ETV Bharat / business

ವೈಯಕ್ತಿಕ ಅಪಘಾತ ವಿಮೆ.. ಅಪಘಾತವಾದರೆ ಇದೇ ಆಪದ್ಬಾಂಧವ - accident insurance policy rules

ಅನಾರೋಗ್ಯದ ಸಂದರ್ಭದಲ್ಲಿ ಆರೋಗ್ಯ ವಿಮೆಯು ಆಸ್ಪತ್ರೆ ವೆಚ್ಚವನ್ನು ಪಾವತಿಸುತ್ತದೆ. ಆದರೆ, ಅಪಘಾತ ಸಂಭವಿಸಿದಾಗ ತಾತ್ಕಾಲಿಕವಾಗಿ ಆದಾಯ ನಿಂತು ಹೋಗಬಹುದು. ಇನ್ನು ಕೆಲ ಬಾರಿ ಭಾಗಶಃ ಅಥವಾ ಶಾಶ್ವತ ಅಂಗವೈಕಲ್ಯ ಉಂಟಾಗಬಹುದು. ಹೀಗಾದಾಗ ಇದು ದೀರ್ಘಾವಧಿಯ ಆರ್ಥಿಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅಂಥ ಘಟನೆಗಳ ಸಂದರ್ಭದಲ್ಲಿ ನಿಮಗೆ ಆರ್ಥಿಕವಾಗಿ ಸಹಾಯ ಮಾಡಲು ವೈಯಕ್ತಿಕ ಅಪಘಾತ ವಿಮೆ (PAC) ಬೇಕಾಗುತ್ತದೆ.

Personal accident insurance
Personal accident insurance
author img

By

Published : Jul 16, 2022, 4:53 PM IST

ಬೆಂಗಳೂರು: ಜೀವನವು ಅನಿರೀಕ್ಷಿತ ತಿರುವುಗಳಿಂದ ಕೂಡಿದೆ. ಭವಿಷ್ಯದಲ್ಲಿ ನಮಗೆ ಏನು ಕಾಯುತ್ತಿದೆ ಎಂದು ಯಾರಿಗೂ ತಿಳಿದಿಲ್ಲ. ವಿಶೇಷವಾಗಿ ವಾಹನ ಅಪಘಾತಗಳು ಯಾವಾಗ ಮತ್ತು ಯಾವ ರೂಪದಲ್ಲಿ ಸಂಭವಿಸುತ್ತವೆ ಎಂಬುದು ನಮಗೆ ತಿಳಿದಿರುವುದಿಲ್ಲ. ವಾಹನ ಅಪಘಾತ ಸಣ್ಣದಾಗಿದ್ದರೆ ನಾವು ಬೇಗನೆ ಚೇತರಿಸಿಕೊಂಡು ಮತ್ತೆ ನಮ್ಮ ಕೆಲಸಕಾರ್ಯಗಳಿಗೆ ಹಾಜರಾಗುತ್ತೇವೆ. ಆದರೆ ಒಂದೊಮ್ಮೆ ತೀವ್ರ ಸ್ವರೂಪದ ವಾಹನ ಅಪಘಾತದಲ್ಲಿ ನಾವು ಸಿಲುಕಿದರೆ, ವರ್ಷಗಟ್ಟಲೆ ನಮ್ಮ ಆದಾಯದ ಮೂಲಗಳು ನಿಂತು ಹೋಗಬಹುದು. ಅಪಘಾತದಲ್ಲಿ ಗಾಯಗೊಂಡು ತಿಂಗಳುಗಟ್ಟಲೆ ಮನೆಯಲ್ಲೇ ಇರುವ ಪರಿಸ್ಥಿತಿ ಎದುರಾಗಬಹುದು. ಈ ರೀತಿಯ ಘಟನೆಗಳು ಸಂಭವಿಸಿದಾಗ ವೈಯಕ್ತಿಕ ಅಪಘಾತ ವಿಮಾ ಪಾಲಿಸಿಗಳು ನಮಗೆ ಅಗತ್ಯವಾದ ಹಣಕಾಸಿನ ಬೆಂಬಲ ನೀಡುವ ಸಾಧನಗಳಾಗಿವೆ. ಹಾಗಾದರೆ ಅಪಘಾತ ವಿಮೆಯ ಅಗತ್ಯವೇನು, ಅಪಘಾತ ವಿಮಾ ಪಾಲಿಸಿ ಆಯ್ಕೆ ಮಾಡುವಾಗ ಯಾವೆಲ್ಲ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ನೋಡೋಣ.

ಅನಾರೋಗ್ಯದ ಸಂದರ್ಭದಲ್ಲಿ ಆರೋಗ್ಯ ವಿಮೆಯು ಆಸ್ಪತ್ರೆ ವೆಚ್ಚವನ್ನು ಪಾವತಿಸುತ್ತದೆ. ಆದರೆ, ಅಪಘಾತ ಸಂಭವಿಸಿದಾಗ ತಾತ್ಕಾಲಿಕವಾಗಿ ಆದಾಯ ನಿಂತು ಹೋಗಬಹುದು. ಇನ್ನು ಕೆಲ ಬಾರಿ ಭಾಗಶಃ ಅಥವಾ ಶಾಶ್ವತ ಅಂಗವೈಕಲ್ಯ ಉಂಟಾಗಬಹುದು. ಹೀಗಾದಾಗ ಇದು ದೀರ್ಘಾವಧಿಯ ಆರ್ಥಿಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅಂಥ ಘಟನೆಗಳ ಸಂದರ್ಭದಲ್ಲಿ ನಿಮಗೆ ಆರ್ಥಿಕವಾಗಿ ಸಹಾಯ ಮಾಡಲು ವೈಯಕ್ತಿಕ ಅಪಘಾತ ವಿಮೆ (PAC) ಬೇಕಾಗುತ್ತದೆ. ಈ ಅಪಘಾತ ವಿಮಾ ಪಾಲಿಸಿಗೆ ಅನೇಕ ಆಡ್-ಆನ್‌ಗಳನ್ನು ಸೇರಿಸಬಹುದು. ಮುಖ್ಯವಾಗಿ ಆಕಸ್ಮಿಕ ಸಾವು, ತಾತ್ಕಾಲಿಕ/ಶಾಶ್ವತ ಅಂಗವೈಕಲ್ಯ ಮತ್ತು ಅರೆ-ಶಾಶ್ವತ ಅಂಗವೈಕಲ್ಯ ಮುಂತಾದ ಆ್ಯಡ್​ ಆನ್​ಗಳನ್ನು ಪಾಲಿಸಿಗೆ ಸೇರಿಸಬಹುದು. ಈ ಪೂರಕ ಪಾಲಿಸಿಗಳಿಗೆ ಸ್ವಲ್ಪ ಹೆಚ್ಚುವರಿ ಪ್ರೀಮಿಯಂ ಪಾವತಿಸಬೇಕಾಗುತ್ತದೆ.

ಯಾರು ಅರ್ಹರು?

ವೈಯಕ್ತಿಕ ಅಪಘಾತ ವಿಮಾ ಪಾಲಿಸಿಯನ್ನು 5 ವರ್ಷದಿಂದ 70 ವರ್ಷ ವಯಸ್ಸಿನ ಜನರಿಗೆ ನೀಡಲಾಗುತ್ತದೆ. ಜೀವ ಮತ್ತು ಆರೋಗ್ಯ ವಿಮಾ ಪಾಲಿಸಿಗಳಂತೆ, ವಯಸ್ಸಿಗೆ ಅನುಗುಣವಾಗಿ ಇದರಲ್ಲಿನ ಪ್ರೀಮಿಯಂ ಬದಲಾಗುವುದಿಲ್ಲ. ಎಲ್ಲಾ ವಯೋಮಾನದವರಿಗೂ ಒಂದೇ ಪ್ರೀಮಿಯಂ ಇರುತ್ತದೆ. ಆದಾಗ್ಯೂ, ಪಾಲಿಸಿ ಮೌಲ್ಯ ಮತ್ತು ಪ್ರೀಮಿಯಂ ಅನ್ನು ವ್ಯಕ್ತಿಗಳ ಆದಾಯ ಮತ್ತು ಅವರು ಎದುರಿಸುವ ಅಪಾಯಗಳ ಪಟ್ಟಿಯಿಂದ ನಿರ್ಧರಿಸಲಾಗುತ್ತದೆ.

ಎರಡು ರೀತಿಯ ವೈಯಕ್ತಿಕ ಅಪಘಾತ ಪಾಲಿಸಿಗಳು

ಎರಡು ರೀತಿಯ ವೈಯಕ್ತಿಕ ಅಪಘಾತ ವಿಮಾ ಪಾಲಿಸಿಗಳು ಲಭ್ಯವಿದೆ. ಸಾಮಾನ್ಯ ವಿಮಾ ಕಂಪನಿಗಳು ಈ ಪಾಲಿಸಿಯನ್ನು ಪ್ರತ್ಯೇಕವಾಗಿ ಸ್ವತಂತ್ರ ಪಾಲಿಸಿಯಾಗಿ ನೀಡುತ್ತವೆ. ಜೀವ ವಿಮಾ ಕಂಪನಿಗಳು ಇದನ್ನು ಪೂರಕ ಪಾಲಿಸಿಯಾಗಿಯೂ ನೀಡುತ್ತವೆ. ಸಾಮಾನ್ಯ ವಿಮಾ ಕಂಪನಿಗಳು ನೀಡುವ ಪಾಲಿಸಿಯನ್ನು ವಾರ್ಷಿಕವಾಗಿ ನವೀಕರಿಸಬೇಕು. ಜೀವ ವಿಮಾ ಪಾಲಿಸಿಯೊಂದಿಗೆ ಅಪಘಾತ ವಿಮಾ ಪಾಲಿಸಿ ತೆಗೆದುಕೊಂಡಾಗ ಇದು ದೀರ್ಘಾವಧಿಯದ್ದಾಗಿರುತ್ತದೆ.

ಸಮಗ್ರ ವೈಯಕ್ತಿಕ ಅಪಘಾತ ವಿಮಾ ಪಾಲಿಸಿ ಆಯ್ಕೆಮಾಡಿ

ಸಮಗ್ರ ವೈಯಕ್ತಿಕ ಅಪಘಾತ ವಿಮಾ ಪಾಲಿಸಿಯನ್ನು ಆಯ್ಕೆ ಮಾಡುವುದಕ್ಕೇ ಯಾವಾಗಲೂ ಆದ್ಯತೆ ನೀಡಬೇಕು. ಆಕಸ್ಮಿಕ ಮರಣ, ಶಾಶ್ವತ ಸಂಪೂರ್ಣ ಅಂಗವೈಕಲ್ಯ, ಶಾಶ್ವತ ಭಾಗಶಃ ಅಂಗವೈಕಲ್ಯ ಮತ್ತು ತಾತ್ಕಾಲಿಕ ಅಂಗವೈಕಲ್ಯ ಪ್ರಕರಣಗಳಲ್ಲಿ ಪರಿಹಾರವನ್ನು ಪಡೆಯಬೇಕಾದರೆ ಸಮಗ್ರ ವೈಯಕ್ತಿಕ ಅಪಘಾತ ವಿಮಾ ಪಾಲಿಸಿ ಬೇಕಾಗುತ್ತದೆ. ಅಪಘಾತ ಸಂಭವಿಸಿ ಕೆಲಸಕ್ಕೆ ಹೋಗಲು ಸಾಧ್ಯವಾಗದಿದ್ದಲ್ಲಿ ವಾರಕ್ಕೆ ಇಂತಿಷ್ಟು ಹಣ ಕೊಡುವ ವ್ಯವಸ್ಥೆಯೂ ಕೆಲ ಪಾಲಿಸಿಗಳಲ್ಲಿ ಇದೆ. ಪಾಲಿಸಿಯ ಮೌಲ್ಯವನ್ನು ಆಧರಿಸಿ ಇದನ್ನು ನಿರ್ಧರಿಸಲಾಗುತ್ತದೆ. ಆದ್ದರಿಂದ, ಪಾಲಿಸಿಯನ್ನು ಆಯ್ಕೆಮಾಡುವಾಗ ಈ ವಿಷಯದಲ್ಲಿ ಜಾಗರೂಕರಾಗಿರಬೇಕು. ಕಡಿಮೆ ಆದಾಯ ಹೊಂದಿರುವವರಿಗೆ ಇಂಥ ಪಾಲಿಸಿಗಳು ಬಹಳ ಅನುಕೂಲಕರ.

ಆದಾಯವನ್ನು ಆಧರಿಸಿದ ಪಾಲಿಸಿಗಳು

ಈ ಪಾಲಿಸಿಯ ಮೌಲ್ಯವು ವಿಮೆ ಖರೀದಿಸುವವರ ವಿವೇಚನೆಯನ್ನು ಅವಲಂಬಿಸಿರುತ್ತದೆ. ವ್ಯಕ್ತಿಗಳ ಆದಾಯವನ್ನು ಅವಲಂಬಿಸಿ, ಗರಿಷ್ಠ ಮೊತ್ತವನ್ನು ನಿರ್ಧರಿಸಲಾಗುತ್ತದೆ. ಆದಾಗ್ಯೂ, ಎಲ್ಲಾ ವಿಮಾ ಕಂಪನಿಗಳು ಒಂದೇ ನಿಯಮಗಳನ್ನು ಅನುಸರಿಸುವುದಿಲ್ಲ. ಕೆಲವು ಸಾಮಾನ್ಯ ವಿಮಾ ಕಂಪನಿಗಳು ವ್ಯಕ್ತಿಗಳ ಮಾಸಿಕ ಆದಾಯದ 72 ಪಟ್ಟು ಅಪಘಾತ ವಿಮೆಯನ್ನು ನೀಡುತ್ತವೆ. ಕೆಲವು ಪಾಲಿಸಿಗಳು ವಾರ್ಷಿಕ ಆದಾಯದ ಐದು ಪಟ್ಟು ಮೌಲ್ಯದ್ದಾಗಿರುತ್ತವೆ. ಕೆಲವು ಸಂದರ್ಭಗಳಲ್ಲಿ, ಗರಿಷ್ಠ 50 ಲಕ್ಷ ರೂಪಾಯಿಗಳ ಪಾಲಿಸಿ ನೀಡಲಾಗುತ್ತದೆ. ಪಾಲಿಸಿದಾರರು ಎದುರಿಸುವ ಅಪಾಯಗಳ ಆಧಾರದ ಮೇಲೆ ವಿಮಾ ಕಂಪನಿಗಳು ವಿಮಾ ಮೊತ್ತ ಮತ್ತು ಪ್ರೀಮಿಯಂ ಅನ್ನು ಲೆಕ್ಕ ಹಾಕುತ್ತವೆ. ಜೀವ ವಿಮಾ ಕಂಪನಿಗಳು ನೀಡುವ ಅಪಘಾತ ವಿಮಾ ಪಾಲಿಸಿಗಳು ಮೂಲ ಪಾಲಿಸಿಯ ಶೇಕಡಾ 30 ರಷ್ಟಿರುತ್ತದೆ. ಅಪಘಾತದ ಸಂದರ್ಭದಲ್ಲಿ ಪರ್ಯಾಯ ಆದಾಯ ಸೃಷ್ಟಿಸಲು ಈ ಪಾಲಿಸಿಗಳು ಉಪಯುಕ್ತವಾಗಿವೆ. ಆದರೆ, ಹೆಚ್ಚಿನ ವಿಮಾ ಕಂಪನಿಗಳು ವಾರಕ್ಕೆ 6,000 ರೂ.ನಿಂದ 10,000 ರೂ.ಗಳ ಮಿತಿಯನ್ನು ವಿಧಿಸಿವೆ. 104 ವಾರಗಳವರೆಗೆ ಪರಿಹಾರ ನೀಡುವ ವ್ಯವಸ್ಥೆ ಇರುತ್ತದೆ. ಪಾಲಿಸಿಯನ್ನು ತೆಗೆದುಕೊಳ್ಳುವಾಗ ಇದನ್ನು ಪರಿಶೀಲಿಸಬೇಕು.

ವೈಯಕ್ತಿಕ ಅಪಘಾತ ವಿಮೆ ಅತ್ಯಗತ್ಯ

ವೈಯಕ್ತಿಕ ಅಪಘಾತ ವಿಮಾ ಪಾಲಿಸಿ ಪ್ರತಿಯೊಬ್ಬರಿಗೂ ಅತ್ಯಗತ್ಯವಾಗಿರುತ್ತದೆ. ವಿಶೇಷವಾಗಿ ದುಡಿಯುವ ಯುವಕರಿಗೆ ಈ ಪಾಲಿಸಿ ಅತ್ಯಂತ ಅವಶ್ಯಕವಾಗಿದೆ. ಹೆಚ್ಚು ಪ್ರಯಾಣ ಮಾಡುವವರು ಈ ಪಾಲಿಸಿ ಕೊಳ್ಳುವುದನ್ನು ಮರೆಯಬಾರದು. ಟರ್ಮ್ ಪಾಲಿಸಿಗೆ ಹೋಲಿಸಿದರೆ, ಅಪಘಾತ ವಿಮಾ ಪಾಲಿಸಿಯ ಪ್ರೀಮಿಯಂ ಕಡಿಮೆ. ಟರ್ಮ್ ಪಾಲಿಸಿಯ ಜೊತೆಗೆ, ಈ ಪಾಲಿಸಿಯನ್ನು ಆರಿಸಿಕೊಳ್ಳುವುದರಿಂದ ಕಡಿಮೆ ಪ್ರೀಮಿಯಂನಲ್ಲಿ ಗರಿಷ್ಠ ರಕ್ಷಣೆಯನ್ನು ಪಡೆಯಬಹುದು. ಅದರಲ್ಲೂ ಸಾಲ ಮಾಡಿದವರು ಈ ಪಾಲಿಸಿ ತೆಗೆದುಕೊಳ್ಳಲೇಬೇಕು. ಆದಾಯದ ನಿಲುಗಡೆಯ ಸಂದರ್ಭದಲ್ಲಿ, ಈ ಪಾಲಿಸಿಯ ಆದಾಯದಿಂದ ಕಂತುಗಳನ್ನು ಪಾವತಿಸಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.