ಮುಂಬೈ: ಷೇರುಪೇಟೆಯಲ್ಲಿ ಮಹಾ ಕುಸಿತ ಮುಂದುವರೆದಿದೆ. ಸೆನ್ಸೆಕ್ಸ್ 1400 ಇಳಿಕೆ ಕಂಡು ಹೂಡಿಕೆದಾರರಲ್ಲಿ ತಲ್ಲಣ ಸೃಷ್ಟಿಸಿದೆ. ಸೋಮವಾರದ ಷೇರುಪೇಟೆ ಆರಂಭವಾದ ತಕ್ಷಣವೇ ಭಾರಿ ಪ್ರಮಾಣದಲ್ಲಿ ಷೇರುಗಳು ಕುಸಿತ ಕಂಡವು.
ಬಿಎಸ್‌ಇ ಬೆಂಚ್‌ಮಾರ್ಕ್ ಸೆನ್ಸೆಕ್ಸ್ 1400 ಪಾಯಿಂಟ್‌ಗಳಷ್ಟು ಕುಸಿದು, 52,840 ಅಂಕಗಳ ಕೆಳಗೆ ವಹಿವಾಟು ನಡೆಸುತ್ತಿದೆ. ನಿಫ್ಟಿ ಕೂಡ ತೀವ್ರ ನಷ್ಟದಲ್ಲಿದ್ದು, 411 ಅಂಕಗಳ ನಷ್ಟದೊಂದಿಗೆ 16,000 ಅಂಕಗಳ ಕೆಳಗೆ ವ್ಯವಹಾರ ಮುಂದುವರೆಸಿದೆ. ಬಹುತೇಕ ಪ್ರಮುಖ 30 ಷೇರುಗಳು ಕೆಂಪು ಬಣ್ಣದಲ್ಲಿದ್ದು, ನಷ್ಟವನ್ನು ತೋರಿಸುತ್ತಿವೆ.
ಐಸಿಐಸಿಐ ಬ್ಯಾಂಕ್ ಮತ್ತು ಬಜಾಜ್ ಷೇರುಗಳು ಶೇಕಡಾ 4 ಕ್ಕಿಂತ ಹೆಚ್ಚು ಕುಸಿತ ಕಂಡಿವೆ. 100ಕ್ಕೂ ಹೆಚ್ಚು ಕಂಪನಿಗಳ ಷೇರುಗಳು 52 ವಾರಗಳ ಕನಿಷ್ಠ ಮಟ್ಟಕ್ಕೆ ಕುಸಿದಿವೆ ಎಂದು ಉದ್ಯಮ ಮೂಲಗಳು ತಿಳಿಸಿವೆ.
ಇದನ್ನುಓದಿ:ರಷ್ಯಾದ ಜೊತೆ ತೈಲ ಖರೀದಿಗೆ ಶ್ರೀಲಂಕಾ ಮುಕ್ತವಾಗಿದೆ: ಪ್ರಧಾನಿ ವಿಕ್ರಮಸಿಂಘೆ