ಬೀಜಿಂಗ್: ಭಾರತವು ಚೀನಾದ ಮೊಬೈಲ್ ತಯಾರಕ ಸಂಸ್ಥೆಯಾದ Vivo ಕುರಿತು ನಡೆಯುತ್ತಿರುವ ತನಿಖೆಯನ್ನು ಕಾನೂನು ಮತ್ತು ನಿಯಮಗಳಿಗೆ ಅನುಸಾರವಾಗಿ ನಡೆಸುತ್ತದೆ. ಅಲ್ಲದೇ ಚೀನಾದ ಸಂಸ್ಥೆಗಳಿಗೆ "ನ್ಯಾಯಯುತ" ಮತ್ತು "ತಾರತಮ್ಯರಹಿತ" ವ್ಯಾಪಾರದ ವಾತಾವರಣವನ್ನು ಒದಗಿಸುತ್ತದೆ ಎಂದು ಚೀನಾ ಬುಧವಾರ ಭರವಸೆ ವ್ಯಕ್ತಪಡಿಸಿದೆ.
ಭಾರತದ ಹಲವಾರು ಸ್ಥಳಗಳಲ್ಲಿರುವ ಚೀನಾದ ಮೊಬೈಲ್ ತಯಾರಕ ವಿವೋ ಕಂಪನಿಯ ಕಚೇರಿಗಳ ಮೇಲೆ ಇಡಿ ದಾಳಿ ನಡೆಸಿದೆ. ಈ ವಿಷಯವನ್ನು ನಾವು ಗಮನಿಸುತ್ತಿದ್ದೇವೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್ ಹೇಳಿದ್ದಾರೆ. ನಾನು ಹಲವು ಬಾರಿ ಹೇಳಿದಂತೆ, ವಿದೇಶದಲ್ಲಿ ವ್ಯಾಪಾರ ಮಾಡುವಾಗ ಕಾನೂನು ಮತ್ತು ನಿಬಂಧನೆಗಳಿಗೆ ಬದ್ಧವಾಗಿರುವಂತೆ ಚೀನಾ ಸರ್ಕಾರ ಕಂಪನಿಗಳಿಗೆ ಯಾವಾಗಲೂ ಹೇಳುತ್ತದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ತೆರಿಗೆ ವಂಚನೆ, ದೇಶದ ಗೌಪ್ಯ ಮಾಹಿತಿ ಸೋರಿಕೆ: 40 ಕಡೆ ಚೀನಿ ಕಂಪನಿಗಳ ಮೇಲೆ ಇಡಿ ದಾಳಿ
ಈ ಮಧ್ಯೆ, ಚೀನಾದ ಕಂಪನಿಗಳು ಕಾನೂನುಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ನಾವು ದೃಢವಾಗಿ ಬೆಂಬಲಿಸುತ್ತೇವೆ. ಭಾರತದ ಕಾನೂನು ಮತ್ತು ನಿಬಂಧನೆಗಳಿಗೆ ಅನುಗುಣ ತನಿಖೆಯನ್ನು ನಡೆಸುತ್ತಾರೆ ಹಾಗೂ ಭಾರತದಲ್ಲಿ ಹೂಡಿಕೆ ಮಾಡುವ ಮತ್ತು ಕಾರ್ಯನಿರ್ವಹಿಸುವ ಚೀನಾದ ಕಂಪನಿಗಳಿಗೆ ನ್ಯಾಯಯುತ ತಾರತಮ್ಯವಿಲ್ಲದ ವ್ಯಾಪಾರ ವಾತಾವರಣವನ್ನು ಒದಗಿಸುತ್ತಾರೆಂದು ನಾವು ಭಾವಿಸುತ್ತೇವೆ ಎಂದು ವಕ್ತಾರರು ಹೇಳಿದರು.
ಚೀನಾದ ಸ್ಮಾರ್ಟ್‌ಫೋನ್ ತಯಾರಕ ವಿವೋ ಮತ್ತು ಸಂಬಂಧಿತ ಸಂಸ್ಥೆಗಳ ವಿರುದ್ಧ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಮಂಗಳವಾರ ಭಾರತದಾದ್ಯಂತ ಕನಿಷ್ಠ 44 ಸ್ಥಳಗಳಲ್ಲಿ ದಾಳಿ ನಡೆಸಿದೆ. ದೆಹಲಿ, ಉತ್ತರ ಪ್ರದೇಶ, ಮೇಘಾಲಯ ಮತ್ತು ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳ ಸ್ಥಳಗಳಲ್ಲಿ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಸೆಕ್ಷನ್‌ಗಳ ಅಡಿ ಶೋಧ ನಡೆಸಲಾಗಿದೆ.