ETV Bharat / business

ಕನಸಿನ ಮನೆಗಾಗಿ ಗೃಹ ಸಾಲ ಪಡೆಯುವ ಮುನ್ನ ಗಮನದಲ್ಲಿರಲಿ ಈ ಮಾಹಿತಿ.. - ಗೃಹ ಸಾಲ ಪಡೆಯಲು ಈ ನಿಯಮ ಪಾಲಿಸಿ

ಮನೆ ಖರೀದಿಸುವುದು ಪ್ರತಿಯೊಬ್ಬರ ಕನಸು. ಆದರೆ ಈ ಆಸೆಯನ್ನು ಈಡೇರಿಸಿಕೊಳ್ಳಲು ಸಾಲ ತೆಗೆದುಕೊಂಡಾಗ ನೀವು ಅನೇಕ ವಿಷಯಗಳನ್ನು ಪರಿಗಣಿಸಬೇಕು. ನಿಮ್ಮ ಆದಾಯದಂತೆಯೇ ಇತರ ಆದಾಯದ ಮೂಲಗಳು ಮತ್ತು ಸಾಲಗಳು, EMI ಗಳನ್ನು ಪಾವತಿಸುತ್ತಿರುವಾಗ ಎಷ್ಟು ಪ್ರಮಾಣದಲ್ಲಿ ಸಾಲವನ್ನು ಮರುಪಾವತಿ ಮಾಡಬಹುದು ಎಂಬುದರ ಬಗ್ಗೆ 'ಈಟಿವಿ ಭಾರತ​' ನಿಮಗೆ ಮಾಹಿತಿ ನೀಡುತ್ತದೆ.

things-you-should-consider-before-buying-a-house
ಕನಸಿನ ಮನೆಗಾಗಿ ಗೃಹ ಸಾಲ ಪಡೆಯಲಿದ್ದೀರಾ
author img

By

Published : May 29, 2022, 10:04 PM IST

ಹೈದರಾಬಾದ್: ಗೃಹ ಸಾಲವು ದೀರ್ಘಾವಧಿಯ ವ್ಯವಹಾರವಾಗಿದೆ. ಈ ಅವಧಿಯಲ್ಲಿ ಬಡ್ಡಿ ದರಗಳು ಹಲವಾರು ಬಾರಿ ಏರುತ್ತವೆ ಮತ್ತು ಕಡಿಮೆಯಾಗುತ್ತವೆ. ಹಾಗಾಗಿ ಸಾಲ ತೆಗೆದುಕೊಳ್ಳುವಾಗ ಮುನ್ನೆಚ್ಚರಿಕೆ ವಹಿಸುವುದು ಉತ್ತಮ. ಸಾಲದ ಹೊರೆಯನ್ನು ತಗ್ಗಿಸಿಕೊಳ್ಳಲು ನಾವು ಸಾಲದ ಮೊತ್ತ ಎಷ್ಟು? ಎಷ್ಟು ಅವಧಿಯನ್ನು ಆಯ್ಕೆ ಮಾಡಬೇಕು? ಕಂತುಗಳನ್ನು ಪಾವತಿಸಲು ಏನಾದರೂ ತೊಂದರೆಗಳಿವೆಯೇ? ಎಂಬುದನ್ನು ಸಾಲ ತೆಗೆದುಕೊಳ್ಳುವ ಮೊದಲೇ ನಾವು ನಿರ್ಧರಿಸಬೇಕು.

ಹೆಚ್ಚಿನವರು ಎಲ್ಲಾ ಸೌಕರ್ಯಗಳಿರುವ ಮನೆಯನ್ನು ಖರೀದಿಸಲು ಬಯಸುತ್ತಾರೆ. ಆದರೆ, ಅದಕ್ಕೆ ನಮ್ಮ ಆರ್ಥಿಕ ಶಕ್ತಿ ಸಾಕಾಗದೇ ಇರಬಹುದು. ಮನೆಗೆ ಎಷ್ಟು ಖರ್ಚು ಮಾಡಬಹುದು. ಭವಿಷ್ಯದಲ್ಲಿ ಆದಾಯ ಹೆಚ್ಚುತ್ತದೆ ಎಂಬ ಆಲೋಚನೆಯಿಂದ ಸಾಲ ಪಡೆಯುವ ಪ್ರಯತ್ನಗಳನ್ನು ಮಾಡಬಾರದು. ಇದು ಮನೆ ಖರೀದಿಸಿದಾಗಿನಿಂದ ಹೆಚ್ಚಿನ ಹೊರೆಯಾಗಿ ಪರಿಣಮಿಸಲಿದೆ.

ನಾವು ಮನೆ ಖರೀದಿಸಲು ಬಯಸಿದಾಗ ನಮ್ಮ ಉಳಿತಾಯದಿಂದ ನಿರ್ದಿಷ್ಟ ಮೊತ್ತವನ್ನು ಪಾವತಿಸಬೇಕು. ಅದನ್ನು ಮಾರ್ಜಿನ್ ಮನಿ ಎಂದು ಕರೆಯಲಾಗುತ್ತದೆ. ಬ್ಯಾಂಕುಗಳು ಸಾಮಾನ್ಯವಾಗಿ ಮನೆಯ ಮೌಲ್ಯದ 75- 90% ವರೆಗೆ ಸಾಲ ನೀಡುತ್ತವೆ. ಉಳಿದ ಮೊತ್ತವನ್ನು ನಾವು ಹೊಂದಿಸಬೇಕಾಗುತ್ತದೆ. ನೋಂದಣಿ ಮತ್ತು ಒಳಾಂಗಣ ಅಲಂಕಾರದ ವೆಚ್ಚವನ್ನು ನಾವೇ ಭರಿಸಬೇಕಾಗುತ್ತದೆ.

ಮಾರ್ಜಿನ್ ಹಣವನ್ನು ಸಾಲಗಾರನ ವಯಸ್ಸು, ಕ್ರೆಡಿಟ್ ಸ್ಕೋರ್, ಸಾಲದ ಮೊತ್ತ ಮತ್ತು ಮನೆಯ ಮೌಲ್ಯದಲ್ಲಿ ಸಾಲದ ಶೇಕಡಾವಾರು ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಈ ಹಣದಲ್ಲಿ ನೀವು ಎಷ್ಟು ಹಣವನ್ನು ನಿಭಾಯಿಸಬಹುದು ಎಂಬುದನ್ನು ಮುಂಚಿತವಾಗಿಯೇ ಲೆಕ್ಕ ಹಾಕಿ.

ಕ್ರೆಡಿಟ್ ಸ್ಕೋರ್: ಹೆಚ್ಚಿನ ಬ್ಯಾಂಕುಗಳು ಸಾಲಗಾರನ ಪ್ರಸ್ತುತ ಕ್ರೆಡಿಟ್ ಸ್ಕೋರ್ ಆಧರಿಸಿ ಬಡ್ಡಿದರಗಳನ್ನು ಹಾಕುತ್ತವೆ. ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿರುವವರು ಹೆಚ್ಚಿನ ಬಡ್ಡಿದರಕ್ಕೆ ಒಳಗಾಗುತ್ತಾರೆ. ಆದ್ದರಿಂದ, ನೀವು ಹೆಚ್ಚಿನ ಬಡ್ಡಿ ದರವನ್ನು ಹೊಂದಲು ಬಯಸದಿದ್ದರೆ, ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಎಚ್ಚರಿಕೆಯಿಂದ ನಿರ್ವಹಿಸಿ. 750-800 ಕ್ಕಿಂತ ಹೆಚ್ಚಿನ ಸ್ಕೋರ್ ಅನ್ನು ಉತ್ತಮ ಸ್ಕೋರ್ ಎಂದು ಪರಿಗಣಿಸಲಾಗುತ್ತದೆ. ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಮಾತ್ರವಲ್ಲ, ಮತ್ತು ನೀವು ಸಾಲವನ್ನು ಮರು ಪಾವತಿಸುವವರೆಗೆ ಆ ಸ್ಕೋರ್ ಅನ್ನು ಕಾಪಾಡಿಕೊಳ್ಳಬೇಕು.

ಮಾಸಿಕ ಕಂತುಗಳು: ಹೋಮ್​ ಲೋನ್​ ಪಡೆಯುವಾಗ ನೀವು ಈಗಾಗಲೇ ಎಷ್ಟು ಇತರ ಸಾಲಗಳನ್ನು ಮಾಡಿದ್ದೀರಿ. ಅವಕ್ಕೆ ಪಾವತಿಸುತ್ತಿರುವ ಕಂತುಗಳ ಮೊತ್ತ ಎಷ್ಟು? ಭವಿಷ್ಯದಲ್ಲಿ ಯಾವುದೇ ಇತರ ಸಾಲಗಳನ್ನು ನಿಮ್ಮ ಗಳಿಕೆಯ ಹಣದಲ್ಲಿ ತೆಗೆದುಕೊಳ್ಳಬಹುದೇ ಎಂಬುದನ್ನು ಮೊದಲು ಯೋಚಿಸಬೇಕು.

ನೀವಿಗಾಗಲೇ ಇತರೆ ಸಾಲಗಳನ್ನು ಹೊಂದಿದ್ದು, ಭವಿಷ್ಯದಲ್ಲಿ ನಿಮ್ಮ ಮಕ್ಕಳ ಶಿಕ್ಷಣಕ್ಕಾಗಿ ಸಾಲವನ್ನು ತೆಗೆದುಕೊಳ್ಳಬೇಕಾಗಬಹುದು. ಈಗ ಮನೆಯ ಮೇಲೆ ಸಾಲವನ್ನು ಪಡೆದಲ್ಲಿ, ಸಾಲ ಮರುಪಾವತಿ ಮಾಡಲು ಇಎಂಐಗಳ ಹೊರೆ ಹೆಚ್ಚಲಿದೆ. ಎಷ್ಟು ಸಾಲವನ್ನು ಪಡೆದುಕೊಳ್ಳುತ್ತೀರಿ ಎನ್ನುವುದಕ್ಕಿಂತ, ಎಷ್ಟು ಇಎಂಐ ಅನ್ನು ನಿಭಾಯಿಸಬಹುದು ಎಂಬುದರ ಮೇಲೆ ಮನೆ ಸಾಲದ ಮೊತ್ತವನ್ನು ನಿರ್ಧರಿಸುವುದು ಉತ್ತಮ. ಇದಲ್ಲದೇ, ಕಡಿಮೆ ಬಡ್ಡಿ ದರಗಳು ಮತ್ತು ಸೇವಾ ಶುಲ್ಕಗಳನ್ನು ಒದಗಿಸುವ ಬ್ಯಾಂಕುಗಳನ್ನು ಆಯ್ಕೆಮಾಡಿಕೊಳ್ಳಿ.

ನಿಮ್ಮ ಆದಾಯದ ಮಿತಿ ಎಷ್ಟು?: ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು, ನೀವು ಆರ್ಥಿಕವಾಗಿ ಎಷ್ಟು ಸಬಲರಾಗಿದ್ದೀರಿ ಎಂಬುದನ್ನು ತಿಳಿದುಕೊಳ್ಳಬೇಕು. ಸಾಲ ಮರುಪಾವತಿವರೆಗೂ ನಿಮ್ಮ ಆದಾಯ ಒಂದೇ ತೆರನಾಗಿರಲಿದೆಯಾ ಎಂಬುದು ಖಚಿತವಿರಲಿ. ಒಂದಕ್ಕಿಂತ ಹೆಚ್ಚು ಆದಾಯದ ಮೂಲಗಳನ್ನು ಹುಡುಕಿಕೊಳ್ಳಿ. ಬ್ಯಾಂಕ್‌ಗಳು ನಿಮ್ಮ ಆದಾಯದ ಆಧಾರದ ಮೇಲೆ ಸಾಲಗಳನ್ನು ಮಂಜೂರು ಮಾಡುತ್ತವೆ. ಏಕ ವ್ಯಕ್ತಿ ಆದಾಯವು ಸಾಲ ಪ್ರಕ್ರಿಯೆಗೆ ಸಾಕಾಗುತ್ತಿಲ್ಲ ಎಂದಾದಲ್ಲಿ ನಿಮ್ಮ ಹೆಂಡತಿಯನ್ನು ಸಹ ಅರ್ಜಿದಾರರಾಗಿ ಸೇರಿಸಬಹುದು. ಜಂಟಿ ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಸಾಲದ ಅರ್ಹತೆಯು ಹೆಚ್ಚಾಗುತ್ತದೆ. ಮಹಿಳೆಯರು ಬಡ್ಡಿದರಗಳ ಮೇಲೆ ರಿಯಾಯಿತಿಗಳನ್ನು ಸಹ ಪಡೆಯುತ್ತಾರೆ.

ವಿಮೆ ಕಡ್ಡಾಯವಾಗಿ ಮಾಡಿಸಿ: ವಿಮೆಯು ಕುಟುಂಬಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಮನೆ ಖರೀದಿಸುವಾಗ ಜೀವ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳುವುದನ್ನು ಮರೆಯಬೇಡಿ. ಯಾವುದೇ ಅನಿರೀಕ್ಷಿತ ಸಂದರ್ಭಗಳಲ್ಲಿ, ಆ ವಿಮಾ ಪಾಲಿಸಿಯೊಂದಿಗೆ ಸಾಲವನ್ನು ಮರುಪಾವತಿಸಲು ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ಟರ್ಮ್ ಪಾಲಿಸಿ ಅಥವಾ ಹೋಮ್ ಲೋನ್ ಪ್ರೊಟೆಕ್ಷನ್ ಪಾಲಿಸಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ದೀರ್ಘ ಯೋಜನೆಗಳ ಬಗ್ಗೆ ಇರಲಿ ಗಮನ: ಮನೆ ಖರೀದಿಸುವುದರ ಜೊತೆಗೆ ಇತರ ಆರ್ಥಿಕ ಉದ್ದೇಶಗಳನ್ನು ನಿರ್ಲಕ್ಷಿಸುವುದು ಸೂಕ್ತವಲ್ಲ. ನಿವೃತ್ತಿ ಯೋಜನೆ, ಮಕ್ಕಳ ಉನ್ನತ ಶಿಕ್ಷಣ ಮತ್ತು ಅವರ ಮದುವೆಯಂತಹ ಅವಶ್ಯಕತೆಗಳನ್ನು ಸಹ ಪರಿಗಣನೆಗೆ ತೆಗೆದುಕೊಳ್ಳಬೇಕು. ನಿಮ್ಮ ಗೃಹ ಸಾಲವು ನಿಮ್ಮ ಆರ್ಥಿಕತೆಯನ್ನು ಕುಗ್ಗಿಸಬಾರದು. ಒಂದು ವೇಳೆ ಗೃಹ ಸಾಲ ಹೊರೆಯಾದಲ್ಲಿ ನಿಮ್ಮ ಖರ್ಚನ್ನು ಕಡಿಮೆ ಮಾಡುವುದು ಉತ್ತಮ ಎನ್ನುತ್ತಾರೆ ಬ್ಯಾಂಕ್‌ಬಜಾರ್.ಕಾಮ್‌ನ ಸಿಇಒ ಆದಿಲ್ ಶೆಟ್ಟಿ.

ಓದಿ: ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡಿದ್ದ ಮುಂಬೈ ವ್ಯಕ್ತಿಗೆ ₹1.57 ಕೋಟಿ ವಂಚಿಸಿದ ಅಪರಿಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.