ETV Bharat / city

ಠೇವಣಿ ಹಣ ಮರಳಿಸಲಿಲ್ಲ,ಚಿಕಿತ್ಸೆಗೆ ದುಡ್ಡಿಲ್ಲ! ನೊಂದ ಬ್ಯಾಂಕ್​ ಗ್ರಾಹಕ ಸಾವು! - undefined

ಅವಧಿ ಮುಗಿದರೂ ಠೇವಣಿ ‌ಹಣ ಮರಳಿಸಿಲ್ಲವೆಂದು ನೊಂದ ಗ್ರಾಹಕರೊಬ್ಬರು ಮೃತಪಟ್ಟಿರುವ ಘಟನೆ ಬೆಳಗಾವಿಯ ಗೋಕಾಕ​ದಲ್ಲಿ ನಡೆದಿದೆ. ಹೀಗಾಗಿ ನೊಂದ ಸಂಬಂಧಿಕರು ಹಾಗೂ ಇತರ ಗ್ರಾಹಕರು ಸೊಸೈಟಿ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿದ್ದಾರೆ.

ಬ್ಯಾಂಕ್​ ಗ್ರಾಹಕ ಸಾವು
author img

By

Published : Jun 9, 2019, 3:57 PM IST

ಬೆಳಗಾವಿ: ಠೇವಣಿ ಹಣ ಮರಳಿಸದ್ದಕ್ಕೆ ನೊಂದ ಗ್ರಾಹಕರೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಗೋಕಾಕ​ದಲ್ಲಿ ನಡೆದಿದೆ.

ಬೆಳಗಾವಿಯ ಗೋಕಾಕದಲ್ಲಿ ಬ್ಯಾಂಕ್​ ಗ್ರಾಹಕ ಸಾವು

ಗೋಕಾಕಿನ ಜಗದ್ಗುರು ರೇಣುಕಾಚಾರ್ಯ ಮಹಿಳಾ ಪತ್ತಿನ ಸಹಕಾರಿ ಸೊಸೈಟಿ, ಅವಧಿ ಮುಗಿದರೂ ಗ್ರಾಹಕರಿಗೆ ಠೇವಣಿ ‌ಹಣ ಮರಳಿಸಿಲ್ಲ. ಹೀಗಾಗಿ ಚಿಕಿತ್ಸೆಗೆ ಹಣ ಇಲ್ಲದೇ ಗೋಕಾಕ್​ನ ಬಸವರಾಜ್ ಆದರಗಿ (40) ಮೃತಪಟ್ಟಿದ್ದಾರೆ‌.

ಹೀಗಾಗಿ ನೊಂದ ಸಂಬಂಧಿಕರು ಹಾಗೂ ಇತರ ಗ್ರಾಹಕರು ಸೊಸೈಟಿ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿದರು.‌ ಈ ಸೊಸೈಟಿಯಿಂದ ಬಸವರಾಜ್​ಗೆ​ 3,70,000 ರೂ. ಠೇವಣಿ ಹಣ ಬರಬೇಕಿತ್ತು. ಹಣ ನೀಡದೆ ಸೊಸೈಟಿಯ ಆಡಳಿತ ಮಂಡಳಿ ಗ್ರಾಹಕರಿಗೆ ಸತಾಯಿಸುತ್ತಿದೆ. ಈಗಾಗಲೇ ಠೇವಣಿ ಹಣ ಸಿಗದೆ ನಾಲ್ವರು ಮೃತಪಟ್ಟಿದ್ದಾರೆ ಎಂದು ಗ್ರಾಹಕರು ತಮ್ಮ ಅಳಲು ತೋಡಿಕೊಂಡಿದ್ದಾರೆ‌.

ಗೋಕಾಕ್​ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

sample description

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.