ವಿಜಯವಾಡ: ಗ್ರಾಹಕರನ್ನು ಸೆಳೆಯಲು ಉದ್ಯಮಿಗಳು ನಾನಾ ಕಸರತ್ತುಗಳನ್ನು ಮಾಡುತ್ತಾರೆ. ಅಂತೆಯೇ ಆಂಧ್ರಪ್ರದೇಶ ಮೂಲದ ರೆಸ್ಟೋರೆಂಟ್ ಒಂದು ಕೇವಲ 5 ಪೈಸೆಗೆ ಅನ್ಲಿಮಿಟೆಡ್ನ ತಾಲಿ(ಊಟ)ಯ ಆಫರ್ ಅನ್ನು ಗ್ರಾಹಕರಿಗೆ ನೀಡುವ ಮೂಲಕ ಸುದ್ದಿಯಾಗಿದೆ. ಸುಮಾರು 500 ರೂಪಾಯಿ ಮೌಲ್ಯದ ಊಟವನ್ನು 5 ಪೈಸೆಯಲ್ಲಿ ಹಾಕ್ತಾರೆ ಅಂದ್ರೆ ಯಾರಿಗೆ ತಾನೆ ಇಷ್ಟ ಆಗೊಲ್ಲ ಹೇಳಿ..
ಹೌದು, ಈ ಆಫರ್ ಬಗ್ಗೆ ತಿಳಿದ ಜನರು ರೆಸ್ಟೋರೆಂಟ್ಗೆ ಮುಗಿಬಿದಿದ್ದಾರೆ. ಈ ತಾಲಿಯಲ್ಲಿ 35 ವಿವಿಧ ಬಗೆಯ ರುಚಿಕರ ಆಹಾರಗಳನ್ನು ಗ್ರಾಹಕರಿಗೆ ನೀಡಲಾಗಿದೆ. ವಿಜಯವಾಡದ ರಾಜ್ಭೋಗ್ ರೆಸ್ಟೋರೆಂಟ್ ಈ ಬಂಪರ್ ಆಫರ್ ಅನ್ನು ಗುರುವಾರದಿಂದ ಘೋಷಿಸಿದೆ.
ಈ ಕುರಿತು ಮಾತನಾಡಿರುವ ರೆಸ್ಟೋರೆಂಟ್ ಮಾಲೀಕ ಮೋಹಿತ್, 5 ಪೈಸೆ ಆಫರ್ ಅನ್ನು ಮೂರು ದಿನದ ಹಿಂದೆ ಘೋಷಿಸಿದ್ದೆವು. ಇದಕ್ಕಾಗಿ ವಿಶೇಷ ಪ್ರಚಾರವನ್ನು ಸಹ ಮಾಡಿದ್ದೆವು. ನಮ್ಮ ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಶುಕ್ರವಾರದ ಕಾರ್ಯಕ್ರಮ ಅದ್ಬುತ ಯಶಸ್ಸು ಕಂಡಿತು. 300-400ಜನರನ್ನು ನಾವು ನಿರೀಕ್ಷೆಸಿದ್ದೆವು. ಆದರೆ, ನಿರೀಕ್ಷೆ ಮೀರಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. 5 ಪೈಸೆ ತಂದವರಿಗೆ ನಾವು ಉಚಿತವಾಗಿ ಊಟ ನೀಡಿದೆವು. 1000ಕ್ಕೂ ಹೆಚ್ಚು ಗ್ರಾಹರಿಗೆ ಶೇ 50 ರಷ್ಟು ರಿಯಾಯ್ತಿಯಲ್ಲಿ ಆಹಾರ ನೀಡಲಾಯಿತು. ಗುಜರಾತಿ, ರಾಜಸ್ಥಾನ ಮತ್ತು ಉತ್ತರ ಭಾರತ ಶೈಲಿಯ 35 ಬಗೆಯ ರುಚಿಕರ ತಿನಿಸುಗಳು ಈ ತಾಲಿಯಲ್ಲಿತ್ತು.
ಒಂದೇ ದಿನಕ್ಕೆ ಸೀಮಿತ ಈ ಆಫರ್.. ರಾಜ್ಭೋಗ್ ಸಹ ಮಾಲೀಕರಾಗಿರುವ ದೀಪ್ತಿ ಮಾತನಾಡಿ, ಇಲ್ಲಿನ ಜನರಿಗೆ ಗುಜರಾತಿ, ರಾಜಸ್ಥಾನ ಮತ್ತು ಉತ್ತರ ಭಾರತ ಶೈಲಿಯ ಆಹಾರ ನೀಡಬೇಕು ಎಂಬುದು ಈ ಆಫರ್ನ ಮುಖ್ಯ ಉದ್ದೇಶವಾಗಿತ್ತು. ವಿಜಯವಾಡದಲ್ಲಿ ಸಾಕಷ್ಟು ದಕ್ಷಿಣ ಭಾರತೀಯರಿದ್ದು, ಭಾರಿ ಸಂಖ್ಯೆಯಲ್ಲಿ ಅವರು ಭಾಗಿಯಾಗಿದ್ದರು. ಗುರುವಾರ ಒಂದೇ ದಿನಕ್ಕೆ ಈ ಆಫರ್ ಅನ್ನು ಘೋಷಿಸಲಾಗಿತ್ತು. ಮೊದಲು ಬಂದ 50 ಗ್ರಾಹಕರಿಗೆ ಉಚಿತವಾಗಿ ತಾಲಿ ನೀಡಿದೆವು.
ಮಿಕ್ಕ ಗ್ರಾಹಕರಿಗೆ ಶೇ 50ರಷ್ಟು ರಿಯಾಯಿತಿ ದರದಲ್ಲಿ ನೀಡಲಾಯಿತು. ನಮ್ಮಲ್ಲಿ ಒಂದು ತಾಲಿ ಬೆಲೆ 420 ಆಗಿದ್ದು, ಗುರುವಾರ 210ಕ್ಕೆ ನೀಡಿದೆವು. ನಮ್ಮ ಹೋಟೆಲ್ ಮೊದಲ ಮಹಡಿಯಲ್ಲಿ ಮಂಡಪ್ ಎಂಬ ಕನ್ವೆಷನಲ್ ಹಾಲ್ ನಿರ್ಮಿಸಲಾಗಿದೆ. ಅಲ್ಲಿ ಈ ಆಹಾರಗಳನ್ನು ಇರಿಸಿ ನಾವು ಯಾವ ರೀತಿಯ ಆಹಾರ ಸೇವೆ ಒದಗಿಸುತ್ತೇವೆ ಎಂಬುದನ್ನು ಜನರಿಗೆ ಪರಿಚಯಿಸುವುದು ಇದರ ಪ್ರಮುಖ ಉದ್ದೇಶವಾಗಿತ್ತು ಎಂದು ವಿವರಿಸಿದರು.
ಇದನ್ನೂ ಓದಿ: ಲಾಕ್‌ಡೌನ್‌ನಲ್ಲಿ ಕೋಟಿ ವ್ಯವಹಾರ ಮಾಡಿದ ಫಿಟ್ನೆಸ್ ದಂಪತಿ!