ETV Bharat / city

ಕುಂದಾನಗರಿಗೆ 'ಶಾ' ಆಗಮನ, ನಗರದೆಲ್ಲೆಡೆ ಪೊಲೀಸ್ ಸರ್ಪಗಾವಲು - ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್

ಸಮಾವೇಶದಲ್ಲಿ ಒಟ್ಟು 15 ಎಸ್​​ಪಿ, 53 ಡಿಎಸ್​​ಪಿ, 118 ಸಿಪಿಐ, ಪಿಐ, 235 ಪಿಎಸ್ಐ, 350 ಎಎಸ್ಐ ಹಾಗೂ 2,380 ಎಚ್​​ಸಿ, ಪಿಸಿ ಭದ್ರತೆಗೆ ನಿಯೋಜನೆ ಮಾಡಿದ್ದಾರೆ. ವಿಶೇಷ ಘಟಕಗಳಾದ ಕೆಎಸ್‌ಆರ್‌ಪಿ, ಕೆಎಸ್‌ಐಎಸ್‌ಎಫ್ -16, ಎಎಸ್‌ಸಿ-10, ಸಿಆರ್‌ಪಿಎಫ್, ಜಡಿಡಿಎಸ್, ಎಫ್‌ಪಿಐ, ಸಿಐಡಿ, ರಾಜ್ಯಗುಪ್ತವಾರ್ತೆ, ಇಂಟರನಲ್ ಸೆಕ್ಯುರಿಟಿ ಘಟಕದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ನಿಯೋಜಿಸಲಾಗಿದೆ.

amit shah Arrival in Belgaum tomorrow Security news
ಗೃಹ ಸಚಿವ ಅಮಿತ್ ಶಾ ಆಗಮನ
author img

By

Published : Jan 16, 2021, 7:24 PM IST

ಬೆಳಗಾವಿ: ನಾಳೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಜನಸೇವಕ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ಗೃಹ ಸಚಿವ ಅಮಿತ್ ಶಾ ಆಗಮನ ಹಿನ್ನೆಲೆ, ಕುಂದಾನಗರಿಯ ಪ್ರಮುಖ‌ ನಗರ ಸೇರಿದಂತೆ ಅಮಿತ್‌ ಶಾ ಸಂಚರಿಸುವ ಮಾರ್ಗಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಗೃಹ ಸಚಿವ ಅಮಿತ್ ಶಾ ಆಗಮನ

ಓದಿ: ನಾಳೆ ಬೆಳಗಾವಿಗೆ ಚಾಣಕ್ಯ: ಅಸಮಾಧಾನಿತರ ನೋವಿಗೆ ಅಮಿತ್ ಶಾ ಮುಲಾಮು!

ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಜನ ಸೇವಕ್ ಸಮಾವೇಶ ಸಮಾರಂಭದಲ್ಲಿ ಅಮಿತ್ ಶಾ ಸೇರಿದಂತೆ ರಾಜ್ಯದ ಮುಖ್ಯಮಂತ್ರಿಗಳು, ಶಾಸಕರು, ಮಂತ್ರಿಗಳು, ಸಂಸದರು ಭಾಗಿಯಾಗುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ. ಅದಕ್ಕಾಗಿ ರಾಜ್ಯದ ವಿವಿಧ ಪೊಲೀಸ್ ಘಟಕಗಳಿಂದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ‌ನಿಯೋಜನೆ ಮಾಡಲಾಗಿದೆ.

ನಾಳೆ ನಡೆಯುವ ಸಮಾವೇಶದಲ್ಲಿ ಒಟ್ಟು 15 ಎಸ್​​ಪಿ, 53 ಡಿಎಸ್​​ಪಿ, 118 ಸಿಪಿಐ, ಪಿಐ, 235 ಪಿಎಸ್ಐ, 350 ಎಎಸ್ಐ ಹಾಗೂ 2380 ಎಚ್​​ಸಿ, ಪಿಸಿ ಭದ್ರತೆಗೆ ನಿಯೋಜನೆ ಮಾಡಿದ್ದಾರೆ. ವಿಶೇಷ ಘಟಕಗಳಾದ ಕೆಎಸ್‌ಆರ್‌ಪಿ, ಕೆಎಸ್‌ಐಎಸ್‌ಎಫ್ -16, ಎಎಸ್‌ಸಿ-10, ಸಿಆರ್‌ಪಿಎಫ್, ಜಡಿಡಿಎಸ್, ಎಫ್‌ಪಿಐ, ಸಿಐಡಿ, ರಾಜ್ಯ ಗುಪ್ತವಾರ್ತೆ, ಇಂಟರನಲ್ ಸೆಕ್ಯುರಿಟಿ ಘಟಕದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಬೆಳಿಗ್ಗೆ 7 ಗಂಟೆಯಿಂದ ಕಾರ್ಯಕ್ರಮ ಮುಗಿಯುವರೆಗೂ ಸೂಕ್ತ ಕಾನೂನು ಸುವ್ಯವಸ್ಥೆಯ ಎಲ್ಲ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇದಲ್ಲದೇ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಸುಗಮ ವಾಹನ ಸಂಚಾರಕ್ಕಾಗಿ ಎಲ್ಲ ಮಾದರಿಯ ವಾಹನಗಳ ಸಂಚಾರ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈ ವೇಳೆ ಬೆಳಗಾವಿ ಎಸ್​​ಪಿ ಲಕ್ಷ್ಮಣ ನಿಂಬರಗಿ ಭದ್ರತೆ ಪರಿಶೀಲನೆ ನಡೆಸಿ ಸಲಹೆ ಸೂಚನೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.