ETV Bharat / business

ಜನವರಿ 2024ರೊಳಗೆ ಟೆಸ್ಲಾ ಕಾರು ಭಾರತದಲ್ಲಿ ರಸ್ತೆಗಿಳಿಯುವ ಸಾಧ್ಯತೆ - ಟೆಸ್ಲಾ ಭಾರತದಲ್ಲಿ ಬ್ಯಾಟರಿ ತಯಾರಿಕೆಯ

2024 ರ ಜನವರಿ​ ಒಳಗೆ ಟೆಸ್ಲಾ ಭಾರತಕ್ಕೆ ಕಾಲಿಡಲಿದೆ ಎಂದು ವರದಿಗಳು ತಿಳಿಸಿವೆ.

Elon Musk's Tesla may enter India by Jan 2024: Report

author img

By ETV Bharat Karnataka Team

Published : Nov 7, 2023, 5:47 PM IST

ನವದೆಹಲಿ: ಎಲೋನ್ ಮಸ್ಕ್ ಒಡೆತನದ ಟೆಸ್ಲಾ ಕಾರು 2024ರ ಜನವರಿಯೊಳಗೆ ಭಾರತೀಯ ರಸ್ತೆಗಿಳಿಯಲು ಸಂಬಂಧಪಟ್ಟ ಇಲಾಖೆಗಳಿಂದ ಅಗತ್ಯ ಎಲ್ಲ ಅನುಮೋದನೆಗಳನ್ನು ಒದಗಿಸುವ ಪ್ರಕ್ರಿಯೆಯನ್ನು ಕೇಂದ್ರ ಸರಕಾರ ಚುರುಕುಗೊಳಿಸುತ್ತಿದೆ ಎಂದು ಮಾಧ್ಯಮ ವರದಿಗಳು ಮಂಗಳವಾರ ತಿಳಿಸಿವೆ.

ವರದಿಗಳ ಪ್ರಕಾರ, ಟೆಸ್ಲಾ ಹೂಡಿಕೆ ಪ್ರಸ್ತಾಪ ಸೇರಿದಂತೆ ದೇಶದಲ್ಲಿ ಎಲೆಕ್ಟ್ರಿಕ್ ವಾಹನ (ಇವಿ) ಉತ್ಪಾದನೆಯ ಮುಂದಿನ ಹಂತವನ್ನು ಪರಿಶೀಲಿಸಲು ಪ್ರಧಾನಿ ಕಚೇರಿ (ಪಿಎಂಒ)ಯಲ್ಲಿ ಸೋಮವಾರ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಯಿತು ಎಂದು ವರದಿಗಳು ತಿಳಿಸಿವೆ. ಜೂನ್​ನಲ್ಲಿ ಅಮೆರಿಕಕ್ಕೆ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ಮಸ್ಕ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವೆ ಸಭೆ ನಡೆದಿತ್ತು. ಇದಾದ ನಂತರ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಭಾರಿ ಕೈಗಾರಿಕೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಗಳು ಭಾರತದಲ್ಲಿ ಟೆಸ್ಲಾ ಯೋಜನೆಗಳ ಬಗ್ಗೆ ಪರಿಶೀಲನೆ ಮಾಡುತ್ತಿವೆ.

ಟೆಸ್ಲಾ ಭಾರತದಲ್ಲಿ ಬ್ಯಾಟರಿ ತಯಾರಿಕೆಯ ಕಾರ್ಖಾನೆ ಸ್ಥಾಪಿಸಲು ಸೆಪ್ಟೆಂಬರ್​ನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ವರದಿಯೊಂದು ತಿಳಿಸಿದೆ. ಇದರ ಜೊತೆಗೆ ಮಸ್ಕ್ ಭಾರತದಲ್ಲಿ ಟೆಸ್ಲಾಗೆ ಬಿಡಿಭಾಗಗಳ ಪೂರೈಕೆ ವ್ಯವಸ್ಥೆಯನ್ನು ಸ್ಥಾಪಿಸುವ ಗುರಿ ಹೊಂದಿದ್ದಾರೆ. ಟೆಸ್ಲಾ ಈ ವರ್ಷ ಭಾರತದಿಂದ 1.9 ಬಿಲಿಯನ್ ಡಾಲರ್ ಮೌಲ್ಯದ ಆಟೋಮೊಬೈಲ್ ಬಿಡಿಭಾಗಗಳನ್ನು ಖರೀದಿಸಲು ಯೋಜಿಸುತ್ತಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

ಭಾರತದಲ್ಲಿ ತನ್ನ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಸರ್ಕಾರದಿಂದ ಸಮಸ್ಯೆಗಳು ಎದುರಾಗುತ್ತಿವೆ ಎಂದು ಮಸ್ಕ್ ಆಗಾಗ ಹೇಳಿದ್ದಾರೆ. ಸರ್ಕಾರದೊಂದಿಗಿನ ಸಮಸ್ಯೆಗಳಿಂದಾಗಿ ಟೆಸ್ಲಾ ಇನ್ನೂ ಭಾರತಕ್ಕೆ ಕಾಲಿಡಲು ಸಾಧ್ಯವಾಗಿಲ್ಲ ಎಂದು ಅವರು ಪೋಸ್ಟ್ ಮಾಡಿದ್ದರು. ಭಾರತದಲ್ಲಿ ಕಾರುಗಳನ್ನು ಬಿಡುಗಡೆ ಮಾಡಲು ಟೆಸ್ಲಾ ಬಯಸುವುದು ಹೌದಾದರೂ, ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಮೇಲಿನ ದೇಶದ ಆಮದು ಸುಂಕ ವಿಶ್ವದಲ್ಲೇ ಅತ್ಯಧಿಕವಾಗಿದೆ ಎಂದು ಮಸ್ಕ್ ಹೇಳಿದ್ದಾರೆ.

ವಿಮೆ ಮತ್ತು ಸಾಗಾಟದ ವೆಚ್ಚಗಳನ್ನು ಒಳಗೊಂಡಂತೆ 40,000 ಡಾಲರ್ (30 ಲಕ್ಷ ರೂ.) ಗಿಂತ ಹೆಚ್ಚಿನ ಬೆಲೆಯ ಆಮದು ಮಾಡಿದ ಕಾರುಗಳ ಮೇಲೆ ಭಾರತವು ಶೇಕಡಾ 100 ರಷ್ಟು ತೆರಿಗೆ ವಿಧಿಸುತ್ತದೆ. 40,000 ಡಾಲರ್​ಗಿಂತ ಕಡಿಮೆ ಬೆಲೆಯ ಕಾರುಗಳ ಮೇಲೆ ಭಾರತ ಶೇಕಡಾ 60 ರಷ್ಟು ಆಮದು ತೆರಿಗೆ ವಿಧಿಸುತ್ತದೆ. ಹೀಗಾಗಿ ಭಾರತದ ಜನರಿಗೆ ಕಡಿಮೆ ದರದಲ್ಲಿ ಟೆಸ್ಲಾ ಕಾರುಗಳನ್ನು ಒದಗಿಸುವ ನಿಟ್ಟಿನಲ್ಲಿ ಭಾರತದಲ್ಲಿಯೇ ಕಾರು ಉತ್ಪಾದನೆಗೆ ಎಲೋನ್ ಮಸ್ಕ್ ಮುಂದಾಗಿದ್ದಾರೆ.

ಇದನ್ನೂ ಓದಿ : ವಿಪ್ರೊ ಉದ್ಯೋಗಿಗಳಿಗೆ ವಾರದಲ್ಲಿ 3 ದಿನ 'ವರ್ಕ್ ಫ್ರಂ ಆಫೀಸ್' ಕಡ್ಡಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.