ETV Bharat / business

ಹಳೆ ಪಿಂಚಣಿ ಯೋಜನೆಗೆ ಎನ್‌ಪಿಎಸ್ ಹಣ ನೀಡಲು ನಿರಾಕರಿಸಿದ ಸೀತಾರಾಮನ್

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೊಸ ಪಿಂಚಣಿ ಯೋಜನೆಗೆ (ಎನ್‌ಪಿಎಸ್) ಮೀಸಲಿಟ್ಟ ಹಣದ ಬಗ್ಗೆ ದೊಡ್ಡ ಘೋಷಣೆ ಮಾಡಿದ್ದಾರೆ. ಹಳೆಯ ಪಿಂಚಣಿ ಯೋಜನೆಗೆ (OPS) ಈ ಹಣವನ್ನು ರಾಜ್ಯ ಸರ್ಕಾರಗಳಿಗೆ ನೀಡಲು ನಿರಾಕರಿಸಿದ್ದಾರೆ. ಏಕೆ ಎಂಬುದು ತಿಳಿಯಿರಿ..

Sitharaman refuses to provide NPS funds  provide NPS funds for old pension scheme  New Pension Scheme  Old Pension Scheme  Union Finance Minister Nirmala Sitharaman  NPS can be collected from the Centre  ಹಳೆಯ ಪಿಂಚಣಿ ಯೋಜನೆ  ಎನ್‌ಪಿಎಸ್ ಹಣ ನೀಡಲು ನಿರಾಕರಿಸಿದ ಸೀತಾರಾಮನ್  ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ವಾಗ್ದಾಳಿ  ಗೆಹ್ಲೋಟ್ ವಿರುದ್ಧ ವಾಗ್ದಾಳಿ ನಡೆಸಿದ ಸೀತಾರಾಮನ್
ಹಳೆಯ ಪಿಂಚಣಿ ಯೋಜನೆಗೆ ಎನ್‌ಪಿಎಸ್ ಹಣ ನೀಡಲು ನಿರಾಕರಿಸಿದ ಸೀತಾರಾಮನ್
author img

By

Published : Feb 21, 2023, 11:32 AM IST

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಹೊಸ ಪಿಂಚಣಿ ಯೋಜನೆಗೆ (ಎನ್‌ಪಿಎಸ್) ಮೀಸಲಿಟ್ಟ ಹಣವನ್ನು ಹಳೆಯ ಪಿಂಚಣಿ ಯೋಜನೆಗೆ (ಒಪಿಎಸ್) ರಾಜ್ಯ ಸರ್ಕಾರಗಳಿಗೆ ನೀಡಲು ನಿರಾಕರಿಸಿದ್ದಾರೆ. ಯಾವುದೇ ಕಾರಣಕ್ಕಾಗಿ ಯಾವುದೇ ರಾಜ್ಯವು ಎನ್‌ಪಿಎಸ್‌ಗೆ ಹಣವನ್ನು ಕೇಂದ್ರದಿಂದ ತೆಗೆದುಕೊಳ್ಳಬಹುದೆಂದು ನಿರ್ಧರಿಸಿದರೆ ಅದು ಲಭ್ಯವಿರುವುದಿಲ್ಲ ಎಂದು ಹಣಕಾಸು ಸಚಿವರು ಹೇಳಿದ್ದಾರೆ.

ರಾಜಸ್ಥಾನವು ಇತ್ತೀಚೆಗೆ ತನ್ನ ರಾಜ್ಯ ಉದ್ಯೋಗಿಗಳಿಗೆ ಒಪಿಎಸ್ ಅನ್ನು ಘೋಷಿಸಿದ್ದನ್ನು ಇಲ್ಲಿ ಉಲ್ಲೇಖಿಸಿರುವುದು ಮುಖ್ಯವಾಗಿದೆ. ಇನ್ನು ಹಿಮಾಚಲ ಪ್ರದೇಶದಲ್ಲಿಯೂ ಕಾಂಗ್ರೆಸ್ ಸರ್ಕಾರ OPS ಅನ್ನು ಘೋಷಿಸಿದೆ. ಹಣಕಾಸು ಸಚಿವರ ಇತ್ತೀಚಿನ ಘೋಷಣೆಯು ಈ ಹಳೆಯ ಪಿಂಚಣಿ ಯೋಜನೆಗೆ ಆಘಾತನ್ನುಂಟು ಮಾಡಿದೆ. ಇದು ನೌಕರನ ಹಣವಾಗಿದ್ದು, ನಿವೃತ್ತಿಯ ಸಮಯದಲ್ಲಿ ಅಥವಾ ಉದ್ಯೋಗಿಗೆ ಅಗತ್ಯವಿರುವಾಗ ಹಣವು ನೌಕರನ ಕೈಗೆ ಸೇರುತ್ತದೆ. ಸೋಮವಾರ ಇಲ್ಲಿನ ಖಾಸಗಿ ಹೋಟೆಲ್‌ವೊಂದರಲ್ಲಿ ಬಜೆಟ್ ಕುರಿತು ಚರ್ಚೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸೀತಾರಾಮನ್, ಸಂಗ್ರಹಿಸಿದ ಹಣ ರಾಜ್ಯ ಸರ್ಕಾರಕ್ಕೆ ಹೋಗುವುದಿಲ್ಲ. ಸರಿಯಾದ ಸಮಯ ಬಂದಾಗ ಮಾತ್ರ ಈ ಹಣವನ್ನು ಉದ್ಯೋಗಸ್ಥರಿಗೆ ನೀಡಲಾಗುವುದು ಎಂದರು

ರಾಜಸ್ಥಾನ ಸರ್ಕಾರ ನಡೆಸುತ್ತಿರುವ ಉಚಿತ ಯೋಜನೆಗಳ ಕುರಿತು ಮಾತನಾಡಿದ ಸೀತಾರಾಮನ್, ಸರ್ಕಾರದ ಆರ್ಥಿಕ ಸ್ಥಿತಿ ಉತ್ತಮವಾಗಿದ್ದಾಗ ನೀವು ಅಂತಹ ಯೋಜನೆಗಳನ್ನು ಮುಂದುವರಿಸಬಹುದು. ನಿಮ್ಮ ಬಜೆಟ್‌ನಲ್ಲಿ ಅವುಗಳನ್ನು ಒದಗಿಸಿ ಎಂದು ಹೇಳಿದ ಅವರು, ನಿಮ್ಮ ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲದಿದ್ದರೆ, ನೀವು ಬಜೆಟ್‌ ಹಣದಲ್ಲಿ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದರೆ ಮತ್ತು ಅದಕ್ಕಾಗಿ ಸಾಲ ತೆಗೆದುಕೊಳ್ಳುತ್ತಿದ್ದೀರಿ ಎಂದರೆ ಸರಿಯಲ್ಲ. ಈ ಹಣವನ್ನು ವಾಪಸ್​ ಕೊಡುವವರು ಯಾರು?.. ಅದಕ್ಕಾಗಿಯೇ ಉಚಿತ ಊಟವಿಲ್ಲ ಎಂದು ಕೇಂದ್ರ ಸಚಿವರು ಹೇಳಿದರು.

ಇಂತಹ ಯೋಜನೆಗಳನ್ನು ತರಲು ರಾಜ್ಯಗಳು ತಮ್ಮ ಸ್ವಂತ ಸಂಪನ್ಮೂಲಗಳಿಂದ ಹಣವನ್ನು ಸಂಗ್ರಹಿಸಿ ತೆರಿಗೆಯಿಂದ ಗಳಿಸಬೇಕು. ರಾಜ್ಯಗಳು ಉಚಿತ ಯೋಜನೆಗಳಿಗೆ ತಮ್ಮ ಹೊರೆಯನ್ನು ಕೇಂದ್ರದ ಮೇಲೆ ಹೊರಿಸುವುದು ತಪ್ಪು. ರಾಜಕೀಯ ಆಧಾರದ ಮೇಲೆ ಬಾರ್ಮರ್ ಪೆಟ್ರೋ ಕೆಮಿಕಲ್ಸ್ ಹಬ್ ಕಾಮಗಾರಿ ನಿಲ್ಲಿಸುವ ಪ್ರಶ್ನೆಗೆ ಸೀತಾರಾಮನ್ ಪ್ರತಿಕ್ರಿಯಿಸಿ, ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ ಆರೋಪ ಮಾಡುವ ಹಕ್ಕು ಕೈ ನಾಯಕರಿಗೆ ಇಲ್ಲ. ಮೋದಿ ಸರಕಾರವನ್ನು ದೂರುವ ಹಕ್ಕು ಕಾಂಗ್ರೆಸ್‌ಗೆ ಇಲ್ಲ. ಇದು ನರ್ಮದೆಯ ನೀರನ್ನು ಗುಜರಾತ್ ಜನರಿಗೆ ತಲುಪುವುದನ್ನು ನಿಲ್ಲಿಸುತ್ತದೆ ಎಂದರು.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ವಾಗ್ದಾಳಿ ನಡೆಸಿದ ಸೀತಾರಾಮನ್, ಕಾಂಗ್ರೆಸ್ ಸಿಎಂ ಡಿಕ್ಷನರಿ ಒಂದೇ ಆಗಿರುತ್ತದೆ. ಅವರು ಎಲ್ಲವನ್ನೂ ರಾಜಕೀಯ ಮಾಡುತ್ತಾರೆ.. ನಾನು ಮುಖ್ಯಮಂತ್ರಿಯನ್ನು ಗೌರವಿಸುತ್ತೇನೆ ಎಂದು ಕಾಂಗ್ರೆಸ್​ಗೆ ಟಾಂಗ್​ ಕೊಟ್ಟರು. ಇನ್ನು ಬಿಜೆಪಿಯೇತರ ಅಥವಾ ಕಾಂಗ್ರೆಸ್​ ರಾಜ್ಯ ಸರ್ಕಾರಗಳು ಎನ್‌ಪಿಎಸ್‌ ಬದಲು ಒಪಿಎಸ್​ ಜಾರಿಗೆ ತರುವಂತೆ ಕ್ರೇಂದ್ರದ ಮೇಲೆ ಒತ್ತಡ ಹೇರುತ್ತಿವೆ. ಆ ಪೈಕಿ ಕೆಲ ರಾಜ್ಯ ಸರ್ಕಾರಗಳು ಈಗಾಗಲೇ ಎನ್‌ಪಿಎಸ್‌ (NPS) ರದ್ದುಪಡಿಸಿ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೊಳಿಸುವ ನಿರ್ಧಾರವನ್ನೂ ಕೈಗೊಂಡಿವೆ.

ಓದಿ: ಎನ್​​ಪಿಎಸ್ ರದ್ದತಿಗೆ ಆಗ್ರಹಿಸಿ ಸರ್ಕಾರಿ ನೌಕರರಿಂದ ಪ್ರತಿಭಟನೆ: ಫ್ರೀಡಂಪಾರ್ಕ್ ಬಳಿ ಟ್ರಾಫಿಕ್ ಜಾಮ್

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.