ನವಸಾರಿ(ಗುಜರಾತ್): ಇಲ್ಲಿನ ರೈತನೊಬ್ಬ ತನ್ನ ಜಮೀನಿನಲ್ಲಿ ಪಾಕಿಸ್ತಾನ ಮತ್ತು ಇಸ್ರೇಲ್ ಮೂಲದ ಮಾವು ತಳಿಗಳನ್ನು ಸೇರಿದಂತೆ ಬರೋಬ್ಬರಿ 21 ವಿಧದ ಮಾವುಗಳನ್ನು ಬೆಳೆಯುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ನವಸಾರಿ ಜಿಲ್ಲೆಯ ಗ್ರಾಮವೊಂದರ ರೈತ ಈ ಸಾಧನೆಯನ್ನು ಮಾಡಿದ್ದು, ವಿವಿಧ ತಳಿಯ ಮಾವುಗಳನ್ನು ಬೆಳೆಯುವ ಮೂಲಕ ಉತ್ತಮ ಫಸಲು ಪಡೆದಿದ್ದಾರೆ.
ರೈತ ಮುಖೇಶ್ ನಾಯಕ್ ಅವರು ತನಗೆ ಸೇರಿದ ಕೇವಲ 25,000 ಚದರ ಅಡಿ ವಿಸ್ತೀರ್ಣದ ಸಣ್ಣ ಜಮೀನಿನಲ್ಲಿ ಇಸ್ರೇಲಿ, ಪಾಕಿಸ್ತಾನಿ ಹಾಗೂ ಇತರ 21 ಬಗೆಯ ಮಾವಿನ ತಳಿಗಳನ್ನು ಯಶಸ್ವಿಯಾಗಿ ಬೆಳೆದಿದ್ದಾರೆ. ಇಂತಹ ವಿಶಿಷ್ಟ ಕೃಷಿ ಮಾಡುವ ಮೂಲಕ ರೈತ ಮುಖೇಶ್ ನಾಯಕ್ ಈಗ ಎಲ್ಲರ ಮನೆ ಮಾತಾಗಿದ್ದಾರೆ. ರೈತನ ಈ ವಿಭಿನ್ನ ಪ್ರಯತ್ನವನ್ನು ನೋಡಿ ಕೃಷಿ ವಿಜ್ಞಾನಿಗಳೂ ಸಹ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಜಲಾಲಪುರ ತಾಲೂಕಿನ ಆಠಾಣ ಗ್ರಾಮದವರಾದ ಮುಖೇಶ್ ನಾಯಕ್ ಟೆಕ್ಸ್ ಟೈಲ್ ಎಂಜಿನಿಯರ್ ಆಗಿದ್ದು, ಕೃಷಿಯ ಮೇಲಿನ ಆಸಕ್ತಿಯಿಂದ ಅವರು ಈ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.
ಸದಾ ಏನನ್ನಾದರೂ ವಿಭಿನ್ನ ಪ್ರಯೋಗಗಳನ್ನು ಮಾಡುವ ಇವರು, ತಮ್ಮ ಕೌಶಲ್ಯದಿಂದ 21 ಬಗೆಯ ಮಾವಿನ ತಳಿಗಳನ್ನು ಯಶಸ್ವಿಯಾಗಿ ಬೆಳೆದು, ಉತ್ತಮ ಇಳುವರಿಯನ್ನು ಪಡೆಯುತ್ತಿದ್ದಾರೆ. ಮುಖೇಶ್ ನಾಯಕ್ರ ಯಶಸ್ಸನ್ನು ಕೃಷಿ ವಿಶ್ವವಿದ್ಯಾಲಯವೂ ಗುರುತಿಸಿದೆ. ನವಸಾರಿ ಕೃಷಿ ವಿಶ್ವವಿದ್ಯಾನಿಲಯವು 2010ರಲ್ಲಿ ಆಯೋಜಿಸಿದ್ದ ಮಾವು ಪ್ರದರ್ಶನದಲ್ಲಿ ಅಲ್ಫೋನ್ಸೋ ಮಾವಿನ ಹಣ್ಣುಗಳನ್ನು ಪ್ರದರ್ಶಿಸಿ ಮುಕೇಶ್ ನಾಯಕ್ ಕಿಂಗ್ ಆಫ್ ಮ್ಯಾಂಗೋ ಶೋ ಪ್ರಥಮ ಬಹುಮಾನವನ್ನು ಪಡೆದಿದ್ದರು. ಅವರು ತಮ್ಮ ಜಮೀನಿನಲ್ಲಿ ಮಾವು ಮಾತ್ರವಲ್ಲದೇ ವಿವಿಧ ರೀತಿಯ ಹೂವುಗಳು, ಗಿಡಗಳು, ತರಕಾರಿಗಳು ಮತ್ತು ಇತರ ಸಣ್ಣ ಮತ್ತು ದೊಡ್ಡ ಹಣ್ಣಿನ ಮರಗಳನ್ನು ಬೆಳೆಸಿದ್ದಾರೆ.
ಇದನ್ನೂ ಓದಿ:ಸಿಎ ಬಿಟ್ಟು ಕೃಷಿಗಿಳಿದ ವಿದ್ಯಾರ್ಥಿನಿ: ಮೆಣಸಿನಕಾಯಿ ಬೆಳೆದು 6 ತಿಂಗಳಲ್ಲಿ 8 ಲಕ್ಷ ಆದಾಯ
ರೈತ ಮುಖೇಶ್ ನಾಯಕ್ ಮಾತನಾಡಿ, ನನ್ನ ಸಣ್ಣ ತೋಟದಲ್ಲಿ 21 ತಳಿಯ ಮಾವುಗಳನ್ನು ಬೆಳೆಯಲಾಗಿದೆ. ಇದರಲ್ಲಿ ಎಲ್ಲಾ ಮರಗಳು 10 ರಿಂದ 12 ವರ್ಷ ಹಳೆಯವು. ಇದರಲ್ಲಿ ಇಸ್ರೇಲ್‌ನಿಂದ ಮಾಯಾ, ಹುಸ್ನಾರಾ, ಮೋಹನ್, ರಟೋಲ್, ಸೋನ್‌ಪಾರಿ, ಬ್ಲ್ಯಾಕ್ ಅಲ್ಫಾಂಜೊ, ಮಲ್ಗೋಬೋ, ದಾಳಿಂಬೆ, ಕೇಸರಿ, ಅರ್ಕಾ ಪುನೀತ್, ಅರ್ಕಾ ಸುಪ್ರಭಾತ್, ಅಮ್ರಿ, ಪಾಕಿಸ್ತಾನದಿಂದ ನೀಲಂ ಮಾವು ಗಿಡಗಳನ್ನು ಬೆಳೆಸಲಾಗಿತ್ತಿದೆ. ಈ ಮಾಸದಲ್ಲಿ 2000 ಕೆಜಿ ಮಾವು ಉತ್ಪಾದನೆಯಾಗಿದೆ ಎಂದರು.
ಆರ್ಡರ್ಗಳನ್ನು ಪಡೆದುಕೊಂಡು ಸ್ನೇಹಿತರಿಗೆ ಹಾಗೂ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ. ಇಸ್ರೇಲ್‌ನಲ್ಲಿ ಮಾಯಾ ಮತ್ತು ಸೋನ್‌ಪಾರಿ ಮಾವಿನ ಹಣ್ಣಿಗೆ ಹೆಚ್ಚಿನ ಬೇಡಿಕೆಯಿದೆ. 20 ಕೆಜಿ ಮಾವಿನ ಹಣ್ಣಿಗೆ 3000 ರೂ.ಗಳ ಬೆಲೆ ಇದೆ. ಅಕಾಲಿಕ ಮಳೆಯಂತಹ ಪ್ರತಿಕೂಲ ಪರಿಸ್ಥಿತಿಗಳಲ್ಲಿಯೂ ಮಾವು ಗುಣಮಟ್ಟದ ಉತ್ಪಾದನೆ ಮತ್ತು ಉತ್ತಮ ಬೆಲೆ ಇದೆ ಎಂದು ಹೇಳಿದರು.
ಇದನ್ನೂ ಓದಿ:ತಮಿಳುನಾಡಿನಲ್ಲೂ ಆವಿನ್ vs ಅಮುಲ್... ತಮಿಳರಿಂದ ಭಾರಿ ವಿರೋಧ!