ETV Bharat / business

ಕಾಲೇಜು ಶಿಕ್ಷಣವನ್ನು ಪೂರ್ಣಗೊಳಿಸದಿದ್ದಕ್ಕಾಗಿ ವಿಷಾದಿಸಿದ ವಿಶ್ವದ ಮೂರನೇ ಶ್ರೀಮಂತ!.. ಹೀಗಿತ್ತು ಅದಾನಿ ಯಶಸ್ಸಿನ ಗುಟ್ಟು!! - etv bhart kannda

16ನೇ ವಯಸ್ಸಿಗೆ ಶಿಕ್ಷಣವನ್ನು ಮಧ್ಯದಲ್ಲಿ ಬಿಟ್ಟು ಮುಂಬೈಗೆ ತೆರಳಿದ್ದ ಗೌತಮ್ ಅದಾನಿ - ವಜ್ರಗಳನ್ನು ಮಾರಾಟ ಮಾಡಿ 10,000 ರೂ. ಕಮಿಷನ್ ಪಡೆದಿದ್ದ ಅದಾನಿ ಇಂದು ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿ - ತಮ್ಮ ಕಾಲೇಜು ಶಿಕ್ಷಣವನ್ನು ಪೂರ್ಣಗೊಳಿಸಲು ಸಾಧ್ಯವಾಗದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದು ಏಕೆ- ಓದಿ ಸಂಪೂರ್ಣ ಸುದ್ದಿ.

Gautam Adani Regret for not completing College
ಕಾಲೇಜು ಶಿಕ್ಷಣವನ್ನು ಪೂರ್ಣಗೊಳಿಸದಿದ್ದಕ್ಕಾಗಿ ವಿಷಾದಿಸಿದ ವಿಶ್ವದ ಮೂರನೇ ಶ್ರೀಮಂತ!
author img

By

Published : Jan 9, 2023, 6:11 PM IST

ನವದೆಹಲಿ: ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ ಅವರು ತಮ್ಮ ಕಾಲೇಜು ಶಿಕ್ಷಣವನ್ನು ಪೂರ್ಣಗೊಳಿಸಲು ಸಾಧ್ಯವಾಗದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. 1978 ರಲ್ಲಿ, ಕೇವಲ 16 ನೇ ವಯಸ್ಸಿನಲ್ಲಿ, ಅವರು ತಮ್ಮ ಔಪಚಾರಿಕ ಶಿಕ್ಷಣವನ್ನು ಮಧ್ಯದಲ್ಲಿ ಬಿಟ್ಟು ಅದೃಷ್ಟ ಪರೀಕ್ಷಿಸಿಕೊಳ್ಳಲು ಮುಂಬೈಗೆ ತೆರಳಿದ್ದರು. ಮೂರು ವರ್ಷಗಳ ನಂತರ, ಅವರು ಜಪಾನಿನ ಖರೀದಿದಾರರಿಗೆ ವಜ್ರಗಳನ್ನು ಮಾರಾಟ ಮಾಡಿ 10,000 ರೂ.ಗಳನ್ನು ಕಮಿಷನ್ ರೂಪದಲ್ಲಿ ಪಡೆದರು.

  • Banaskantha | Adani group is just one manifestation of India's entrepreneur success story. I firmly believe that India holds the potential to build 100 Adani groups and there could be no better place than India to be an entrepreneur today: Gautam Adani,Chairman,Adani Group (08.1) pic.twitter.com/h7zxssteCo

    — ANI (@ANI) January 9, 2023 " class="align-text-top noRightClick twitterSection" data=" ">

ಆ ಮೂಲಕ ವ್ಯವಹಾರದಲ್ಲಿ ತಮ್ಮ ಮೊದಲ ಯಶಸ್ಸನ್ನು ಪಡೆದರು. ಇದರೊಂದಿಗೆ, ಉದ್ಯಮಿಯಾಗಿ ಅದಾನಿ ಅವರ ಪ್ರಯಾಣವು ಪ್ರಾರಂಭವಾಯಿತು.ಇಂದು ಅವರು ವಿಶ್ವದ ಮೂರನೇ ಶ್ರೀಮಂತ ಉದ್ಯಮಿಯಾಗಿದ್ದಾರೆ. ಆದರೂ ಕಾಲೇಜು ವ್ಯಾಸಂಗವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಎಂದು ವಿಷಾದಿಸುತ್ತಿದ್ದಾರೆ.

ಗೌತಮ್ ಅದಾನಿ ಗುಜರಾತ್ ಪಾಲನ್ಪುರ್ ಕಾರ್ಯಕ್ರಮದಲ್ಲಿ ಭಾಗಿ: ಗುಜರಾತ್‌ನ ಪಾಲನ್‌ಪುರ್‌ನ ವಿದ್ಯಾ ಮಂದಿರ ಟ್ರಸ್ಟ್‌ನ 75 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಗೌತಮ್ ಅದಾನಿ, ಆರಂಭಿಕ ಅನುಭವಗಳು ನನ್ನನ್ನು ಬುದ್ಧಿವಂತನನ್ನಾಗಿ ಮಾಡಿದವು. ಆದರೆ, ಈ ವೇಳೆ ಔಪಚಾರಿಕ ಶಿಕ್ಷಣವು ಜ್ಞಾನವನ್ನು ವೇಗವಾಗಿ ವಿಸ್ತರಿಸುತ್ತದೆ ಎಂದು ಹೇಳಿದರು.

ಉದ್ಯಮಿಯಾಗಲು ಭಾರತಕ್ಕಿಂತ ಉತ್ತಮ ಸ್ಥಳ ಇನ್ನೊಂದಿಲ್ಲ: ಗೌತಮ್ ಅದಾನಿ ತಮ್ಮ ಯಶಸ್ಸಿನ ಗುಟ್ಟನ್ನು ಬಿಚ್ಚಿಟ್ಟು, ಅದಾನಿ ಸಮೂಹವು ಭಾರತದ ಉದ್ಯಮಶೀಲತೆಯ ಯಶಸ್ಸಿನ ಕಥೆಗೆ ಕೇವಲ ಒಂದು ಉದಾಹರಣೆಯಾಗಿದೆ ಎಂದು ಹೇಳಿದರು. ಭಾರತವು 100 ಅದಾನಿ ಗ್ರೂಪ್ ಅನ್ನು ರಚಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಇಂದು ಉದ್ಯಮಿಯಾಗಲು ಭಾರತಕ್ಕಿಂತ ಉತ್ತಮ ಸ್ಥಳ ಇನ್ನೊಂದಿಲ್ಲ ಎಂದು ನಾನು ದೃಢವಾಗಿ ನಂಬುತ್ತೇನೆ. ಬನಸ್ಕಾಂತದಲ್ಲಿ ಅವರ ಆರಂಭಿಕ ದಿನಗಳ ನಂತರ, ಅವರು ಅಹಮದಾಬಾದ್‌ಗೆ ತೆರಳಿದರು, ಅಲ್ಲಿ ಅವರು ತಮ್ಮ ಮಾಧ್ಯಮಿಕ ಶಿಕ್ಷಣವನ್ನು ಪೂರ್ಣಗೊಳಿಸಲು 4 ವರ್ಷಗಳನ್ನು ಅಹಮದಾಬಾದ್​ನಲ್ಲಿ ಕಳೆದರು.

16ನೇ ವಯಸ್ಸಿಗೆ ಓದು ಬಿಟ್ಟಿದ್ದ ಅದಾನಿ: 'ನಾನು ಓದುವುದನ್ನು ಬಿಟ್ಟು ಮುಂಬೈಗೆ ಹೋಗಲು ನಿರ್ಧರಿಸಿದಾಗ ನನಗೆ ಕೇವಲ 16 ವರ್ಷ. ನಾನು ಆಗಾಗ್ಗೆ ಕೇಳುವ ಒಂದು ಪ್ರಶ್ನೆಯೆಂದರೆ, ನಾನು ಮುಂಬೈಗೆ ಏಕೆ ಹೋದೆ ಮತ್ತು ನನ್ನ ಕುಟುಂಬದೊಂದಿಗೆ ಏಕೆ ಕೆಲಸ ಮಾಡಲಿಲ್ಲ? ಹದಿಹರೆಯದವರು ನಿರೀಕ್ಷೆ ಮತ್ತು ಸ್ವಾತಂತ್ರ್ಯದ ಬಯಕೆಯನ್ನು ಹೊಂದುವುದು ಕಷ್ಟ ಎಂದು ಯುವಕರು ಒಪ್ಪುತ್ತಾರೆ. ನನಗೆ ತಿಳಿದಿದ್ದೇನೆಂದರೆ 'ನಾನು ವಿಭಿನ್ನವಾಗಿ ಏನನ್ನಾದರೂ ಮಾಡಬೇಕೆಂದು ಬಯಸಿದ್ದೆ ಮತ್ತು ನಾನು ಅದನ್ನು ಸ್ವಂತವಾಗಿ ಮಾಡಲು ಬಯಸುತ್ತೇನೆ ಎಂದರು.

ಮುಂಬೈನಲ್ಲಿ, ನನ್ನ ಸೋದರಸಂಬಂಧಿ ಪ್ರಕಾಶಭಾಯಿ ದೇಸಾಯಿ ನನಗೆ ಮಹೇಂದ್ರ ಬ್ರದರ್ಸ್‌ನಲ್ಲಿ ಕೆಲಸ ನೀಡಿದರು, ಅಲ್ಲಿ ನಾನು ವಜ್ರದ ವ್ಯಾಪಾರದ ಸೂಕ್ಷ್ಮತೆಗಳನ್ನು ಕಲಿಯಲು ಪ್ರಾರಂಭಿಸಿದೆ. ನಾನು ಶೀಘ್ರದಲ್ಲೇ ಆ ವ್ಯವಹಾರವನ್ನು ಅರ್ಥಮಾಡಿಕೊಂಡೆ ಮತ್ತು ಸುಮಾರು ಮೂರು ವರ್ಷಗಳ ಕಾಲ ಮಹೇಂದ್ರ ಬ್ರದರ್ಸ್ ಜೊತೆ ಕೆಲಸ ಮಾಡಿದ ನಂತರ ನಾನು ಝವೇರಿ ಬಜಾರ್ನಲ್ಲಿ ನನ್ನ ಸ್ವಂತ ಡೈಮಂಡ್ ಬ್ರೋಕರೇಜ್ ಅನ್ನು ಪ್ರಾರಂಭಿಸಿದಾಗಿ ಅದಾನಿ ಹೇಳಿಕೊಂಡಿದ್ದಾರೆ.

ಜಪಾನಿನ ಖರೀದಿದಾರರೊಂದಿಗೆ ಮೊದಲ ಒಪ್ಪಂದ: 'ನಾನು ಜಪಾನಿನ ಖರೀದಿದಾರರೊಂದಿಗೆ ನನ್ನ ಮೊದಲ ಒಪ್ಪಂದವನ್ನು ಮಾಡಿದ ದಿನವನ್ನು ಇನ್ನೂ ನೆನಪಿಸಿಕೊಳ್ಳುತ್ತೇನೆ. ಅದರಲ್ಲಿ 10 ಸಾವಿರ ಕಮಿಷನ್ ಪಡೆದಿದ್ದೆ. ಇದು ಉದ್ಯಮಿಯಾಗಿ ಪ್ರಯಾಣದ ಆರಂಭ ದಿನಗಳಾಗಿದ್ದವು ಎಂದು ಅವರು ಹೇಳಿದರು, 'ನಾನು ಕಾಲೇಜಿಗೆ ಹೋಗಲಿಲ್ಲ ಎಂಬ ವಿಷಾದವಿದೆಯೇ ಎಂಬುದು ನನ್ನನ್ನು ಆಗಾಗ್ಗೆ ಕಾಡುವ ಮತ್ತೊಂದು ಪ್ರಶ್ನೆ.

ನನ್ನ ಜೀವನ ಮತ್ತು ಅದರಲ್ಲಿನ ವಿವಿಧ ತಿರುವುಗಳನ್ನು ಪರಿಗಣಿಸಿ, ನಾನು ಕಾಲೇಜು ಮುಗಿಸಿದ್ದರೆ ನನಗೆ ಪ್ರಯೋಜನವಾಗುತ್ತಿತ್ತು ಎಂದು ನಾನು ನಂಬುತ್ತೇನೆ, ನನ್ನ ಆರಂಭಿಕ ಅನುಭವಗಳು ನನ್ನನ್ನು ಬುದ್ಧಿವಂತನನ್ನಾಗಿ ಮಾಡಿದವು. ಆದರೆ ಔಪಚಾರಿಕ ಶಿಕ್ಷಣವು ಒಬ್ಬರ ಜ್ಞಾನವನ್ನು ತ್ವರಿತವಾಗಿ ವಿಸ್ತರಿಸುತ್ತದೆ ಎಂದು ಈಗ ನಾನು ಅರಿತುಕೊಂಡಿದ್ದೇನೆ ಎಂದು ಅಭಿಪ್ರಾಯಪಟ್ಟರು.

225 ಶತಕೋಟಿ ಡಾಲರ್​ ಒಡೆತನದ ಅದಾನಿ ಗ್ರೂಪ್: ಅದಾನಿ ಸಮೂಹ ಇಂದು ಭಾರತದ ಅತಿದೊಡ್ಡ ವಿಮಾನ ನಿಲ್ದಾಣಗಳು ಮತ್ತು ಬಂದರಗಳನ್ನು ಹೊಂದಿದೆ, ವಿಶ್ವದ ಅತಿದೊಡ್ಡ ಸೌರ ವಿದ್ಯುತ್ ಕಂಪನಿಯಾಗಿದೆ. ಗುಂಪಿನ ವ್ಯವಹಾರವು ಶಕ್ತಿಯಿಂದ ಸಿಮೆಂಟ್ ಉದ್ಯಮದವರೆಗೆ ವ್ಯಾಪಿಸಿದೆ. ಸಮೂಹದ ಮಾರುಕಟ್ಟೆ ಬಂಡವಾಳೀಕರಣವು 225 ಬಿಲಿಯನ್ ಅಮೆರಿಕನ್ ಡಾಲರ್ ಆಗಿದೆ. ಇದೆಲ್ಲವೂ ಕಳೆದ ನಾಲ್ಕೂವರೆ ದಶಕಗಳಲ್ಲಿ ನಡೆದಿದೆ.

ಇದನ್ನೂ ಓದಿ:ಜ. 13ರಂದು ವಿಶ್ವದ ಅತಿ ಉದ್ದದ ಗಂಗಾ ವಿಲಾಸ್ ನೌಕೆಗೆ ಮೋದಿ ಚಾಲನೆ.. ಈ ಹಡಗಿನಲ್ಲಿದೆ ಐಷಾರಾಮಿ ಸೌಲಭ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.