ETV Bharat / business

ಸ್ವಿಗ್ಗಿ ಐಪಿಒಗಾಗಿ ಸಕಲ ಸಿದ್ಧತೆ: 1 ಬಿಲಿಯನ್ ಡಾಲರ್ ಬಂಡವಾಳ ಸಂಗ್ರಹದ ಗುರಿ

ಸ್ವಿಗ್ಗಿ ಐಪಿಒಗಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಕಂಪನಿಯ ಸಿಇಒ ಶ್ರೀಹರ್ಷ ಮಜೆಟಿ ಹೇಳಿದ್ದಾರೆ.

All kinds of preparations on for Swiggy's IPO: Co-founder

author img

By ETV Bharat Karnataka Team

Published : Jan 16, 2024, 2:43 PM IST

ನವದೆಹಲಿ: ಆನ್​ಲೈನ್ ಫುಡ್ ಡೆಲಿವರಿ ಪ್ಲಾಟ್​ಫಾರ್ಮ್​ ಸ್ವಿಗ್ಗಿಯ ಐಪಿಒ ಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಸ್ವಿಗ್ಗಿ ಸಹ ಸಂಸ್ಥಾಪಕ ಮತ್ತು ಸಿಇಒ ಶ್ರೀಹರ್ಷ ಮಜೆಟಿ ಹೇಳಿದ್ದಾರೆ. ಈ ವರ್ಷಾಂತ್ಯಕ್ಕೆ ಹೊರಬರಲಿರುವ ಐಪಿಒ ಮೂಲಕ 1 ಬಿಲಿಯನ್ ಡಾಲರ್ ಬಂಡವಾಳ ಸಂಗ್ರಹದ ಗುರಿಯನ್ನು ಸ್ವಿಗ್ಗಿ ಹಾಕಿಕೊಂಡಿದೆ.

"ನಾವು ನಮ್ಮ ಐಪಿಒಗೆ ತಯಾರಿ ನಡೆಸುತ್ತಿದ್ದೇವೆ. ಇದಕ್ಕಾಗಿ ನಾವು ಆಡಳಿತ ಮಂಡಳಿಗೆ ಈಗಾಗಲೇ ಸ್ವತಂತ್ರ ನಿರ್ದೇಶಕರನ್ನು ನೇಮಿಸಿದ್ದೇವೆ ಮತ್ತು ಎಲ್ಲಾ ರೀತಿಯ ಸಿದ್ಧತೆಗಳು ನಡೆಯುತ್ತಿವೆ" ಎಂದು ಮಜೆಟಿ ಮನಿಕಂಟ್ರೋಲ್​ಗೆ ತಿಳಿಸಿದರು.

ಐಪಿಒ ಪ್ರಕ್ರಿಯೆಗಾಗಿ ಕಂಪನಿಯು ಕೋಟಕ್ ಮಹೀಂದ್ರಾ ಕ್ಯಾಪಿಟಲ್, ಸಿಟಿ ಮತ್ತು ಜೆಪಿ ಮೋರ್ಗಾನ್, ಬೋಫಾ ಸೆಕ್ಯುರಿಟೀಸ್, ಜೆಫ್ರೀಸ್ ಸೇರಿದಂತೆ ಏಳು ಹೂಡಿಕೆ ಬ್ಯಾಂಕುಗಳನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಸ್ವಿಗ್ಗಿಯ ಪ್ರತಿಸ್ಪರ್ಧಿ ಜೊಮಾಟೊ 2021 ರಲ್ಲಿ ಐಪಿಒ ಬಿಡುಗಡೆ ಮಾಡಿತ್ತು. ಜೊಮಾಟೊವನ್ನು ಷೇರು ಮಾರುಕಟ್ಟೆಯಲ್ಲಿ ಲಿಸ್ಟಿಂಗ್ ಮಾಡಿರುವುದು ರಿಟೇಲ್ ಹೂಡಿಕೆದಾರರ ಬಗ್ಗೆ ಮತ್ತು ಅವರು ಆಹಾರ ವಿತರಣಾ ಮಾರುಕಟ್ಟೆಯನ್ನು ಹೇಗೆ ಗ್ರಹಿಸುತ್ತಾರೆ ಎಂಬುದರ ಬಗ್ಗೆ ಉತ್ತಮ ತಿಳುವಳಿಕೆಯನ್ನು ಪಡೆಯಲು ಸ್ವಿಗ್ಗಿಗೆ ಸಹಾಯ ಮಾಡಿದೆ ಎಂದು ಮೆಜೆಟಿ ಹೇಳಿದ್ದಾರೆ.

ಸ್ವಿಗ್ಗಿಯ ಪ್ರಮುಖ ಆಹಾರ-ವಿತರಣಾ ವ್ಯವಹಾರವು ಶೇಕಡಾ 17 ರಷ್ಟು ಬೆಳೆದಿದೆ ಮತ್ತು ಹಣಕಾಸು ವರ್ಷದ ಮೊದಲಾರ್ಧದಲ್ಲಿ 1.43 ಬಿಲಿಯನ್ ಡಾಲರ್ ಒಟ್ಟು ಸರಕು ಮೌಲ್ಯವನ್ನು (ಜಿಎಂವಿ) ತಲುಪಿಸಿದೆ ಎಂದು ಸ್ವಿಗ್ಗಿಯ ಹೂಡಿಕೆದಾರ ಪ್ರೊಸಸ್ ತನ್ನ ಹಣಕಾಸು ಫೈಲಿಂಗ್​ನಲ್ಲಿ ಹೇಳಿದೆ.

ಸ್ವಿಗ್ಗಿಯ ಆಹಾರ ವಿತರಣಾ ವ್ಯವಹಾರವು ಕಳೆದ ವರ್ಷದಲ್ಲಿ ಲಾಭದತ್ತ ತಿರುಗಿದೆ ಮತ್ತು 2024 ರಲ್ಲಿ ಇನ್ನಷ್ಟು ಲಾಭದಾಯಕವಾಗಿ ಬೆಳೆಯಲು ಮತ್ತು ಉತ್ತಮಗೊಳ್ಳುವತ್ತ ಗಮನ ಹರಿಸಲಾಗುವುದು ಎಂದು ಮಜೆಟಿ ಹೇಳಿದರು.

ಸ್ವಿಗ್ಗಿಯ ತ್ವರಿತ ವಾಣಿಜ್ಯ ವ್ಯವಹಾರವಾದ ಇನ್​ಸ್ಟಾಮಾರ್ಟ್ ಫುಡ್​ ಡೆಲಿವರಿಗಿಂತ ದೊಡ್ಡ ವ್ಯವಹಾರವಾಗಿ ವಿಸ್ತರಣೆಯಾಗಬಹುದು. ದಿನಸಿ ಅಥವಾ ಸಂಬಂಧಿತ ವಸ್ತುಗಳನ್ನು ಆರ್ಡರ್ ಮಾಡಲು ಬಯಸುವ ಗ್ರಾಹಕರ ಸಂಖ್ಯೆ ರೆಸ್ಟೋರೆಂಟ್ ಆಹಾರವನ್ನು ತಮ್ಮ ಮನೆ ಬಾಗಿಲಿಗೆ ತರಿಸುವ ಗ್ರಾಹಕರ ಸಂಖ್ಯೆಗಿಂತ ದೊಡ್ಡದಾಗಿರುತ್ತದೆ. ಅಲ್ಲದೆ ತನ್ನ ಕಾರ್ಯಾಚರಣೆಗಳನ್ನು ಸುಧಾರಿಸಲು ಸ್ವಿಗ್ಗಿ ಈಗ ಜನರೇಟಿವ್ ಎಐ (ಜೆನ್ ಎಐ) ಅಳವಡಿಸಿಕೊಳ್ಳಲು ಪ್ರಯೋಗಗಳನ್ನು ಮಾಡುತ್ತಿದೆ ಎಂದು ಮಜೆಟಿ ತಿಳಿಸಿದರು.

ಇದನ್ನೂ ಓದಿ : ಸ್ಯಾಮ್​ಸಂಗ್ ಹಿಂದಿಕ್ಕಿ ವಿಶ್ವದ ನಂ.1 ಸ್ಮಾರ್ಟ್​ಫೋನ್​ ಕಂಪನಿಯಾದ ಆ್ಯಪಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.