ETV Bharat / business

ಎಫ್​ಡಿ ಬಡ್ಡಿದರದಲ್ಲಿ ಏರಿಕೆ: ಠೇವಣಿ ಹೂಡುವ ಮುನ್ನ ನಿಯಮವನ್ನೊಮ್ಮೆ ತಿಳಿದುಕೊಳ್ಳಿ! - ಸಣ್ಣ ಬ್ಯಾಂಕ್​ಗಳು ಅತಿಹೆಚ್ಚಿನ ಬಡ್ಡಿ ಆಮಿಷ

ಸಣ್ಣ ಬ್ಯಾಂಕ್​ಗಳು ಅತಿಹೆಚ್ಚಿನ ಬಡ್ಡಿ ಆಮಿಷ ಒಡ್ಡುತ್ತವೆ. ಇದರಿಂದ ಅಪಾಯ ಕೂಡ ಹೆಚ್ಚಿರುತ್ತದೆ.

ಎಫ್​ಡಿ ಬಡ್ಡಿದರದಲ್ಲಿ ಏರಿಕೆ
ಎಫ್​ಡಿ ಬಡ್ಡಿದರದಲ್ಲಿ ಏರಿಕೆ
author img

By

Published : Dec 2, 2022, 4:56 PM IST

Updated : Dec 2, 2022, 8:09 PM IST

ಹೈದರಾಬಾದ್​: ಹಣದುಬ್ಬರ ಕಡಿಮೆ ಮಾಡಲು ಆರ್​ಬಿಐ ರೆಪೋ ದರವನ್ನು ಏರಿಕೆ ಮಾಡಿದೆ. ಇದು ಬ್ಯಾಂಕ್​ಗಳಲ್ಲಿನ ಸ್ಥಿರ ಠೇವಣಿ ಮೇಲಿನ ಬಡ್ಡಿದರ ಏರಿಕೆಗೆ ಕಾರಣವಾಗಿದೆ. ಸ್ಥಿರ ಠೇವಣಿ (ಎಫ್​ಡಿ) ಬಡ್ಡಿದರ ಇನ್ನು ಕೂಡ ಹೆಚ್ಚುವ ಸಾಧ್ಯತೆ ಇದೆ. ಪ್ರಸ್ತುತ ಅನೇಕ ಬ್ಯಾಂಕ್​ಗಳು ವಾರ್ಷಿಕ ಬಡ್ಡಿದರವನ್ನು 7ರಷ್ಟು ಹೆಚ್ಚಿಸಿದ್ದು, ಕೆಲವು ಬ್ಯಾಂಕ್​ಗಳಲ್ಲಿ ಇದು 8 ರಷ್ಟು ಮೀರಿದೆ.

ಅತಿ ಹೆಚ್ಚಿನ ರಿಟರ್ನ್​ಗಳು ಹೆಚ್ಚಿನ ಅಪಾಯವನ್ನು ಹೊಂದಿರುತ್ತವೆ. ಇದು ಹೆಚ್ಚಿನ ಗ್ಯಾರಂಟಿ ರಿಟರ್ನ್​ ಹೊಂದಿರುವ ಎಫ್​ಡಿ ಅಲ್ಲಿ ಕೂಡ ನಡೆಯಲಿದೆ. ಆದರೆ, ಅತಿ ಹೆಚ್ಚಿನ ಬಡ್ಡಿದರದಲ್ಲಿ ಹೆಚ್ಚಿನ ಅಪಾಯವಿರುವುದು ಸುಳ್ಳಲ್ಲ. ಕೆಲವು ಬ್ಯಾಂಕ್​ಗಳು ಕಡಿಮೆ ಬಡ್ಡಿದರ ನೀಡಿದರೂ ಸುರಕ್ಷತೆ ನೀಡುತ್ತದೆ.

ಸಣ್ಣ ಬ್ಯಾಂಕ್​ಗಳು ಅತಿಹೆಚ್ಚಿನ ಬಡ್ಡಿ ಆಮಿಷ ಒಡ್ಡುತ್ತವೆ. ಇದರಿಂದ ಅಪಾಯ ಕೂಡ ಹೆಚ್ಚಿರುತ್ತದೆ. ಹಣದುಬ್ಬರ ನಿರಂತರವಾಗಿ ಒತ್ತಡಕ್ಕೆ ಕಾರಣವಾದರೆ, ಹೂಡಿಕೆದಾರರು ಹೆಚ್ಚಿನ ಬಡ್ಡಿ ಪಡೆಯಲು ಸಾಧ್ಯವಿಲ್ಲ. ಇಂತಹ ವಿಷಯಗಳನ್ನು ಮನದಲ್ಲಿಟ್ಟುಕೊಳ್ಳುವುದು ಅವಶ್ಯ. ಆರ್​ಬಿಐ ಅಡಿ ಪ್ರಮಾಣೀಕೃತವಾಗಿರುವ ಎಲ್ಲ ಶೆಡ್ಯೂಲ್​ ವಾಣಿಜ್ಯ​ ಬ್ಯಾಂಕ್​ಗಳಲ್ಲಿ 5 ಲಕ್ಷಕ್ಕೂ ಹೆಚ್ಚಿನ ಠೇವಣಿ ಹೂಡಿಕೆ ಮಾಡಿದರೆ ವಿಮೆ ಅನ್ವಯವಾಗುತ್ತದೆ. ಈ ಹಿನ್ನಲೆ ಠೇವಣಿಗೆ ವಾಣಿಜ್ಯ ಬ್ಯಾಂಕ್​ಗಳು ಸುರಕ್ಷಿತವಾಗಿವೆ.

ಹೊಸ ಪೀಳಿಗೆಯ ಸಣ್ಣ ಫೈನಾನ್ಸ್​ ಬ್ಯಾಂಕ್​ಗಳು (ಎಸ್​ಎಫ್​ಬಿ) ಅಣಬೆಯಂತೆ ಹುಟ್ಟಿಕೊಳ್ಳುತ್ತಿವೆ. ಇವು ಅತಿ ಹೆಚ್ಚು ಅಂದರೆ, 7.25ಕ್ಕಿಂತಲೂ ಹೆಚ್ಚು ಬಡ್ಡಿ ನೀಡುತ್ತವೆ. ಸೂರ್ಯೋದಯ ಎಸ್​ಎಫ್​ಬಿ 8.01 ರಷ್ಟು ಬಡ್ಡಿಯನ್ನು 999 ದಿನಗಳ ಅವಧಿಗೆ ನೀಡುತ್ತಿದೆ. ಉಜ್ಜೀವನ ಎಸ್​ಎಫ್​ಬಿ 8ರಷ್ಟು ಬಡ್ಡಿಯನ್ನು 560 ದಿನಗಳಿಗೆ ನೀಡುತ್ತಿದ್ದು, ಹಿರಿಯ ನಾಗರಿಕರಿಗೆ 8.75ರಷ್ಟು ಬಡ್ಡಿ ನೀಡುತ್ತಿದೆ. ಪ್ರಸ್ತುತ ಇರುವ ಅತಿ ಹೆಚ್ಚು ಬಡ್ಡಿದರ ಇದಾಗಿದೆ.

ಯಾವಾಗ ಕೆಲವು ಸರ್ಕಾರಿ ಬ್ಯಾಂಕ್​ಗಳು ಎಫ್​ಡಿ ದರವನ್ನು ಹೆಚ್ಚಿಸುತ್ತದೆ. ಅವರು ಆಗ ಮಾಡುತ್ತಾರೆ. ಇತ್ತೀಚೆಗೆ ಕೆಲವು ಸರ್ಕಾರಿ ಬ್ಯಾಂಕ್​ಗಳು ಬಡ್ಡಿದರವನ್ನು 7ರಷ್ಟನ್ನು ವಿವಿಧ ಅವಧಿ ಎಫ್​ಡಿಗೆ ಹೆಚ್ಚಿಸಿತು. ವಿಶೇಷ ದರವನ್ನು 599 ದಿನದಿಂದ 777 ದನದವರೆಗೆ ಕೂಡ ನೀಡಿತು. ಹಿರಿಯ ನಾಗರಿಕರಿಗೆ 50 ಬೆಸಿಸ್​ ಪಾಯಿಂಟ್​ ಅನ್ನು ಕೂಡ ಆಫರ್​ ಮಾಡಿದೆ.

ಸರ್ಕಾರಿ ಬ್ಯಾಂಕ್​ಗಳಲ್ಲಿ ಶೇ 6 ರಷ್ಟು ಬಡ್ಡಿದರ: 12ರಲ್ಲಿ 10 ಸರ್ಕಾರಿ ಬ್ಯಾಂಕ್​ಗಳು 6ರಷ್ಟು ಬಡ್ಡಿದರವನ್ನು ನೀಡುತ್ತಿದೆ. ಈ ವರ್ಷ ಸ್ಥಿರ ಠೇವಣಿ ದರ ಹೆಚ್ಚಿಸಿದ ಹಿನ್ನಲೆ ಎಲ್ಲಾ ಬ್ಯಾಂಕ್​ಗಳು ಬಡ್ಡಿದರ ಹೆಚ್ಚು ಮಾಡುವ ಸಾಧ್ಯತೆ ಇದೆ. ಅಂಚೆ ಕಚೇರಿಯಲ್ಲಿ ಈ ಸ್ಥಿರ ಠೇವಣಿ ದರ 6.70ರಷ್ಟಿದೆ. ಬ್ಯಾಂಕ್​ ಬಡ್ಡಿದರ ಹೆಚ್ಚಾದರೂ ಪೋಸ್ಟ್​ ಆಫೀಸ್​ನಲ್ಲಿ ಇದು ಯಾವುದೇ ಏರಿಕೆ ಕಂಡು ಬಂದಿಲ್ಲ.

ಬ್ಯಾಂಕೇತರ ಫೈನಾನ್ಸ್ ಕಂಪನಿಗಳು ಮತ್ತು ಗೃಹ ಸಾಲ ಸಂಸ್ಥೆಗಳು ಕಾರ್ಪೊರೇಟ್​ ಎಫ್​ಡಿ ಮೂಲಕ ಹಣವನ್ನು ಸಂಗ್ರಹಿಸುತ್ತಿದೆ. ಇದಕ್ಕೆ ವಿಮೆ ಅನ್ವಯವಾಗುವುದಿಲ್ಲ. ಬ್ಯಾಂಕ್​ಗೆ ಹೋಲಿಸಿದಾಗ ಕಾರ್ಪೊರೇಟ್​ಗಳು ಅತಿಹೆಚ್ಚು ಪಾವತಿ ಮಾಡುತ್ತವೆ. ಆದರೆ, ಸಾಲದ ರೇಟಿಂಗ್​ ಆಧಾರದ ಮೇಲೆ ಹೂಡಿಕೆ ಮಾಡಬೇಕಾ ಎಂಬುದು ನಿಮಗೆ ಬಿಟ್ಟಿದೆ. 7.50ರಷ್ಟು ಬಡ್ಡಿದರಕ್ಕೆ ಎಎಎ ರೇಟಿಂಗ್​ ನೀಡಲಾಗುತ್ತಿದೆ.

8ಕ್ಕಿಂತಲೂ ಹೆಚ್ಚಿನ ಬಡ್ಡಿದರಕ್ಕೆ ಎಎ ರೇಟಿಂಗ್​ ನೀಡಲಾಗುತ್ತಿದೆ. ಹಿರಿಯ ನಾಯಕರು ಅತಿ ಹೆಚ್ಚು ಬಡ್ಡಿದರವನ್ನು 25 ರಿಂದ 50 ಬೇಸಿಸ್​ ಪಾಯಿಂಟ್​ ಮೇಲೆ ಪಡೆಯುತ್ತಾರೆ.

ಖಾಸಗಿ ಬ್ಯಾಂಕ್​ಗಳಲ್ಲೂ ವಿವಿಧ ಅವಧಿಗೆ ಬಡ್ಡಿದ ರ 6 ರಷ್ಟಿದೆ. ಕೆಲವು ಬ್ಯಾಂಕ್​ಗಳು ಹಿರಿಯ ನಾಗರಿಕರಿಗೆ 8.25ರಷ್ಟು ನೀಡುತ್ತಿದೆ. ದೊಡ್ಡ ಖಾಸಗಿ ಬ್ಯಾಂಕ್​ಗಳು ಕೆಲ ಸಮಯದಿಂದ ಬಡ್ಡಿದರ ಏರಿಕೆ ಮಾಡಿದೆ. ಬಹುತೇಕ ಬ್ಯಾಂಕ್​ಗಳು ಪ್ರಸ್ತುತ 6.50ರಷ್ಟು ಬಡ್ಡಿದರ ನೀಡುತ್ತಿವೆ. ಇದನ್ನು ಸಾರ್ವಜನಿಕ ವಲಯದ ಬ್ಯಾಂಕ್​ಗಳಲ್ಲಿ ನೋಡಬಹುದು. ಕೆಲವು ವಿದೇಶಿ ಬ್ಯಾಂಕ್​ಗಳು 7.25 ರಷ್ಟು ಬಡ್ಡಿ ನೀಡುತ್ತಿವೆ.

ಎಫ್​ಡಿ ಮೇಲಿನ ಬಡ್ಡಿದ ಪ್ರಸ್ತುತ ಏರಿಕೆ ಕಾಣುತ್ತಿದೆ. ಇನ್ನು ಕೆಲ ಸಮಯ ಕಾಯಬಹುದೇ ಎಂಬ ಅನುಮಾನ ಅನೇಕರಲ್ಲಿದೆ. ಇದಕ್ಕಿರುವ ಉತ್ತಮ ಮಾರ್ಗ ಎಫ್​ಡಿಯನ್ನು ಅವಧಿಗೆ ಅನುಗುಣವಾಗಿ ವಿಭಾಗಿಸುವುದಾಗಿದೆ. 7.50-8 ರಷ್ಯು ಬಡ್ಡಿದರ ಉತ್ತಮ ಹಿಂದಿರುಗುವಿಕೆ ಆಗಿದೆ. ನಿಮಗೆ ಇದು ಸಮಾಧಾನ ತಂದರೆ ಮತ್ತೆ ಹಣ ಠೇವಣಿ ಇಡಬಹುದು. ಉಳಿದ ಹಣವನ್ನು ಎಫ್​ಡಿ ಬಡ್ಡಿದರ ಹೆಚ್ಚಾದಾಗ ಹೂಡಿಕೆ ಮಾಡಬಹುದು. ತಂತ್ರಗಾರಿಕೆ ನಿಮಗೆ ಇದ್ದರೆ ಈ ಬಡ್ಡಿ ದರದಲ್ಲಿನ ಏರು ಪೇರಿನ ಬಗ್ಗೆ ಚಿಂತೆ ಬೇಡ.

ಇದನ್ನೂ ಓದಿ: ಆರ್ಥಿಕ ವರ್ಷ ಅಂತ್ಯಕ್ಕೂ ಮುನ್ನ ತೆರಿಗೆ ಉಳಿತಾಯದ ಹೂಡಿಕೆ; ಆಯ್ಕೆಯಲ್ಲಿ ಇರಲಿ ಎಚ್ಚರಿಕೆ!

Last Updated : Dec 2, 2022, 8:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.