಿ ಅಮಾಯಕರ ಬಂಧಿಸಿ ₹15 ಲಕ್ಷ ಲಂಚ ಪಡೆದ ಆರೋಪ : ಹೆಚ್ಚುವರಿ ಎಸ್​ಪಿ ನೇತೃತ್ವದಲ್ಲಿ ತನಿಖೆಗೆ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.