ETV Bharat / business

100 ಬಿಲಿಯನ್​ ಡಾಲರ್​​​​​​ ದಾಟಿದ ಚೀನಾ ಭಾರತ ದ್ವಿಪಕ್ಷೀಯ ವ್ಯಾಪಾರ: ಹೆಚ್ಚುತ್ತಿದೆ ವ್ಯಾಪಾರ ಕೊರತೆ - ಕಳವಳ - ಚೀನಾ ಅವಲಂಬನೆ ಕಡಿಮೆ ಮಾಡುವ ಚಿಂತನೆ

ಚೀನಾದ ಜನರಲ್ ಅಡ್ಮಿನಿಸ್ಟ್ರೇಷನ್ ಆಫ್ ಕಸ್ಟಮ್ಸ್ (GAC) ದ ಮಾಹಿತಿ ಪ್ರಕಾರ ಈ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಚೀನಾಕ್ಕೆ ಭಾರತದ ರಫ್ತು ಪ್ರಮಾಣ ಶೇ 36.4 ರಷ್ಟು ಕುಸಿದು ಕೇವಲ 13.97 ಶತಕೋಟಿ ಡಾಲರ್​ಗೆ ತಲುಪಿದೆ ಎಂದು ತೋರಿಸುತ್ತದೆ. ಈ ಅವಧಿಯಲ್ಲಿ ವ್ಯಾಪಾರ ಕೊರತೆಯು 75.69 ಶತಕೋಟಿಗೆ ವಿಸ್ತರಣೆ ಕಂಡಿದೆ. ಇದು ಕಳವಳಕಾರಿ ಅಂಶವಾಗಿದೆ.

India, China trade cross $100 billion in January-September, trade deficit of $75 billion
100 ಬಿಲಿಯನ್​ ಡಾಲರ್​​​​​​ ದಾಟಿದ ಚೀನಾ ಭಾರತ ದ್ವಿಪಕ್ಷೀಯ ವ್ಯಾಪಾರ
author img

By

Published : Oct 27, 2022, 10:09 AM IST

ಬೀಜಿಂಗ್(ಚೀನಾ): ಭಾರತವು 2022 ರ ಮೊದಲ ಒಂಬತ್ತು ತಿಂಗಳಲ್ಲಿ ಚೀನಾದಿಂದ 89.66 ಶತಕೋಟಿ ಡಾಲರ್​ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿದೆ. ಇದು ಯಾವುದೇ ವರ್ಷದ ಮೂರು ತ್ರೈಮಾಸಿಕಗಳಲ್ಲಿ ಅತ್ಯಧಿಕ ವಹಿವಾಟಾಗಿದೆ ಎಂದು ವರದಿಗಳು ಹೇಳಿವೆ.

ಭಾರತ ಮತ್ತು ಚೀನಾ ನಡುವಿನ ದ್ವಿಮುಖ ವ್ಯಾಪಾರ 100 ಬಿಲಿಯನ್ ಡಾಲರ್​​ ದಾಟಿದೆ. ಜನವರಿ 1, 2022 ಮತ್ತು ಸೆಪ್ಟೆಂಬರ್ 30, 2022 ರ ನಡುವಿನ ಒಂಬತ್ತು ತಿಂಗಳಲ್ಲಿ ಚೀನಾದಿಂದ ಭಾರತದ ಆಮದು ಶೇ 31ರಷ್ಟು ಹೆಚ್ಚಳ ದಾಖಲಿಸಿದೆ. ಭಾರತ ಮತ್ತು ಚೀನಾ ನಡುವಿನ ದ್ವಿಮುಖ ವ್ಯಾಪಾರವು 100 ಬಿಲಿಯನ್ ಡಾಲರ್​​​ ದಾಟಿದೆ. ಆದರೆ ಅದೇ ಸಮಯದಲ್ಲಿ ಭಾರತದ ವ್ಯಾಪಾರ ಕೊರತೆಯು ದಾಖಲೆಯ ಮಟ್ಟಕ್ಕೆ ತಲುಪಿದೆ.

2021 ರ ಮೂರನೇ ತ್ರೈಮಾಸಿಕದ ಕೊನೆಯಲ್ಲಿ ಆಮದು ಪ್ರಮಾಣ 68.46 ಬಿಲಿಯನ್ ಡಾಲರ್​ ಆಗಿತ್ತು. ಅದು ಈ ಬಾರಿ 89 ಬಿಲಿಯನ್​ ಡಾಲರ್​ಗೆ ತಲುಪುವ ಮೂಲಕ ಹೊಸ ದಾಖಲೆಗೆ ಕಾರಣವಾಗಿದೆ. ಚೀನಾದ ಜನರಲ್ ಅಡ್ಮಿನಿಸ್ಟ್ರೇಷನ್ ಆಫ್ ಕಸ್ಟಮ್ಸ್ (GAC) ದ ಮಾಹಿತಿ ಪ್ರಕಾರ ಈ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಚೀನಾಕ್ಕೆ ಭಾರತದ ರಫ್ತು ಪ್ರಮಾಣ ಶೇ 36.4 ರಷ್ಟು ಕುಸಿದು ಕೇವಲ 13.97 ಶತಕೋಟಿ ಡಾಲರ್​ಗೆ ತಲುಪಿದೆ ಎಂದು ತೋರಿಸುತ್ತದೆ. ಈ ಅವಧಿಯಲ್ಲಿ ವ್ಯಾಪಾರ ಕೊರತೆಯು 75.69 ಶತಕೋಟಿಗೆ ವಿಸ್ತರಣೆ ಕಂಡಿದೆ. ಇದು ಕಳವಳಕಾರಿ ಅಂಶವಾಗಿದೆ.

ದ್ವಿಪಕ್ಷೀಯ ವ್ಯಾಪಾರವು ಕಳೆದ ವರ್ಷದ ದಾಖಲೆಯ ಅಂಕಿ - ಅಂಶ ಮತ್ತು ವ್ಯಾಪಾರ ಕೊರತೆ ಮೀರಿಸುವ ಹಾದಿಯಲ್ಲಿದೆ. 2021 ರಲ್ಲಿ ದ್ವಿಮುಖ ವ್ಯಾಪಾರವು ಮೊದಲ ಬಾರಿಗೆ 100 ಬಿಲಿಯನ್ ಡಾಲರ್​ ದಾಟಿ 125.6 ಬಿಲಿಯನ್ ಡಾಲರ್​ಗೆ ತಲುಪಿದೆ. ದ್ವಿಮುಖ ವ್ಯಾಪಾರದ ಹೆಚ್ಚಳದ ಅಂಕಿ - ಅಂಶಗಳಲ್ಲಿ, ಚೀನಾದಿಂದ ಭಾರತಕ್ಕೆ ಆಮದು ಮಾಡಿಕೊಳ್ಳುವ ಸರಕುಗಳು ಪ್ರಮುಖ ಪಾಲನ್ನು ಹೊಂದಿವೆ. ಇದು ಈ ವರ್ಷ ಇಲ್ಲಿಯವರೆಗೆ 97.5 ಶತಕೋಟಿ ಡಾಲರ್​ಗಳ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ವರ್ಷದ ಅಂತ್ಯದ ವೇಳೆಗೆ ಇದು 100 ಬಿಲಿಯನ್ ಡಾಲರ್ ದಾಟಲಿದೆ ಎಂದು ತಜ್ಞರು ನಂಬಿದ್ದಾರೆ.

ಚೀನಾ ಅವಲಂಬನೆ ಕಡಿಮೆ ಮಾಡುವ ಚಿಂತನೆ ನಡುವೆಯೂ ಹೆಚ್ಚಳ: ಈ ವರ್ಷ ಹೆಚ್ಚುತ್ತಿರುವ ವ್ಯಾಪಾರದ ಪ್ರಮಾಣವು ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ದೀರ್ಘಾವಧಿಯ ಪ್ರಯತ್ನಗಳ ಹೊರತಾಗಿಯೂ ಚೀನೀ ಯಂತ್ರೋಪಕರಣಗಳು ಮತ್ತು ಸಕ್ರಿಯ ಔಷಧೀಯ ಪದಾರ್ಥಗಳಂತಹ (APIs) ಮಧ್ಯವರ್ತಿಗಳಿಗೆ ಭಾರತದ ನಿರಂತರ ಬೇಡಿಕೆಯನ್ನು ಒತ್ತಿಹೇಳುತ್ತಿದೆ.

ಭಾರತೀಯ ರಫ್ತು ಪ್ರಮಾಣ ಕುಸಿತ, ಚೀನೀ ಸರಕುಗಳ ಮೇಲಿನ ಅವಲಂಬನೆ ಮತ್ತು ಕೆಲವು ಕ್ಷೇತ್ರಗಳಲ್ಲಿ ಅಸಮತೋಲನವು ಕಳವಳಕಾರಿ ವಿಷಯವಾಗಿದೆ. ಹೆಚ್ಚುತ್ತಿರುವ ಆಮದುಗಳು ಮಧ್ಯವರ್ತಿಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪ್ರತಿಬಿಂಬಿಸುತ್ತವೆ ಎಂದು ಭಾರತೀಯ ಅಧಿಕಾರಿಗಳು ಹೇಳುತ್ತಿದ್ದಾರೆ.

ಅತ್ಯಧಿಕ ಬೆಳವಣಿಗೆ ದಾಖಲಿಸಿದ ಚೀನಾ: ಭಾರತಕ್ಕೆ ರಫ್ತು ಮಾಡುವ ದೇಶಗಳಲ್ಲಿ ಚೀನಾ ಅತ್ಯಧಿಕ ಬೆಳವಣಿಗೆಯನ್ನು ದಾಖಲಿಸಿದೆ. ಮೂರನೇ ತ್ರೈಮಾಸಿಕದ ನಂತರ ದ್ವಿಮುಖ ವ್ಯಾಪಾರವು ಶೇ 13.8 ರಷ್ಟು ಅಂದರೆ 717 ಶತಕೋಟಿ ಡಾಲರ್​ಗೆ ಏರುವುದರೊಂದಿಗೆ ಚೀನಾ ASEAN ನ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿ ಉಳಿದಿದೆ. ಇದರ ನಂತರ ಯುರೋಪಿಯನ್ ಯೂನಿಯನ್ 7.9ರಷ್ಟು ಹೆಚ್ಚಳದೊಂದಿಗೆ 645 ಶತಕೋಟಿ ಡಾಲರ್​ ಹಾಗೂ ಅಮೆರಿಕ ಶೇ 6.9ರಷ್ಟು ಏರಿಕೆಯೊಂದಿಗೆ 580 ಶತಕೋಟಿ ಡಾಲರ್​ಗಳಷ್ಟು ವ್ಯಾಪಾರ ವಹಿವಾಟು ನಡೆಸುತ್ತಿದೆ.

ಇದನ್ನು ಓದಿ:ಸುಲಭ ಸಾಲ ಸೌಲಭ್ಯ, ಕ್ರೆಡಿಟ್ ಕಾರ್ಡ್‌ಗಳೆಷ್ಟು ಅಪಾಯಕಾರಿ?: ಉಪಯುಕ್ತ ಮಾಹಿತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.