ಮುಂಬೈ: ಕಳೆದ ಕೆಲ ದಿನಗಳಿಂದ ಮುಂಬೈ ಷೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ ಹೆಚ್ಚಾಗಿದ್ದು, ಇಂದು ಸಹ ದಾಖಲೆಯ 1,158 ಅಂಶ ಸೆನ್ಸೆಕ್ಸ್ ಕುಸಿತ ಕಂಡಿದೆ. ಹೀಗಾಗಿ, ಪ್ರಮುಖ ಬ್ಯಾಂಕ್ಗಳ ಷೇರು ಮೌಲ್ಯದಲ್ಲಿ ಗಣನೀಯವಾದ ಇಳಿಕೆ ಕಂಡು ಬಂದಿದೆ.
ಮುಂಬೈ ಷೇರುಪೇಟೆಯಲ್ಲಿ ಸಂವೇದಿ ಸೂಚ್ಯಂಕ ಶೇ. 2.14ರಷ್ಟು ಇಳಿಕೆಯಾಗಿದ್ದು, 52.930 ಅಂಶ ತಲುಪಿದೆ. ನಿಫ್ಟಿಯಲ್ಲೂ 359.10 ಅಂಶ ಇಳಿಕೆಯಾಗಿ 15,808ನಲ್ಲಿ ವಹಿವಾಟು ಮುಗಿಸಿದೆ.
ಇದನ್ನೂ ಓದಿ: ರೆಪೋ ದರ ಏರಿಕೆ... ಠೇವಣಿದಾರರಿಗೆ ಖುಷಿ: ಸಾಲಗಾರರಿಗೆ ಬಿಸಿ..!
ಷೇರು ಮಾರುಕಟ್ಟೆಯಲ್ಲಿ ಇಳಿಕೆ ಕಂಡು ಬಂದಿರುವ ಕಾರಣ ಬ್ಯಾಂಕಿಂಗ್ ಕ್ಷೇತ್ರದ ಇಂಡಸ್ಬ್ಯಾಂಕ್, HDFC ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಬಜಾಜ್ ಫಿನ್ಕಾರ್ಫ್ ಸೇರಿದಂತೆ ಪ್ರಮುಖ ಷೇರುಗಳಲ್ಲಿ ಕುಸಿತ ಕಂಡು ಬಂದಿದೆ. ಜಾಗತಿಕ ಆರ್ಥಿಕತೆಯಲ್ಲಿ ಹಣದುಬ್ಬರ ಹಾಗೂ ರೆಪೋ ದರಕ್ಕೆ ಸಂಬಂಧಿಸಿದಂತೆ ಆರ್ಬಿಐ ತೆಗೆದುಕೊಂಡಿರುವ ನಿರ್ಧಾರದಿಂದಾಗಿ ಷೇರು ಪೇಟೆಯಲ್ಲಿ ಇಷ್ಟೊಂದು ಇಳಿಕೆ ಕಂಡು ಬಂದಿದೆ ಎನ್ನಲಾಗ್ತಿದೆ.
ಡಾಲರ್ ಎದುರು ಕುಸಿದ ರೂಪಾಯಿ: ಮುಂಬೈ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ನಲ್ಲಿ ದಿಢೀರ್ ಕುಸಿತವಾಗಿರುವ ಕಾರಣ ಡಾಲರ್ ಎದುರು ರೂಪಾಯಿ ಮತ್ತಷ್ಟು ಕುಸಿತಗೊಂಡಿದೆ. ದಿನದ ವ್ಯವಹಾರದಲ್ಲಿ 77.63 ಪೈಸೆಗೆ ಕುಸಿದಿದ್ದ ರೂಪಾಯಿ, ದಿನದಾಂತ್ಯಕ್ಕೆ 77.50 ಪೈಸೆಗೆ ಸ್ಥಿರಗೊಂಡು ವ್ಯವಹಾರ ಮುಗಿಸಿದೆ.