ETV Bharat / business

MSP: 9 ವರ್ಷಗಳಲ್ಲಿ ಜೋಳ, ಸಜ್ಜೆ, ರಾಗಿಯ ಕನಿಷ್ಠ ಬೆಂಬಲ ಬೆಲೆ ಶೇ 100ರಿಂದ 150ರಷ್ಟು ಹೆಚ್ಚಳ - ಪ್ರಮುಖ ಆಹಾರ ಧಾನ್ಯಗಳು ಮತ್ತು ಸಿರಿಧಾನ್ಯ

MSP: 2014-15 ಮತ್ತು 2023-24ರ ನಡುವೆ ಪ್ರಮುಖ ಆಹಾರ ಧಾನ್ಯಗಳ ಬೆಂಬಲ ಬೆಲೆಗಳು ಶೇ 100ರಿಂದ ಶೇ 150ರಷ್ಟು ಹೆಚ್ಚಳವಾಗಿವೆ ಎಂದು ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.

MSPs of coarse grains rise
MSPs of coarse grains rise
author img

By

Published : Aug 13, 2023, 12:13 PM IST

ನವದೆಹಲಿ : ಕಳೆದ ಒಂಬತ್ತು ವರ್ಷಗಳಲ್ಲಿ ಜೋಳ, ಸಜ್ಜೆ ಮತ್ತು ರಾಗಿಯ ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್​​ಪಿ) ಶೇ 100ರಿಂದ ಶೇ 150ರಷ್ಟು ಹೆಚ್ಚಳವಾಗಿದೆ. ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2014-15 ಮತ್ತು 2023-24ರ ನಡುವೆ ಜೋಳದ ಎಂಎಸ್​ಪಿ ಶೇಕಡಾ 108 ರಷ್ಟು ಹೆಚ್ಚಾಗಿದೆ.

2014-15ರಲ್ಲಿ ಜೋಳದ ಕನಿಷ್ಠ ಬೆಂಬಲ ಬೆಲೆ ಕ್ವಿಂಟಾಲ್​ಗೆ 1,550 ರೂ.ಗಳಷ್ಟಿತ್ತು. ಇದು 2023-24ರಲ್ಲಿ ಪ್ರತಿ ಕ್ವಿಂಟಾಲ್​ಗೆ ಶೇ 108ರಷ್ಟು ಏರಿಕೆಯಾಗಿ 3,225 ರೂ. ಗೆ ತಲುಪಿದೆ. ಅದೇ ರೀತಿ ಸಜ್ಜೆಗೆ ಎಂಎಸ್​ಪಿ 2014-15ರಲ್ಲಿ ಪ್ರತಿ ಕ್ವಿಂಟಾಲ್​ಗೆ ಇದ್ದ ಎಂಎಸ್​ಪಿ ದರ 1,250 ರೂ.ಗಳಿಂದ 2023-24ರಲ್ಲಿ ಪ್ರತಿ ಕ್ವಿಂಟಾಲ್​ಗೆ 2,500 ರೂ.ಗೆ ಏರಿದೆ.

ಇದೇ ಅವಧಿಯಲ್ಲಿ ರಾಗಿಯ ಕನಿಷ್ಠ ಬೆಂಬಲ ಬೆಲೆ ಕ್ವಿಂಟಾಲ್​ಗೆ 1,550 ರೂ.ಗಳಿಂದ 3,846 ರೂ.ಗೆ ಅಂದರೆ ಶೇ 148 ರಷ್ಟು ಏರಿಕೆಯಾಗಿದೆ. ಮೆಕ್ಕೆಜೋಳದ ಕನಿಷ್ಠ ಬೆಂಬಲ ಬೆಲೆ 2014-15ರಲ್ಲಿ ಪ್ರತಿ ಕ್ವಿಂಟಾಲ್​ಗೆ 1,310 ರೂ.ಗಳಷ್ಟಿತ್ತು. ಇದು 2023-24ರಲ್ಲಿ ಶೇಕಡಾ 59 ರಷ್ಟು ಏರಿಕೆಯಾಗಿ ಪ್ರತಿ ಕ್ವಿಂಟಾಲ್​ಗೆ 2,090 ರೂ.ಗೆ ಏರಿದೆ.

ಬಾರ್ಲಿಯ ಎಂಎಸ್​ಪಿ 2014-15 ರಲ್ಲಿ ಪ್ರತಿ ಕ್ವಿಂಟಾಲ್​ಗೆ 1,150 ರೂ.ಗಳಷ್ಟಿತ್ತು. ಇದು 2023-24 ರಲ್ಲಿ ಪ್ರತಿ ಕ್ವಿಂಟಾಲ್​ಗೆ 1,735 ರೂ.ಗೆ ಅಂದರೆ ಶೇಕಡಾ 50 ರಷ್ಟು ಹೆಚ್ಚಾಗಿದೆ. ಒಟ್ಟಾರೆಯಾಗಿ ಪ್ರಮುಖ ಆಹಾರ ಧಾನ್ಯಗಳು ಮತ್ತು ರಾಗಿಯ ಎಂಸ್​ಪಿ 2018-19ರಲ್ಲಿ ಪ್ರತಿ ಕ್ವಿಂಟಾಲ್​ಗೆ 2,897 ರೂ.ಗಳಿಂದ 2022-23ರಲ್ಲಿ ಪ್ರತಿ ಕ್ವಿಂಟಾಲ್​ಗೆ 3,578 ರೂ.ಗೆ ಅಂದರೆ ಶೇಕಡಾ 20 ರಷ್ಟು ಹೆಚ್ಚಾಗಿದೆ.

2023 ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷವಾಗಿರುವುದರಿಂದ ಆಹಾರ ಧಾನ್ಯಗಳ ಸಂಗ್ರಹಣೆ ಮತ್ತು ಬಳಕೆಯನ್ನು ಉತ್ತೇಜಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರವು ಪ್ರತಿವರ್ಷ ರಾಜ್ಯಗಳನ್ನು ವಿನಂತಿಸುತ್ತಿದೆ. ಬ್ರಾಂಡ್ ಅಂಬಾಸಿಡರ್​ಗಳನ್ನು ನೇಮಿಸಿಕೊಳ್ಳುವ ಮೂಲಕ ಸಿರಿ ಧಾನ್ಯಗಳ ಪ್ರಚಾರಕ್ಕಾಗಿ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ಮತ್ತು ಸಿರಿ ಧಾನ್ಯಗಳ ಸೇವನೆಯ ಕಡೆಗೆ ಜನರ ಆಹಾರ ಪದ್ಧತಿಯನ್ನು ಮರು-ಕೇಂದ್ರೀಕರಿಸಲು ಜಾಗೃತಿ ಅಭಿಯಾನಗಳನ್ನು ಪ್ರಾರಂಭಿಸುವಂತೆ ರಾಜ್ಯಗಳನ್ನು ಒತ್ತಾಯಿಸಲಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ರಾಜ್ಯಗಳು ತಮ್ಮ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ, ಸ್ಥಳೀಯ ಬಳಕೆಯ ಆದ್ಯತೆಯ ಪ್ರಕಾರ ಸಿರಿ ಧಾನ್ಯಗಳು ಮತ್ತು ರಾಗಿ ಉತ್ಪಾದನೆಯನ್ನು ಉತ್ತೇಜಿಸಿ ಅವನ್ನೇ ವಿತರಿಸಲು ಪ್ರಯತ್ನಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಕೃಷಿ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ರಾಜ್ಯಗಳನ್ನು ಕೋರಲಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಪ್ರಮುಖ ಆಹಾರ ಧಾನ್ಯಗಳು ಮತ್ತು ಸಿರಿಧಾನ್ಯಗಳನ್ನು ಸಂಗ್ರಹಿಸುವಂತೆ ಕೇಂದ್ರವು ರಾಜ್ಯ ಸರ್ಕಾರಗಳನ್ನು ಕೋರಿದೆ.

ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ) ಎಂಬುದು ಕೆಲ ಕೃಷಿ ಉತ್ಪನ್ನಗಳಿಗೆ ಸರ್ಕಾರ ನಿಗದಿಪಡಿಸಿದ ಕನಿಷ್ಠ ಬೆಲೆಯಾಗಿದ್ದು, ಮುಕ್ತ ಮಾರುಕಟ್ಟೆ ಬೆಲೆಗಳು ವೆಚ್ಚಕ್ಕಿಂತ ಕಡಿಮೆಯಿದ್ದರೆ ಉತ್ಪನ್ನಗಳನ್ನು ಎಂಎಸ್​ಪಿ ದರದಲ್ಲಿ ನೇರವಾಗಿ ರೈತರಿಂದ ಖರೀದಿಸಲಾಗುತ್ತದೆ.

ಇದನ್ನೂ ಓದಿ : Onion Price: ಈರುಳ್ಳಿ ಬೆಲೆ ಏರಿಕೆ ಆತಂಕ; ಬಫರ್ ಸ್ಟಾಕ್ ಬಿಡುಗಡೆ ಆರಂಭಿಸಿದ ಕೇಂದ್ರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.