ಬೆಳಗಾವಿ: ಸಣ್ಣ ರೈತರಿಗೆ ಕನಿಷ್ಠ 50 ಸಾವಿರ ಪರಿಹಾರ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡ ರೈತ ಮುಂಖಡರು, ಲಾಕ್‍ಡೌನ್‍ನಿಂದ ಸಣ್ಣ ರೈತರು, ಬಡ ಕುಟುಂಬಗಳು, ಕೃಷಿ ಕೂಲಿ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಸಣ್ಣ ರೈತರು ಬೆಳೆ ಪರಿಹಾರ ಪಡೆಯುವಂತಾಗಲು ನಿಯಮಾವಳಿಗಳನ್ನು ಸಡಿಲಿಸುವ ಮೂಲಕ ಅವರಿಗೆ ಕನಿಷ್ಠ 50 ಸಾವಿರ ರೂ. ಪರಿಹಾರ ಒದಗಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಕೊರೊನಾ ಹಿನ್ನೆಲೆ ಸಣ್ಣ ಹಾಗೂ ಭೂಮಿ ಇಲ್ಲದ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಲಾವಣಿ ಪಡೆದು ಬೆಳೆ ತೆಗೆಯುತ್ತಿದ್ದ ರೈತರಿಗೆ ಸರ್ಕಾರದ ಪರಿಹಾರ ತಲುಪುತ್ತಿಲ್ಲ. ಅಲ್ಲದೆ ಪಹಣೆ ಪತ್ರ ಇಲ್ಲದೇ ಹಾನಿಗೊಳಗಾದ ಬೆಳೆಗೆ ಪರಿಹಾರ ಪಡೆಯಲೂ ಸಹ ಅನರ್ಹರಾಗಿದ್ದಾರೆ. ಇದಕ್ಕಾಗಿ ಸರ್ಕಾರ ನಿಯಾಮಾವಳಿಗಳನ್ನು ಸಡಿಲಗೊಳಿಸಿ ಇವರನ್ನು ರೈತರೆಂದು ಪರಿಗಣಿಸಿಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.