ETV Bharat / business

ನಿವೃತ್ತಿಯ ನಂತರ 20 ಸಾವಿರ ಮಾಸಿಕ ಪಿಂಚಣಿ ಪಡೆಯುವುದು ಹೇಗೆ?.. ಇಲ್ಲಿವೆ ಕೆಲ ಉತ್ತಮ ಮಾರ್ಗಗಳು..! - Choose Pension Annuity Plans

Retirement Pension Plan: ನೀವು ಯಾವುದಾದರೂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೀರಾ..?, ನೀವು ನಿವೃತ್ತಿಗಾಗಿ ಹಣವನ್ನು ಉಳಿಸಲು ಯೋಜಿಸುತ್ತಿದ್ದೀರಾ..?, 2023 ರಲ್ಲಿ ಪಿಂಚಣಿ ಯೋಜನೆಗಳ ಬಗ್ಗೆ ಹುಡುಕುತ್ತಿದ್ದೀರಾ..? ಈ ಮಾಹಿತಿ ಮೂಲಕ ಮಾಸಿಕ 20 ಸಾವಿರ ಪಿಂಚಣಿ ಪಡೆಯುವ ವಿಧಾನದ ಬಗ್ಗೆ ತಿಳಿಯಿರಿ..

How to Get 20k Monthly Pension  20k Monthly Pension after Retirement  Retirement Pension Plan  ಮಾಸಿಕ 20 ಸಾವಿರ ಪಿಂಚಣಿ ಪಡೆಯುವ ವಿಧಾನ  ನಿವೃತ್ತಿಯ ನಂತರ 20 ಸಾವಿರ ಮಾಸಿಕ ಪಿಂಚಣಿ  20 ಸಾವಿರ ಮಾಸಿಕ ಪಿಂಚಣಿ ಪಡೆಯುವುದು ಹೇಗೆ  ಇಲ್ಲಿದೆ ಉತ್ತಮ ಮಾರ್ಗಗಳು  Start Saving Early  Increase Your Contributions  Spread Your Investments  Go For Employer Sponsored Plans  Choose Pension Annuity Plans  Use Tax Benefits
ನಿವೃತ್ತಿಯ ನಂತರ 20 ಸಾವಿರ ಮಾಸಿಕ ಪಿಂಚಣಿ ಪಡೆಯುವುದು ಹೇಗೆ?.. ಇಲ್ಲಿದೆ ಉತ್ತಮ ಮಾರ್ಗಗಳು..
author img

By ETV Bharat Karnataka Team

Published : Aug 28, 2023, 10:50 AM IST

Retirement Pension Plan: ಕೆಲಸಕ್ಕೆ ಸೇರಿದ ಪ್ರತಿಯೊಬ್ಬ ವ್ಯಕ್ತಿಯೂ ಆ ಕಾಲದ ಖರ್ಚಿಗೆ ತಕ್ಕಂತೆ ನಿವೃತ್ತಿಯ ಹೊತ್ತಿಗೆ ಸಾಕಷ್ಟು ಹಣವನ್ನು ಉಳಿಸಿಕೊಳ್ಳವ ಯೋಜನೆ ಹಾಕಿಕೊಳ್ಳಬೇಕು. ಏಕೆಂದರೆ.. ನಿವೃತ್ತಿಯ ನಂತರ ಮಾಸಿಕ ಆಧಾರದಲ್ಲಿ ನಿಯಮಿತ ಸಂಬಳವನ್ನು ನಿರೀಕ್ಷಿಸುವಂತಿಲ್ಲ. ಅದಕ್ಕಾಗಿಯೇ ಉದ್ಯೋಗದ ಸಮಯದಿಂದಲೂ ನಿವೃತ್ತಿಯ ಯೋಜನೆ ಮಾಡುವುದು ಬಹಳ ಮುಖ್ಯ. ಇದರಿಂದ ಮುಂದಿನ ದಿನಗಳಲ್ಲಿ ಆರ್ಥಿಕ ಸಂಕಷ್ಟ ಎದುರಾದಾಗ ಆತಂಕ ಪಡುವ ಅಗತ್ಯವಿರುವುದಿಲ್ಲ. ಅಷ್ಟೇ ಅಲ್ಲ ಸಂತೋಷವಾಗಿ ಜೀವನವನ್ನೂ ನಡೆಸಬಹುದು. ಇದರೊಂದಿಗೆ ಆರ್ಥಿಕ ಸ್ಥಿರತೆಯನ್ನು ಸಹ ಹೊಂದಬಹುದು.

ಇನ್ನು ಅನೇಕ ಉದ್ಯೋಗಿಗಳು ನಿವೃತ್ತಿಯ ಯೋಜನೆ ಇಲ್ಲದೇ ವ್ಯರ್ಥವಾಗಿ ಖರ್ಚು ಮಾಡುತ್ತಾರೆ. ಅಂತಹವರು ಎಚ್ಚೆತ್ತುಕೊಂಡು ನಿವೃತ್ತಿಯ ಯೋಜನೆ ರೂಪಿಸಿಕೊಳ್ಳಬೇಕು ಎಂದು ಆರ್ಥಿಕ ತಜ್ಞರು ಸಲಹೆ ನೀಡುತ್ತಾರೆ. ಆದರೆ, ಆ ಮಾರ್ಗಗಳು ಯಾವುವು..?, 2023ರಲ್ಲಿ ಯಾವ ಪಿಂಚಣಿ ಯೋಜನೆಗಳು ಲಭ್ಯವಿವೆ..? ಎಂಬುದು ತಿಳಿದುಕೊಳ್ಳಿ.. ನಿವೃತ್ತಿಯ ನಂತರ 20 ಸಾವಿರ ಮಾಸಿಕ ಪಿಂಚಣಿ ಪಡೆಯಲು ಹಣಕಾಸು ತಜ್ಞರು ಕೆಲವೊಂದು ಹೂಡಿಕೆ ಮಾಡಲು ಉತ್ತಮ ಮಾರ್ಗಗಳನ್ನು ಬಹಿರಂಗಪಡಿಸಿದ್ದಾರೆ..

1. Start Saving Early : ನೀವು ಕೆಲಸ ಮಾಡುತ್ತಿರುವಾಗಲೇ ನಿಮ್ಮ ನಿವೃತ್ತಿಗಾಗಿ ಎಷ್ಟು ಬೇಗ ಹಣವನ್ನು ಉಳಿಸಲು ಪ್ರಾರಂಭಿಸುತ್ತೀರೋ ಅಷ್ಟು ಉತ್ತಮ. ಇದು ಒಂದು ನಿರ್ದಿಷ್ಟ ಅವಧಿಯಲ್ಲಿ ನಿಮ್ಮ ಹೂಡಿಕೆಗಳನ್ನು ಹೆಚ್ಚಿಸಲು ನಿಮಗೆ ಅವಕಾಶವನ್ನು ನೀಡುತ್ತದೆ. ಜೊತೆಗೆ, ಆರಂಭಿಕ ಉಳಿತಾಯ ನಿವೃತ್ತಿಯ ನಂತರ ನಿಮ್ಮ ಜೀವನಕ್ಕೆ ದೊಡ್ಡ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ.

2. Increase Your Contributions : 20 ಸಾವಿರ ರೂ ಮಾಸಿಕ ಪಿಂಚಣಿ ಪಡೆಯಲು ಮತ್ತೊಂದು ಉತ್ತಮ ಮಾರ್ಗ ಎಂದರೆ ನಿಮ್ಮ ಕಾಣಿಕೆ ಅಥವಾ ಕೊಡುಗೆಗಳನ್ನು (Contributions) ನಿವೃತ್ತಿ ಖಾತೆಗೆ ಲಿಂಕ್ ಮಾಡುವುದು. ಈ ರೀತಿ ಮಾಡುವುದರಿಂದ ನಿಮ್ಮ ಮಾಲೀಕ ಅಥವಾ ಕಂಪನಿಯ ಕೊಡುಗೆಗಳು ನಿಮ್ಮ ನಿವೃತ್ತಿ ಉಳಿತಾಯಕ್ಕೆ ಬಹಳ ಉಪಯೋಗವಾಗುತ್ತವೆ.

3. Spread Your Investments : ನಿವೃತ್ತಿಗಾಗಿ ಗರಿಷ್ಠ ಉಳಿತಾಯವನ್ನು ಪಡೆಯಲು ನಿಮ್ಮ ಹೂಡಿಕೆಗಳನ್ನು ವಿಸ್ತರಿಸಬೇಕು. ಹೀಗೆ ಮಾಡುವುದರಿಂದ ನಿಮ್ಮ ಹಣವನ್ನು ಬಾಂಡ್‌ಗಳು, ರಿಯಲ್ ಎಸ್ಟೇಟ್, ಷೇರು ಮಾರುಕಟ್ಟೆಗಳಂತಹ ವಿವಿಧ ಹೂಡಿಕೆಗಳಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಅಪಾಯವನ್ನು ಕಡಿಮೆ ಎದುರಿಸಬಹುದು. ಈ ವೇಳೆ, ನೀವು ನಿಮ್ಮ ಹಣಕಾಸಿನ ವ್ಯಾಪ್ತಿಯನ್ನು ಹೆಚ್ಚಿಸಬಹುದಾಗಿದೆ.

4. Go For Employer-Sponsored Plans : ಗರಿಷ್ಠ ಅನುಮತಿಸುವ ಕೊಡುಗೆಯನ್ನು ಆನಂದಿಸಲು ಉದ್ಯೋಗದಾತ - ಪ್ರಾಯೋಜಿತ ಯೋಜನೆಗಳಲ್ಲಿ ಹೂಡಿಕೆ ಮಾಡಿ. ನಿಮ್ಮ ಸೇವೆಗಾಗಿ ನಿವೃತ್ತಿಯ ಆಧಾರದ ಮೇಲೆ ಕೆಲವು ವರ್ಷಗಳವರೆಗೆ ನಿರ್ದಿಷ್ಟ ಪ್ರಮಾಣದ ಆದಾಯವನ್ನು ಒದಗಿಸುವ ಪಿಂಚಣಿ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಿ.

5. Choose Pension Annuity Plans : ಭಾರತದಲ್ಲಿ ಅತ್ಯುತ್ತಮ ಪಿಂಚಣಿ ಯೋಜನೆಯು 'ಪಿಂಚಣಿ ವರ್ಷಾಶನ ಯೋಜನೆ' ರೂಪದಲ್ಲಿ ಬರುತ್ತದೆ. ಇದು ನಿವೃತ್ತಿಯ ನಂತರ ಸ್ಥಿರ ಮಾಸಿಕ ಪಿಂಚಣಿಯನ್ನು ಒದಗಿಸುತ್ತದೆ. ನಿವೃತ್ತಿಯ ನಂತರ ಸ್ಥಿರವಾದ ಆದಾಯವನ್ನು ಪಡೆಯಲು ಖಾತರಿಯ ಲಾಭದ ಹೂಡಿಕೆ ಯೋಜನೆಯನ್ನು ಹುಡುಕುತ್ತಿರುವವರಿಗೆ ಈ ಯೋಜನೆ ಸೂಕ್ತವಾಗಿದೆ.

6. Use Tax Benefits : ನಿವೃತ್ತಿಗಾಗಿ ಮಾಡಿದ ಹೂಡಿಕೆಗಳ ಮೇಲೆ ಭಾರತ ಸರ್ಕಾರವು ತೆರಿಗೆ ಪ್ರಯೋಜನಗಳನ್ನು ಒದಗಿಸುತ್ತದೆ ಎಂಬುದನ್ನು ಪ್ರತಿಯೊಬ್ಬರೂ ನೆನಪಿನಲ್ಲಿಟ್ಟುಕೊಳ್ಳಬೇಕು. ಆದ್ದರಿಂದ, ನಿಮ್ಮ ಉಳಿತಾಯವನ್ನು ಹೆಚ್ಚಿಸಲು ಮತ್ತು ನಿಮ್ಮ ತೆರಿಗೆಯನ್ನು ಕಡಿಮೆ ಮಾಡಲು ಇಂತಹ ಯೋಜನೆಗಳಲ್ಲಿ ಹೂಡಿಕೆ ಮಾಡುವ ಪ್ರಯತ್ನವನ್ನು ಮಾಡುವುದು ಒಳ್ಳೆಯದು.

ಸೂಚನೆ:( ಯಾವುದೇ ಯೋಜನೆ ಪರಿಗಣಿಸುವ ಮುನ್ನ ಅಧ್ಯಯನ ಮಾಡಿ ಹೂಡಿಕೆ ತಜ್ಞರ ಸಲಹೆ ಮೇಲೆ ಮುಂದುವರೆಯಿರಿ)

ಓದಿ: 1200 ಡಾಲರ್​ಗಿಂತ ಕಡಿಮೆ ದರದಲ್ಲಿ ಬಾಸ್ಮತಿ ರಫ್ತಿಗೆ ನಿರ್ಬಂಧ; ಅಕ್ರಮ ತಡೆಗೆ ಕೇಂದ್ರದ ನಿಯಮ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.