ETV Bharat / business

Stock Market Today: ಸತತ 2ನೇ ದಿನ ಕುಸಿತ; BSE 366 & Nifty 115 ಅಂಕ ಇಳಿಕೆ - ಎನ್ಎಸ್ಇ ನಿಫ್ಟಿ ಸೂಚ್ಯಂಕ

Stock Market: 30 ಶೇರುಗಳ ಬಿಎಸ್ಇ ಸೆನ್ಸೆಕ್ಸ್ 366 ಪಾಯಿಂಟ್ಸ್ ಅಥವಾ ಶೇಕಡಾ 0.56 ರಷ್ಟು ಕುಸಿದು 65,323 ಕ್ಕೆ ತಲುಪಿದೆ. ಎನ್ಎಸ್ಇ ನಿಫ್ಟಿ ಸೂಚ್ಯಂಕ 115 ಪಾಯಿಂಟ್ಸ್ ಅಥವಾ ಶೇಕಡಾ 0.59 ರಷ್ಟು ಕುಸಿದು 19,428 ಕ್ಕೆ ತಲುಪಿದೆ.

Sensex tanks 366 points, Nifty settles below 19,450

author img

By

Published : Aug 11, 2023, 6:33 PM IST

ಮುಂಬೈ : ಭಾರತೀಯ ಶೇರು ಸೂಚ್ಯಂಕಗಳು ಶುಕ್ರವಾರ ಸತತ ಎರಡನೇ ದಿನಕ್ಕೆ ಕುಸಿತವನ್ನು ಮುಂದುವರಿಸಿವೆ. ಫಾರ್ಮಾ, ಹೆಲ್ತ್ ಕೇರ್, ಬ್ಯಾಂಕ್, ಹಣಕಾಸು, ಗ್ರಾಹಕ ಸರಕುಗಳು, ಲೋಹ ಮತ್ತು ಆಟೋಮೊಬೈಲ್ ಶೇರುಗಳು ದೇಶೀಯ ಸೂಚ್ಯಂಕಗಳನ್ನು ಕೆಳಮಟ್ಟಕ್ಕೆ ಇಳಿಸಿದವು.

30 ಶೇರುಗಳ ಬಿಎಸ್ಇ ಸೆನ್ಸೆಕ್ಸ್ 366 ಪಾಯಿಂಟ್ಸ್ ಅಥವಾ ಶೇಕಡಾ 0.56 ರಷ್ಟು ಕುಸಿದು 65,323 ಕ್ಕೆ ತಲುಪಿದೆ. ಎನ್ಎಸ್ಇ ನಿಫ್ಟಿ ಸೂಚ್ಯಂಕ 115 ಪಾಯಿಂಟ್ಸ್ ಅಥವಾ ಶೇಕಡಾ 0.59 ರಷ್ಟು ಕುಸಿದು 19,428 ಕ್ಕೆ ತಲುಪಿದೆ. ಮಧ್ಯಮ ಮತ್ತು ಸ್ಮಾಲ್ ಕ್ಯಾಪ್ ಶೇರುಗಳು ಕೂಡ ಇಳಿಕೆಯಲ್ಲಿ ಕೊನೆಗೊಂಡವು. ನಿಫ್ಟಿ ಮಿಡ್ ಕ್ಯಾಪ್ 100 ಶೇಕಡಾ 0.45 ರಷ್ಟು ಮತ್ತು ನಿಫ್ಟಿ ಸ್ಮಾಲ್ ಕ್ಯಾಪ್ 100 ಶೇಕಡಾ 0.18 ರಷ್ಟು ಕುಸಿದಿದೆ. ಫಿಯರ್ ಗೇಜ್ ಇಂಡಿಯಾ ವಿಐಎಕ್ಸ್ ಶೇರು ಶೇಕಡಾ 1.07 ರಷ್ಟು ಏರಿಕೆಯಾಗಿ 11.52 ಕ್ಕೆ ತಲುಪಿದೆ. ಏಷ್ಯಾದ ಹೆಚ್ಚಿನ ಶೇರು ಮಾರುಕಟ್ಟೆಗಳು ಇಂದು ಕೆಳಮಟ್ಟದಲ್ಲಿಯೇ ವಹಿವಾಟು ನಡೆಸಿದವು.

ಚಿಲ್ಲರೆ ಹಣದುಬ್ಬರ ಮುನ್ಸೂಚನೆ ಮತ್ತು ನಗದು ಹರಿವು ನಿಯಂತ್ರಣ ಕ್ರಮಗಳನ್ನು ಹೆಚ್ಚಿಸುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನಿರ್ಧಾರದಿಂದ ಹೂಡಿಕೆದಾರರು ಜಾಗ್ರತೆಯಿಂದ ವಹಿವಾಟು ನಡೆಸುತ್ತಿದ್ದಾರೆ. ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಹಣದುಬ್ಬರವು ಶೇಕಡಾ 6.20ಕ್ಕೆ ಏರಿಕೆಯಾಗಬಹುದು ಎಂದು ಆರ್​ಬಿಐ ಅಂದಾಜಿಸಿದೆ.

ಇದು ಹಿಂದಿನ ಮುನ್ಸೂಚನೆಯಾದ ಶೇಕಡಾ 5.20 ಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಹೆಚ್ಚುವರಿ ನಗದು ಹರಿವನ್ನು ಸಂಗ್ರಹಿಸಲು ನಗದು ಮೀಸಲು ಅನುಪಾತ (ಸಿಆರ್ಆರ್) ಅಡಿಯಲ್ಲಿ ಹೆಚ್ಚಿದ ಠೇವಣಿಗಳ ಹೆಚ್ಚಿನ ಭಾಗವನ್ನು ಮೀಸಲಿಡುವಂತೆ ಕೇಂದ್ರ ಬ್ಯಾಂಕ್ ಬ್ಯಾಂಕ್​ಗಳಿಗೆ ಸೂಚಿಸಿದೆ. ಆದಾಗ್ಯೂ ಆರ್​ಬಿಐ ತನ್ನ ಇದು ರೆಪೊ ದರವನ್ನು ಶೇಕಡಾ 6.50 ಕ್ಕೆ ಸ್ಥಿರವಾಗಿ ಉಳಿಸಿಕೊಂಡಿದೆ.

ಎನ್ಎಸ್ಇಯ 15 ವಲಯ ಸೂಚ್ಯಂಕಗಳ ಪೈಕಿ 13 ಇಳಿಕೆಯಲ್ಲಿ ಕೊನೆಗೊಂಡಿವೆ. ಉಪ ಸೂಚ್ಯಂಕಗಳಾದ ನಿಫ್ಟಿ ಫಾರ್ಮಾ, ನಿಫ್ಟಿ ಹೆಲ್ತ್​ ಕೇರ್​, ನಿಫ್ಟಿ ಬ್ಯಾಂಕ್, ನಿಫ್ಟಿ ಫೈನಾನ್ಷಿಯಲ್ ಸರ್ವೀಸಸ್, ನಿಫ್ಟಿ ಎಫ್ಎಂಸಿಜಿ, ನಿಫ್ಟಿ ಮೆಟಲ್ ಮತ್ತು ನಿಫ್ಟಿ ಆಟೋ ಕ್ರಮವಾಗಿ ಶೇಕಡಾ 1.45, 1.39, 0.77, 0.87, 0.73, 0.51 ಮತ್ತು 0.43 ರಷ್ಟು ಕುಸಿದಿವೆ.

ಹಿಂದ್​​ವೇರ್ ಹೋಮ್ ಇನ್ನೋವೇಶನ್ ಶೇರುಗಳು ಶೇಕಡಾ 13.06 ರಷ್ಟು ಕುಸಿದವು. ಸೈಂಟಿಫಿಕ್, ಅಪೊಲೊ ಟೈರ್ಸ್, ಆಲ್ಕೆಮ್ ಲ್ಯಾಬ್ಸ್, ಕ್ರೆಸ್ಸಾಂಡಾ ಸೊಲ್ಯೂಷನ್ಸ್, ಅಶೋಕ ಬಿಲ್ಡ್​​ಕಾನ್ ಮತ್ತು ಧನಿ ಸರ್ವೀಸಸ್ ಶೇರುಗಳು ಶೇಕಡಾ 9.30 ರಷ್ಟು ಕುಸಿದವು. ಎಚ್​​ಡಿಎಫ್​ಸಿ ಬ್ಯಾಂಕ್, ಇನ್ಫೋಸಿಸ್ ಮತ್ತು ಬಜಾಜ್ ಫೈನಾನ್ಸ್ ಶೇರುಗಳು ಶೇಕಡಾ 1.50 ರಷ್ಟು ಕುಸಿದವು.

ಇಂಡಿಯನ್ ಓವರ್​ಸೀಸ್ ಬ್ಯಾಂಕ್ ಶೇಕಡಾ 13.14ರಷ್ಟು ಏರಿಕೆ ಕಂಡರೆ, ಕಲ್ಯಾಣ್ ಜ್ಯುವೆಲ್ಲರ್ಸ್ ಶೇಕಡಾ 11.52ರಷ್ಟು ಏರಿಕೆ ಕಂಡಿದೆ. ಪಿಟಿಸಿ ಇಂಡಸ್ಟ್ರೀಸ್, ಜಿಎಂಎಂ, ಫೌಡ್ಲರ್, ಕಿರ್ಲೋಸ್ಕರ್ ಆಯಿಲ್ ಎಂಜಿನ್ಸ್, ರೈ ಮ್ಯಾಗ್ನೇಸಿಟಾ ಇಂಡಿಯಾ, ಹಿಂದೂಸ್ತಾನ್ ಕಾಪರ್ ಶೇಕಡಾ 10 ರಷ್ಟು ಏರಿಕೆ ಕಂಡಿವೆ. ದಿನದ ವಹಿವಾಟಿನಲ್ಲಿ ವಹಿವಾಟು ನಡೆಸಿದ ಒಟ್ಟು 3,724 ಶೇರುಗಳ ಪೈಕಿ 1,524 ಶೇರುಗಳು ಇಳಿಕೆಯಲ್ಲಿ ಕೊನೆಗೊಂಡರೆ 2,049 ಶೇರುಗಳು ಏರಿಕೆ ಕಂಡವು. ಉಳಿದ 151 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.

ಇದನ್ನೂ ಓದಿ : Onion Price: ಈರುಳ್ಳಿ ಬೆಲೆ ಏರಿಕೆ ಆತಂಕ; ಬಫರ್ ಸ್ಟಾಕ್ ಬಿಡುಗಡೆ ಆರಂಭಿಸಿದ ಕೇಂದ್ರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.