ETV Bharat / business

ಡೆಬಿಟ್, ಕ್ರೆಡಿಟ್ ಮತ್ತು ಪ್ರಿಪೇಯ್ಡ್ ಕಾರ್ಡ್‌ ವಿತರಣೆಗೆ ಸುತ್ತೋಲೆ ಹೊರಡಿಸಿದ ಆರ್​ಬಿಐ

author img

By

Published : Jul 6, 2023, 9:54 PM IST

ಕಾರ್ಡ್ ವಿತರಕರು ಗ್ರಾಹಕರಿಗೆ ಒಂದಕ್ಕಿಂತ ಹೆಚ್ಚು ’ಕಾರ್ಡ್ -ನೆಟ್‌ವರ್ಕ್‌ಗಳನ್ನು ಬಳಸಿಕೊಂಡು, ಕ್ರೆಡಿಟ್, ಡೆಬಿಟ್​​​ ಕಾರ್ಡ್‌ಗಳನ್ನು ವಿತರಿಸಬೇಕು ಎಂದು ಆರ್​ಬಿಐ ಸುತ್ತೋಲೆಯನ್ನು ಹೊರಡಿಸಿದೆ. ಒಂದೆ ನೆಟ್​ವರ್ಕ್​ ಬಳಕೆ ಮಾಡುವುದರಿಂಂದ ಏಕಸ್ವಾಮ್ಯತೆ ಆಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಆರ್​ಬಿಐ ಈ ನಿರ್ಧಾರ ಕೈಗೊಂಡಿದೆ.

rbi-issued-draft-circular-on-issuance-of-debit-credit-credit-cards-prepaid-card
ಡೆಬಿಟ್, ಕ್ರೆಡಿಟ್ ಮತ್ತು ಪ್ರಿಪೇಯ್ಡ್ ಕಾರ್ಡ್‌ ವಿತರಣೆಗೆ ಸುತ್ತೋಲೆ ಹೊರಡಿಸಿದ ಆರ್​ಬಿಐ

ನವದೆಹಲಿ : ಡೆಬಿಟ್, ಕ್ರೆಡಿಟ್ ಮತ್ತು ಪ್ರಿಪೇಯ್ಡ್ ಕಾರ್ಡ್‌ಗಳನ್ನು ಗ್ರಾಹಕರಿಗೆ ವಿತರಣೆ ಮಾಡುವ ಕುರಿತು ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾ (ಆರ್‌ಬಿಐ) ಕರಡು ಸುತ್ತೋಲೆ ಹೊರಡಿಸಿದೆ. ಈ ಕಾರ್ಡ್ ವಿತರಕರು ಗ್ರಾಹಕರಿಗೆ ಒಂದಕ್ಕಿಂತ ಹೆಚ್ಚು ಕಾರ್ಡ್ ನೆಟ್‌ವರ್ಕ್‌ಗಳಲ್ಲಿ ಕಾರ್ಡ್‌ಗಳನ್ನು ವಿತರಿಸಬೇಕು ಎಂದು ಆರ್​ಬಿಐ ನಿರ್ದೇಶಿಸಿದೆ. ವಿವಿಧ ಕಾರ್ಡ್ ನೆಟ್‌ವರ್ಕ್‌ಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಲು ಗ್ರಾಹಕರಿಗೆ ಅವಕಾಶ ಕಲ್ಪಿಸಲು ಇದೇ ವೇಳೆ ಆರ್​ಬಿಐ ಬ್ಯಾಂಕ್​ಗಳಿಗೆ ಸೂಚಿಸಿದೆ.

ಆರ್​ಬಿಐ ಹೊರಡಿಸಿರುವ ಸುತ್ತೋಲೆಯಲ್ಲಿ, ಡೆಬಿಟ್, ಕ್ರೆಡಿಟ್ ಮತ್ತು ಪ್ರಿಪೇಯ್ಡ್ ಕಾರ್ಡ್‌ಗಳ ವಿತರಣೆಗಾಗಿ ಕಾರ್ಡ್ ನೆಟ್‌ವರ್ಕ್‌ಗಳೊಂದಿಗಿನ ವ್ಯವಸ್ಥೆಗಳು ಸರಿಯಾಗಿಲ್ಲ. ’ಕಾರ್ಡ್ - ನೆಟ್‌ವರ್ಕ್‌‘ಗಳು ಮತ್ತು ಕಾರ್ಡ್ ವಿತರಕರ ( ಬ್ಯಾಂಕ್‌ಗಳು ಮತ್ತು ಬ್ಯಾಂಕೇತರರ) ವ್ಯವಸ್ಥೆಗಳು ಗ್ರಾಹಕರಿಗೆ ಅನುಕೂಲಕರ ವ್ಯವಸ್ಥೆ ಹೊಂದಿಲ್ಲ ಎಂದು ಕೇಂದ್ರ ಬ್ಯಾಂಕ್ ಹೇಳಿದೆ.

ಕಾರ್ಡ್ ವಿತರಕರು ವಿವಿಧ ಕಾರ್ಡ್ ನೆಟ್‌ವರ್ಕ್‌ಗಳ ಸೇವೆಗಳನ್ನು ಪಡೆಯುವುದನ್ನು ನಿರ್ಬಂಧಿಸುವ ಯಾವುದೇ ಕಾರ್ಡ್​ ನೆಟ್​ವರ್ಕ್​ಗಳ ಜೊತೆ ಒಪ್ಪಂದ ಮಾಡಿಕೊಳ್ಳಬಾರದು ಎಂದು ಆರ್‌ಬಿಐ ತಿಳಿಸಿದೆ. ಕಾರ್ಡ್ ವಿತರಕರು ಮತ್ತು ಕಾರ್ಡ್ ನೆಟ್‌ವರ್ಕ್‌ಗಳು ಕಾರ್ಡ್​ಗಳ ತಿದ್ದುಪಡಿ ಅಥವಾ ನವೀಕರಣದ ಸಮಯದಲ್ಲಿ ಹೊರಡಿಸಿರುವ ಸುತ್ತೋಲೆಗೆ ಅನುಗುಣವಾಗಿ ನಡೆಯುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಈ ಸುತ್ತೋಲೆ ಬಗ್ಗೆ ಏನಾದರೂ ಅಭಿಪ್ರಾಯಗಳಿದ್ದರೆ ಆಗಸ್ಟ್ 4 ರೊಳಗೆ ಸಲ್ಲಿಸುವಂತೆ ಆರ್​ಬಿಐ ಹೇಳಿದೆ.

ರೂಪಾಯಿ ಅಂತಾರಾಷ್ಟ್ರೀಕರಣ : ರೂಪಾಯಿ ಅಂತಾರಾಷ್ಟ್ರೀಕರಣಗೊಳಿಸಲು ಆರ್​ಬಿಐ ಮಹತ್ವದ ಹೆಜ್ಜೆ ಇಟ್ಟಿದೆ. ಇದು ಮುಂದಿನ ದಿನಗಳಲ್ಲಿ ವಿವಿಧ ದೇಶಗಳೊಂದಿಗೆ ಅಂತಾರಾಷ್ಟ್ರೀಯ ವ್ಯಾಪಾರ ಸಂಬಂಧವನ್ನು ವೃಧ್ಧಿಸಲು ಸಹಕರಿಸುತ್ತದೆ. ರೂಪಾಯಿಯನ್ನು ಅಂತಾರಾಷ್ಟ್ರೀಕರಣ ಮಾಡುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಬುಧವಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಭಾರತವು ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಒಂದಾಗಿದ್ದು, ಪ್ರಮುಖ ಜಾಗತಿಕ ಆರ್ಥಿಕ ಹಿಂಜರಿತಗಳ ಮಧ್ಯೆಯೂ ಆರ್ಥಿಕತೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಇದು ಭಾರತದ ರೂಪಾಯಿ ಅಂತಾರಾಷ್ಟ್ರೀಯ ಕರೆನ್ಸಿ ಸಾಮರ್ಥ್ಯವನ್ನು ಹೊಂದಿದೆ.

ಏನಿದು ರೂಪಾಯಿ ಅಂತಾರಾಷ್ಟ್ರೀಕರಣ?: ರೂಪಾಯಿ ಅಂತಾರಾಷ್ಟ್ರೀಕರಣ ಎಂಬುದು ಗಡಿಯಾಚೆಗಿನ ವಹಿವಾಟುಗಳಲ್ಲಿ ರೂಪಾಯಿಯ ಬಳಕೆಯನ್ನು ಹೆಚ್ಚಿಸುವ ಪ್ರಕ್ರಿಯೆಯಾಗಿದೆ. ಇದು ಆಮದು ಮತ್ತು ರಫ್ತು ವ್ಯಾಪಾರಕ್ಕಾಗಿ ರೂಪಾಯಿ ಬಳಕೆಯನ್ನು ಉತ್ತೇಜಿಸುತ್ತದೆ. ಇದು ಬಂಡವಾಳ ಖಾತೆ ಮತ್ತು ಚಾಲ್ತಿ ಖಾತೆಯ ವಹಿವಾಟುಗಳಲ್ಲಿ ರೂಪಾಯಿಯ ಬಳಕೆಯನ್ನು ಒಳಗೊಂಡಿರುತ್ತದೆ.

ರೂಪಾಯಿ ಅಂತಾರಾಷ್ಟ್ರೀಕರಣಕ್ಕೆ ವಿದೇಶೀ ವಿನಿಮಯ ಮಾರುಕಟ್ಟೆಯನ್ನು ಮತ್ತಷ್ಟು ಸರಳಗೊಳಿಸುವ ಅಗತ್ಯವಿದೆ. ಜೊತೆಗೆ ಯಾವುದೇ ನಿರ್ಬಂಧಗಳಿಲ್ಲದೆ ಗಡಿಯಾಚೆಗಿನ ವರ್ಗಾವಣೆಗೆ ಅವಕಾಶ ನೀಡುವುದು ಅಗತ್ಯವಿರುತ್ತದೆ. ಭಾರತವು ಚಾಲ್ತಿ ಖಾತೆಯಲ್ಲಿ ಮಾತ್ರ ಸಂಪೂರ್ಣ ಪರಿವರ್ತನೆಯನ್ನು ಅನುಮತಿಸಿದೆ.

ಗಡಿಯಾಚೆಗಿನ ವಹಿವಾಟುಗಳಲ್ಲಿ ರೂಪಾಯಿಯ ಬಳಕೆ ಭಾರತೀಯ ವ್ಯವಹಾರಗಳಿಗೆ ಅಪಾಯವನ್ನು ಕಡಿಮೆ ಮಾಡುತ್ತದೆ. ಕರೆನ್ಸಿ ನಡುವಿನ ವ್ಯವಹಾರದ ವೆಚ್ಚವನ್ನು ಕಡಿಮೆ ಮಾಡುವುದಲ್ಲದೇ, ವ್ಯಾಪಾರದ ಉತ್ತಮ ಬೆಳವಣಿಗೆಗೆ ಕಾರಣವಾಗುತ್ತದೆ. ಅಲ್ಲದೆ ಭಾರತೀಯ ವ್ಯವಹಾರಗಳು ಜಾಗತಿಕವಾಗಿ ಬೆಳೆಯಲು ಅವಕಾಶ ಕಲ್ಪಿಸುತ್ತದೆ.

ಇದನ್ನೂ ಓದಿ : India-Japan Business: ಜಪಾನ್​ನಿಂದ ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿ 5 ಟ್ರಿಲಿಯನ್ ಯೆನ್ ಹೂಡಿಕೆ: ಮಾಜಿ ಪ್ರಧಾನಿ ಯೋಶಿಹಿಡೆ ಸುಗಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.