ETV Bharat / city

ವಂಚನೆ ಆರೋಪಿ ಯುವರಾಜ್ ನನ್ನನ್ನೊಮ್ಮೆ ಭೇಟಿಯಾಗಿದ್ದ: ಡಿಸಿಎಂ ಲಕ್ಷ್ಮಣ ಸವದಿ

ವಂಚನೆ ಪ್ರಕರಣದ ಆರೋಪದಡಿ ಬಂಧಿತನಾಗಿರುವ ಯುವರಾಜ್ ಎಂಬಾತ ನನ್ನನ್ನು ಒಮ್ಮೆ ಭೇಟಿಯಾಗಿದ್ದ. ಸಾವಿರಾರು ಜನ ನಮ್ಮನ್ನು ಬಂದು ಭೇಟಿಯಾಗುತ್ತಾರೆ. ಆದರೆ, ಯುವರಾಜ್ ನಮ್ಮ ಮುಂದೆ ಆರ್​ಎಸ್‌ಎಸ್ ಮುಖಂಡ, ಬಿಜೆಪಿ ಮುಖಂಡ ಅಂತ ಎಂದೂ ಹೇಳಿಲ್ಲ. ಬೇರೆಯವರ ಎದುರು ಆರ್‌ಎಸ್‌ಎಸ್ ಮುಖಂಡ ಅಂತ ಹೇಳಿದ್ದಾನೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದ್ದಾರೆ.

author img

By

Published : Jan 8, 2021, 2:27 PM IST

accused-yuvraj-meet-me-once-dcm-lakshmana-sawadi
ವಂಚನೆ ಆರೋಪಿ ಯುವರಾಜ್ ನನ್ನನ್ನೊಮ್ಮೆ ಭೇಟಿಯಾಗಿದ್ದ: ಡಿಸಿಎಂ ಲಕ್ಷ್ಮಣ ಸವದಿ

ಬೆಳಗಾವಿ: ವಂಚನೆ ಪ್ರಕರಣದ ಆರೋಪದಡಿ ಬಂಧಿತನಾಗಿರುವ ಯುವರಾಜ್ ಎಂಬಾತ ನನ್ನನ್ನು ಒಮ್ಮೆ ಭೇಟಿಯಾಗಿ, ವಿಶ್​ ಮಾಡಿ ಹೋಗಿದ್ದ ಎಂದು ಡಿಸಿಎಂ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.

ಆರ್‌ಎಸ್‌ಎಸ್ ಮುಖಂಡ ಎಂದು ಯುವರಾಜ್ ಹಲವರಿಗೆ ಮೋಸ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯುವರಾಜ್ ಅನೇಕ ಕಡೆ ನಾನು ಬಿಜೆಪಿಯಲ್ಲಿ ಕೆಲಸ ಮಾಡಿದ್ದೇನೆ, ಆರ್‌ಎಸ್‌ಎಸ್‌ನಲ್ಲಿ ಕೆಲಸ ಮಾಡಿದ್ದೇನೆ ಅಂತ ಹೇಳಿಕೊಂಡಿದ್ದನು. ಆದರೀಗ ಅವನು ನಕಲಿ ಎಂಬುವುದು ಬಯಲಿಗೆ ಬಂದಿದೆ. ಸಾವಿರಾರು ಜನ ನಮ್ಮನ್ನು ಬಂದು ಭೇಟಿಯಾಗುತ್ತಾರೆ. ಆದರೆ, ಯುವರಾಜ್ ನಮ್ಮ ಮುಂದೆ ಆರ್​ಎಸ್‌ಎಸ್ ಮುಖಂಡ, ಬಿಜೆಪಿ ಮುಖಂಡ ಅಂತ ಎಂದೂ ಹೇಳಿಲ್ಲ. ಬೇರೆಯವರ ಎದುರು ಆರ್‌ಎಸ್‌ಎಸ್ ಮುಖಂಡ ಅಂತ ಹೇಳಿದ್ದಾನೆ.

ಬೆಂಗಳೂರಿಗೆ ಹೋದಾಗ ಸಾವಿರಾರು ಜನರು ಬಂದು ಹಾರ ಹಾಕಿ, ವಿಶ್​ ಮಾಡ್ತಾರೆ. ಬಂದವರಿಗೆ ಬೇಡ ಅಂತ ಹೇಳಕ್ಕಾಗಲ್ಲ. ಆದರೆ, ವಂಚನೆ ಪ್ರಕರಣ ಬೆಳಕಿಗೆ ಬಂದಾಗಲೇ ಇವರು ಇಂಥವರು ಎಂದು ಗೊತ್ತಾಗುತ್ತದೆ. ವಂಚಕನ ಬಗ್ಗೆ ತನಿಖೆ ಪೂರ್ಣವಾದ ಬಳಿಕ ಸತ್ಯಾಸತ್ಯತೆ ಹೊರಬರುತ್ತೆ. ಕಾನೂನು ಚೌಕಟ್ಟಿನಲ್ಲಿ ಏನು ಕ್ರಮ ಕೈಗೊಳ್ಳಬೇಕೋ ಕೈಗೊಳ್ಳುತ್ತೇವೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.