ETV Bharat / business

ಎಸ್​​​​ಐಪಿ ಹೂಡಿಕೆ ಮತ್ತು ಟಾಪ್​ ಅಪ್​.. ಏನಿದು ವ್ಯವಸ್ಥಿತ ಹೂಡಿಕೆ ವಿಧಾನ? - ಹೂಡಿಕೆಗೆ ಪ್ಲಾನ್​ ಅಗತ್ಯ

ಅವರ ಆದಾಯ ಹೆಚ್ಚಾದರೂ ಅವರ ಹೂಡಿಕೆ ಆ ಮಟ್ಟಿಗೆ ಹೆಚ್ಚಾಗುವುದಿಲ್ಲ. ಇದು ಭವಿಷ್ಯದಲ್ಲಿ ಹಣದುಬ್ಬರದ ವೆಚ್ಚವನ್ನು ಭರಿಸುವುದು ಕಷ್ಟಕರ ಎಂಬ ಪರಿಸ್ಥಿತಿಗೆ ಕಾರಣವಾಗುತ್ತದೆ. ಆದ್ದರಿಂದ SIP ಹೂಡಿಕೆಯನ್ನು ನಿಯಮಿತಾಗಿ ಕಾಲಕಾಲಕ್ಕೆ ಹೆಚ್ಚಿಸಲು ಪ್ರಯತ್ನಿಸಬೇಕು. ಇದನ್ನು 'ಟಾಪ್ ಅಪ್' ಎಂದು ಕರೆಯಲಾಗುತ್ತದೆ.

Top up your SIPs now to buy luxury car later
ಎಸ್​​​​ಐಪಿ ಹೂಡಿಕೆ ಮತ್ತು ಟಾಪ್​ ಅಪ್​.. ಏನಿದು ವ್ಯವಸ್ಥಿತ ಹೂಡಿಕೆ ವಿಧಾನ?
author img

By

Published : Dec 9, 2022, 9:25 AM IST

ಹೈದರಾಬಾದ್: ದೀರ್ಘಾವಧಿಯಲ್ಲಿ ಹೆಚ್ಚುತ್ತಿರುವ ವೆಚ್ಚಗಳು ಮತ್ತು ಆ ಖರ್ಚುಗಳನ್ನು ನಿಭಾಯಿಸಲು ಒಂದೇ ಒಂದು ಆರ್ಥಿಕ ಗುರಿ ಸಾಕಾಗುವುದಿಲ್ಲ. ಸುರಕ್ಷಿತ ಭವಿಷ್ಯಕ್ಕಾಗಿ ಒಬ್ಬರು ಬಹು ಆರ್ಥಿಕ ಗುರಿಗಳನ್ನು ಹೊಂದಿಸಬೇಕು. ಅದಕ್ಕೆ ಅನುಗುಣವಾಗಿ ಹೂಡಿಕೆಗಳನ್ನು ಮಾಡಬೇಕಾಗುತ್ತದೆ.

ಪ್ರತಿ ಹಣಕಾಸಿನ ಗುರಿ ಸಾಧಿಸಲು ನಿಗದಿತ ಮೊತ್ತವನ್ನು ನಿಯಮಿತವಾಗಿ ಹೂಡಿಕೆ ಮಾಡಬೇಕಾಗುತ್ತದೆ. ಇದಕ್ಕಾಗಿ, ಮ್ಯೂಚುವಲ್ ಫಂಡ್‌ಗಳಲ್ಲಿ SIP (ವ್ಯವಸ್ಥಿತ ಹೂಡಿಕೆ ಯೋಜನೆ) ಅತ್ಯುತ್ತಮವಾಗಿದೆ ಎಂದು ಹೇಳಬಹುದು. ಹೆಚ್ಚಿನ ಜನರು ಒಂದೇ SIP ನಲ್ಲಿ ದೀರ್ಘಕಾಲದವರೆಗೆ ಹೂಡಿಕೆ ಮಾಡುವುದನ್ನು ಮುಂದುವರಿಸುತ್ತಾರೆ.

ಅವರ ಆದಾಯ ಹೆಚ್ಚಾದರೂ ಅವರ ಹೂಡಿಕೆ ಆ ಮಟ್ಟಿಗೆ ಹೆಚ್ಚಾಗುವುದಿಲ್ಲ. ಇದು ಭವಿಷ್ಯದಲ್ಲಿ ಹಣದುಬ್ಬರದ ವೆಚ್ಚವನ್ನು ಭರಿಸುವುದು ಕಷ್ಟಕರ ಎಂಬ ಪರಿಸ್ಥಿತಿಗೆ ಕಾರಣವಾಗುತ್ತದೆ. ಆದ್ದರಿಂದ SIP ಹೂಡಿಕೆಯನ್ನು ನಿಯಮಿತಾಗಿ ಕಾಲಕಾಲಕ್ಕೆ ಹೆಚ್ಚಿಸಲು ಪ್ರಯತ್ನಿಸಬೇಕು. ಇದನ್ನು 'ಟಾಪ್ ಅಪ್' ಎಂದು ಕರೆಯಲಾಗುತ್ತದೆ.

ಐಷಾರಾಮಿ ಖರೀದಿಗಿಂತ ಎಸ್​​ಐಪಿಗೆ ಮಹತ್ವ: ಇತ್ತೀಚೆಗೆ ಪ್ರಮುಖ ಕಾರು ಕಂಪನಿಯೊಂದರ ಉನ್ನತ ಕಾರ್ಯನಿರ್ವಾಹಕರು 'ಐಷಾರಾಮಿ ಕಾರು ಖರೀದಿಸುವುದಕ್ಕಿಂತ ಹೆಚ್ಚಿನ ಆದ್ಯತೆಯನ್ನು SIPಗಳಲ್ಲಿ ಹೂಡಿಕೆಗೆ ನೀಡಲಾಗುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. 'ಎಸ್‌ಐಪಿ'ಯ ಶಕ್ತಿಯೇ ಅಂಥದ್ದು. ದೀರ್ಘಾವಧಿಯಲ್ಲಿ ಹಣಕಾಸಿನ ಗುರಿಗಳನ್ನು ಸಾಧಿಸಲು, ನಿಯಮಿತವಾಗಿ ಹೂಡಿಕೆಗಳನ್ನು ಹೆಚ್ಚಿಸುವ ಮೂಲಕ ಈ SIP ಪ್ರೊಫೈಲ್ ಅನ್ನು ಬಲಪಡಿಸಬೇಕು.

ಒಮ್ಮೆ ನೀವು ಎಸ್​​​ಪಿಐಯಲ್ಲಿ ಹೂಡಿಕೆ ಮಾಡಿ ಗಳಿಕೆ ಮಾಡಿದರೆ, ಆಗ ನೀವು ಐಷಾರಾಮಿ ಕಾರು, ಸ್ವಂತ ಮನೆ, ವಿದೇಶಿ ವಿಹಾರಗಳು, ಯಾವುದೇ ಹಣಕಾಸಿನ ಒತ್ತಡವಿಲ್ಲದೇ ಯಾವುದನ್ನಾದರೂ ಸುಲಭವಾಗಿ ಖರೀದಿಸಬಹುದು. ಸರಿಯಾದ ಹೂಡಿಕೆ ಮಾಡುವ ಆಯ್ಕೆಯ ಕುರಿತು, ಜರೋಧಾ ಸ್ಟಾಕ್ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ನ ಸಹ-ಸಂಸ್ಥಾಪಕ ನಿತಿನ್ ಕಾಮತ್ ಅವರು ಮಾತನಾಡಿದ್ದು, ಸವಕಳಿಯಾಗುವ ಆಸ್ತಿಗಳನ್ನು ಖರೀದಿಸಲು ಸಾಲವನ್ನು ತೆಗೆದುಕೊಳ್ಳುವ ಬದಲು, ಸಣ್ಣ ಮೊತ್ತದಲ್ಲಿ ಕ್ರಮೇಣ ಹೂಡಿಕೆ ಮಾಡಿ, ಚಕ್ರಬಡ್ಡಿಯೊಂದಿಗೆ ಅದನ್ನು ಬೆಳೆಸಿಕೊಳ್ಳಬೇಕು. ಆ ನಂತರ ಬಂದ ಲಾಭದಲ್ಲಿ ನಿಮಗೆ ಏನು ಬೇಕು ಅದನ್ನು ಖರೀದಿಸಬಹುದು ಎಂಬ ಸಲಹೆ ನೀಡಿದ್ದಾರೆ.

ಹೂಡಿಕೆಗೆ ಪ್ಲಾನ್​ ಅಗತ್ಯ: SIP ಹೂಡಿಕೆಗಳನ್ನು ಮಾಡಲು ಸಂಪೂರ್ಣ ಯೋಜನೆ ಅಗತ್ಯವಿದೆ. ನೀವು SIP ಖಾತೆಯನ್ನು ತೆರೆದಾಗ, ನಿಗದಿತ ಅವಧಿಯ ನಂತರ ಅದರಲ್ಲಿ ಎಷ್ಟು ಶೇಕಡಾವನ್ನು ಹೆಚ್ಚಿಸಬಹುದು ಎಂಬುದನ್ನು ಯೋಜಿಸಬೇಕು. ಅಥವಾ ಪ್ರತಿ ಬಾರಿ ನಿಮ್ಮ ಹೂಡಿಕೆ ಹೆಚ್ಚಿಸಲು ನೀವು ಹೊಸ SIP ಖಾತೆ ತೆರೆಯಬಹುದು. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ, ನಿಮ್ಮ ಹೂಡಿಕೆಯನ್ನು ನಿಗದಿತ ಶೇಕಡಾವಾರು ಪ್ರಮಾಣದಲ್ಲಿ ಹೆಚ್ಚಿಸುವುದು ಮುಖ್ಯವಾಗುತ್ತದೆ. ಅದನ್ನು ಹೇಗೆ ಮಾಡಬೇಕೆಂಬುದು ನಿಮಗೆ ಬಿಟ್ಟ ವಿಚಾರ.

ಹೂಡಿಕೆಗೆ ಹಣ ಹೊಂದಿಸಬೇಕಾಗುತ್ತೆ: ಹೂಡಿಕೆಯನ್ನು ಸ್ಥಿರವಾಗಿ ಹೆಚ್ಚಿಸಲು ನಮ್ಮ ಹಣಕಾಸನ್ನು ಸರಿಹೊಂದಿಸಬೇಕು. ಉದಾಹರಣೆಗೆ, ಒಬ್ಬ ವ್ಯಕ್ತಿ ಈ ತಿಂಗಳ 10 ರಿಂದ 5,000 ರೂಪಾಯಿಗಳ SIP ಅನ್ನು ಪ್ರಾರಂಭಿಸುತ್ತಾನೆ ಎಂದು ಇಟ್ಟುಕೊಂಡರೆ, ನಂತರ ಅದು ಪ್ರತಿ ಆರು ತಿಂಗಳಿಗೊಮ್ಮೆ 10 ಪ್ರತಿ ಶತದಷ್ಟು ಅಥವಾ ಪ್ರತಿ ವರ್ಷ 20 ಪ್ರತಿಶತದಷ್ಟು 'ಟಾಪ್ ಅಪ್' ಹೊಂದಿರಬೇಕು.

ನೀವು ಗಳಿಸಲು ಪ್ರಾರಂಭಿಸಿದಾಗಿನಿಂದ ನಿವೃತ್ತಿಯವರೆಗೂ ಈ ತಂತ್ರವನ್ನು ಅನುಸರಿಸಬೇಕು. ಪ್ರತಿಯೊಂದು ಹಣಕಾಸಿನ ಉದ್ದೇಶಕ್ಕೂ ಪ್ರತ್ಯೇಕವಾದ ವ್ಯವಸ್ಥಿತ ಹೂಡಿಕೆ ಯೋಜನೆ ಹೊಂದಿರಬೇಕು.

ಇದನ್ನು ಓದಿ: ಹಣದುಬ್ಬರ ನಿಯಂತ್ರಿಸಲು ರೆಪೊ ದರ ಮತ್ತೆ ಏರಿಸಿದ ಆರ್​ಬಿಐ.. ಗೃಹಸಾಲ ಮತ್ತಷ್ಟು ದುಬಾರಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.