ಬೆಂಗಳೂರು: ಯಾವ ನಗರದಲ್ಲಿ ಭಾರತದ ಹೆಚ್ಚು ಕೋಟ್ಯಧೀಶರು ವಾಸಿಸುತ್ತಾರೆ ಎಂಬ ಕುತೂಹಲ ಇರುವುದು ಸಹಜ. ಈ ಸಂಬಂಧ ಹೆನ್ಲಿ ಅಂಡ್ ಪಾರ್ಟನರ್ ಸಮೀಕ್ಷೆ ನಡೆಸಿದ್ದು, ವಿಶ್ವದ ಶ್ರೀಮಂತ ನಗರಗಳ ವರದಿ 2023 ಕೂಡ ಬಿಡುಗಡೆಯಾಗಿದೆ. ಅದರ ಅನುಸಾರ ನ್ಯೂಯಾರ್ಕ್ ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ. ನ್ಯೂಯಾರ್ಕ್ ನಗರದಲ್ಲಿ ಅತಿ ಹೆಚ್ಚಿನ ಬಿಲಿಯನೇರ್ಗಳು ವಾಸಿಸುತ್ತಾರೆ. ಮತ್ತೊಂದು ಕುತೂಹಲದ ವಿಚಾರ ಎಂದರೆ, ಭಾರತದ ಐದು ನಗರಗಳು ಕೂಡ ಮಿಲಿಯನೇರ್ ಪಟ್ಟಿಯಲ್ಲಿ ಸೇರಿಸಿದೆ. ಭಾರತದ ಈ ನಗರಗಳಲ್ಲಿ ಅನೇಕ ಮಿಲಿಯನೇರ್ಗಳು ವಾಸಿಸುತ್ತಿದ್ದಾರೆ.
ಶ್ರೀಮಂತ ನಗರ ಮುಂಬೈ: ಹೆನ್ಲಿ ಅಂಡ್ ಪಾರ್ಟನರ್ ವರದಿಯ ಪ್ರಕಾರ, ಭಾರತದ ಈ ಐದು ನಗರಗಳಲ್ಲಿ ಅತಿ ಹೆಚ್ಚು ಮಿಲೇನಿಯರ್ಗಳಿದ್ದಾರೆ. ಇಲ್ಲಿ ಒಟ್ಟು 1.25 ಲಕ್ಷ ಮಿಲಿಯನೇರ್ ಗಳು ವಾಸಿಸುತ್ತಿದ್ದಾರೆ. ವಿಶ್ವ ಶ್ರೀಮಂತ ನಗರಗಳ ವರದಿ 2023ರ ಅನುಸಾರ, ಜಗತ್ತಿನಲ್ಲಿ ಮುಂಬೈಗೆ 21ನೇ ಸ್ಥಾನ ಲಭಿಸಿದೆ. ಭಾರತದಲ್ಲೇ ಅತಿ ಹೆಚ್ಚು ಮಿಲೇನಿಯರ್ಗಳು ವಾಸಿಸುವ ನಗರ ಇದಾಗಿದ್ದು, ಒಟ್ಟು, 59,400 ಮಿಲಿಯನೇರ್ಗಳು ವಾಸಿಸುತ್ತಿದ್ದಾರೆ.
ಎರಡನೇ ಸ್ಥಾನ ದೆಹಲಿಗೆ: ವಾಣಿಜ್ಯ ನಗರ ಮುಂಬೈ ಬಳಿಕ, 30, 200 ಮಿಲಿಯನೇರ್ಗಳು ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ವಿಶ್ವದಲ್ಲೇ ಶ್ರೀಮಂತರರಿರುವ ನಗರದಲ್ಲಿ ಇದು 36ನೇ ಸ್ಥಾನ ಪಡೆದುಕೊಂಡಿದೆ. ಭಾರತದ ಅನುಸಾರ ಇದು ಎರಡನೇ ಅತಿ ಹೆಚ್ಚು ಮಿಲಿಯನೇರ್ಗಳು ವಾಸಿಸುವ ಸ್ಥಳವಾಗಿದೆ. ಇಲ್ಲಿ 30,200 ಜನ ಮಿಲಿಯನೇರ್ಗಳು ವಾಸಿಸುತ್ತಿದ್ದಾರೆ.
ಮೂರನೇ ಸ್ಥಾನದಲ್ಲಿ ಬೆಂಗಳೂರು: ಸಿಲಿಕಾನ್ ಸಿಟಿ ಕೂಡ ಈ ಪಟ್ಟಿಯಲ್ಲಿದೆ. ಬೆಂಗಳೂರು ಜಾಗತಿಕ ಪಟ್ಟಿಯಲ್ಲಿ 60ನೇ ಸ್ಥಾನ ಪಡೆದಿದ್ದು, 12,600 ಮಿಲಿಯನೇರ್ಗಳು ವಾಸಿಸುತ್ತಿದ್ದಾರೆ. ಇದರ ನಂತರ ಸ್ಥಾನದಲ್ಲಿ ಕೊಲ್ಕತ್ತಾ ಇದ್ದು, ಇಲ್ಲಿ ಸುಮಾರು 12, 100 ಮಿಲಿಯನೇರ್ಗಳು ವಾಸಿಸುತ್ತಿದ್ದಾರೆ. ಇನ್ನು ಮುತ್ತಿನ ನಗರ ಹೈದರಾಬಾದ್ನಲ್ಲಿ 11,100 ಮಿಲಿಯನೇರ್ಗಳು ಇದ್ದಾರೆ.
ನ್ಯೂಯಾರ್ಕ್ ನಗರ: ಲಂಡನ್ ಮೂಲದ ಕಂಪನಿ ಹೆನ್ಲಿ ಅಂಡ್ ಪಾರ್ಟನರ್ ವರದಿ ಅನುಸಾರ, ಜಗತ್ತಿನ 9 ಪ್ರದೇಶಗಳ 97 ನಗರಗಳ ಅಧ್ಯಯನವನ್ನು ನಡೆಸಲಾಗಿದೆ. ಇದರಲ್ಲಿ ನ್ಯೂಯಾರ್ಕ್ ನಗರ 3,40,000 ಮಿಲಿಯನೇರ್ಗಳನ್ನು ಹೊಂದಿದೆ. ಇದರ ಬಳಿಕ ಟೊಕಿಯೋ 2,90,000 ಮಿಲಿಯನೇರ್ ಹೊಂದುವ ಮೂಲಕ ಎರಡನೇ ಸ್ಥಾನದಲ್ಲಿದ್ದರೆ, ಸ್ಯಾನ್ಫ್ರಾನ್ಸಿಸ್ಕೊ ಬೇ 2,85,000 ಮಿಲಿಯನೇರ್ಗಳನ್ನು ಹೊಂದಿದೆ.
ಈ ದೇಶಗಳು ಸ್ಥಾನಪಡೆದಿವೆ: ಈ ಪಟ್ಟಿಯಲ್ಲಿ ಅಮೆರಿಕದ ನಾಲ್ಕು ನಗರಗಳು ಪ್ರಾಬಲ್ಯ ಮರೆದಿವೆ. ಅವುಗಳೆಂದರೆ ನ್ಯೂಯಾರ್ಕ್, ಕ್ಯಾಲಿಫೋರ್ನಿಯಾ, ಲಾಸ್ ಏಜಂಲೀಸ್ ಮತ್ತು ಚಿಕಾಗೋ. ಇನ್ನು ಚೀನಾದ ಬಿಜೀಂಗ್ ಮತ್ತು ಶಾಂಘೈ ಕೂಡ ಈ ರೇಸ್ನಲ್ಲಿದೆ. ನಾಲ್ಕನೇ ಸ್ಥಾನದಲ್ಲಿ ಯುರೋಪ್ನ ಲಂಡನ್ ಮಾತ್ರ ಸ್ಥಾನ ಪಡೆದಿದೆ. ನಂತರ ಸಿಂಗಾಪೂರ್, ಆಸ್ಟ್ರೇಲಿಯಾದ ಸಿಡ್ನಿ 10ನೇ ಸ್ಥಾನ ಪಡೆದುಕೊಂಡಿವೆ.
ಇದನ್ನೂ ಓದಿ: ನಿರೀಕ್ಷೆ ಮೀರಿ ಬೆಳೆದ ಚೀನಾ ಆರ್ಥಿಕತೆ: ಕೊರೊನಾ ಬಿಕ್ಕಟ್ಟಿನಿಂದ ಹೊರಬಂದ ಡ್ರ್ಯಾಗನ್