ETV Bharat / business

ಕ್ರಿಪ್ಟೋಕರೆನ್ಸಿ ಜೂಜಾಟಕ್ಕೆ ಸಮ: ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ - RBI Governor criticize on Cryptocurrency

ಕ್ರಿಪ್ಟೋಕರೆನ್ಸಿ ಜೂಜಾಟಕ್ಕೆ ಸಮ - ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್- ಕ್ರಿಪ್ಟೋಕರೆನ್ಸಿ ಹೆಸರಲ್ಲಿ ವಂಚನೆ

rbi-governor-on-cryptocurrency
ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್
author img

By

Published : Jan 14, 2023, 1:14 PM IST

ನವದೆಹಲಿ: ಯಾವುದೇ ಭದ್ರತೆ ಇಲ್ಲದೇ ವ್ಯವಹಾರಕ್ಕೆ ಬಳಸಲಾಗುತ್ತಿರುವ ಕ್ರಿಪ್ಟೋಕರೆನ್ಸಿ ಜೂಜಾಟಕ್ಕೆ ಸಮನಾಗಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಕ್ರಿಪ್ಟೋಗಳ ಮೌಲ್ಯ ಕೇವಲ ನಂಬಿಕೆಯ ಆಧಾರದ ಮೇಲೆ ಮಾತ್ರ ನಡೆಯುತ್ತವೆ. ಇವಕ್ಕೆ ಯಾವುದೇ ನಿಖರತೆ ಇಲ್ಲ ಎಂದು ಅವರು ಹೇಳಿದ್ದಾರೆ.

ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ದಾಸ್, ದೇಶದಲ್ಲಿ ಕ್ರಿಪ್ಟೋಸ್ ಅನ್ನು ನಿಷೇಧಿಸುವಂತೆ ಕರೆ ನೀಡಲಾಗಿದೆ. ಅವುಗಳು ಯಾವುದೇ ನಿಖರ ಆಧಾರ ಹೊಂದಿಲ್ಲ. ಇದನ್ನು ಬೆಂಬಲಿಸುವವರು ಅದನ್ನು ಆಸ್ತಿ ಅಥವಾ ಹಣಕಾಸಿನ ಉತ್ಪನ್ನ ಎಂದು ತಿಳಿದುಕೊಂಡಿದ್ದಾರೆ. ಆದರೆ, ಅದು ಆಧಾರ ಸಹಿತ ಕ್ರೋಢೀಕರಣ ಮಾಡುವ ಮೂಲ ಎಂದು ಅವರು ಹೇಳಿದರು.

ಪ್ರತಿ ಸ್ವತ್ತು, ಪ್ರತಿ ಹಣಕಾಸು ಉತ್ಪನ್ನ ಕೆಲವು ಅದರದ್ದೇ ಇಂತಿಷ್ಟು ಮೌಲ್ಯ ಹೊಂದಿರಬೇಕು. ಆದರೆ, ಕ್ರಿಪ್ಟೋ ಈ ವಿಷಯದಲ್ಲಿ ಯಾವುದೇ ಮೌಲ್ಯವನ್ನು ಹೊಂದಿಲ್ಲ. ಯಾವುದೇ ಮೌಲ್ಯವಿಲ್ಲದ ವ್ಯವಹಾರ ಸಂಪೂರ್ಣವಾಗಿ ನಂಬಿಕೆಯ ಮೇಲೆ ಅವಲಂಬಿತವಾಗಿರುತ್ತದೆ. ಅದು 100 ಪ್ರತಿಶತದಷ್ಟು ಹೊಂದಿರುತ್ತದೆ. ಇಂತಹ ಆಧಾರ ರಹಿತ ವ್ಯವಹಾರ ಜೂಜಾಟಕ್ಕೆ ಸಮ ಎಂದು ಅವರು ಅಭಿಪ್ರಾಯಟ್ಟಿದ್ದಾರೆ.

ಕ್ರಿಪ್ಟೋಕರೆನ್ಸಿಯನ್ನು ನೀವು ಬೆಂಬಲಿಸುವುದಾದರೆ, ಅದನ್ನು ಜೂಜಿನಂತೆಯೇ ಪರಿಗಣಿಸಿ, ಅದಕ್ಕೆ ಸಂಬಂಧಿಸಿದ ನಿಯಮಗಳನ್ನು ರೂಪಿಸಿ. ಕ್ರಿಪ್ಟೋ ಯಾವುದೇ ಹಣಕಾಸಿನ ಮೂಲವಲ್ಲ ಎಂದು ದೃಢವಾಗಿ ಅಭಿಪ್ರಾಯಪಟ್ಟರು. ಡಿಜಿಟಲ್​ ಕರೆನ್ಸಿಯು ಮುಂದಿನ ಹಣದ ಭವಿಷ್ಯವಾಗಿದೆ. ಅದರ ಅಳವಡಿಕೆಯಿಂದ ಲಾಜಿಸ್ಟಿಕ್ ಮತ್ತು ಮುದ್ರಣ ವೆಚ್ಚವನ್ನು ಉಳಿಸಲು ಸಹಾಯವಾಗಲಿದೆ ಎಂದು ಅವರು ಹೇಳಿದರು.

ಬೆಳೆಯುತ್ತಿರುವ ಕ್ರಿಪ್ಟೋಕರೆನ್ಸಿಗಳಿಗೆ ಸಡ್ಡು ಹೊಡೆಯಲು ಭಾರತೀಯ ರಿಸರ್ವ್ ಬ್ಯಾಂಕ್​ ಇತ್ತೀಚೆಗೆ ತನ್ನ ಸ್ವಂತ ಇ-ರುಪೇ ಅಥವಾ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಯನ್ನು ಪ್ರಾರಂಭಿಸಿದೆ. ಇದು ಮೊದಲ ಹಂತದಲ್ಲಿ ವ್ಯವಹಾರಕ್ಕೆ ಮಾತ್ರ ಲಭ್ಯಗೊಳಿಸಲಾಗಿತ್ತು. ಈಗ ಆಯ್ದ ನಗರಗಳಲ್ಲಿ ಮಾತ್ರ ಇ ರುಪೇ ಜನರಲ್ಲಿ ಲಭ್ಯವಿದೆ.

ಕ್ರಿಪ್ಟೋಕರೆನ್ಸಿ ಹೆಸರಲ್ಲಿ ವಂಚನೆ: ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಹಲವು ಪಟ್ಟು ಲಾಭ ಸಿಗುತ್ತದೆ ಎಂದು ಹೇಳಿ ಹೈದರಾಬಾದ್​ನಲ್ಲಿ ವಂಚಿಸಿದ ಪ್ರಕರಣ ದಾಖಲಾಗಿದೆ. ಬೆಂಗಳೂರು ಮೂಲದ ಈ ವಂಚಕರು ಮ್ಯಾಕ್ಸ್ ಕ್ರಿಪ್ಟೋ ಟ್ರೇಡಿಂಗ್ ಕಂಪನಿ ಹೆಸರಿನಲ್ಲಿ ಸ್ಥಳೀಯ ಮುಖಂಡರ ನೆರವಿನಿಂದ ಕಚೇರಿಗಳನ್ನು ತೆರೆದು ಆನ್‌ಲೈನ್ ಹೂಡಿಕೆ ಮಾಡಿದರೆ 150 ದಿನಗಳಲ್ಲಿ 30 ಪಟ್ಟು ಲಾಭ ಎಂದು ಪ್ರಚಾರ ಮಾಡಿದ್ದರು. ಕಂಪನಿಯ ಪ್ರಧಾನ ಕಚೇರಿ ದುಬೈನಲ್ಲಿದೆ. ಅಂತಾರಾಷ್ಟ್ರೀಯವಾಗಿ ಕ್ರಿಪ್ಟೋ ಸಂಸ್ಥೆಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ ಎಂದು ಜನರನ್ನು ನಂಬಿಸಿತ್ತು. ಇದನ್ನು ನಂಬಿದ ನೂರಾರು ಸಣ್ಣ ವ್ಯಾಪಾರಿಗಳು, ಆಟೋ ಚಾಲಕರು, ಮಧ್ಯಮ ವರ್ಗದ ಕುಟುಂಬದ ಮಹಿಳೆಯರು ಸದಸ್ಯತ್ವ ಪಡೆದುಕೊಂಡಿದ್ದರು.

ಮ್ಯಾಕ್ಸ್ ಆ್ಯಪ್​ನಲ್ಲಿ ಸದಸ್ಯರಿಗೆ ಐಡಿ/ ಪಾಸ್​ವರ್ಡ್ ನೀಡಿ ವಹಿವಾಟು ನಡೆಸಲು ವ್ಯವಸ್ಥೆ ಮಾಡಲಾಗಿದೆ. ಉತ್ತಮ ಲಾಭವಿದೆ ಎಂದು ಸುಳ್ಳು ಮಾಹಿತಿ ತೋರಿಸುತ್ತಿದ್ದರು. ವಂಚಕರು ಸುಮಾರು 200 ಕೋಟಿ ರೂಪಾಯಿ ಎಗರಿಸಿದ ಬಗ್ಗೆ ದೂರು ದಾಖಲಾಗಿದೆ.

ಇದನ್ನೂ ಓದಿ: RBI ಎಚ್ಚರಿಕೆ! 'ವಾಸ್ತವ ಆಧಾರವಿಲ್ಲದ ಕ್ರಿಪ್ಟೊಕರೆನ್ಸಿಗಳು ನಿಜವಾದ ಅಪಾಯ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.