ಟೆಸ್ಲಾ ಸಿಇಒ ಎಲಾನ್ ಮಸ್ಕ್ ಇತ್ತೀಚೆಗಷ್ಟೇ ಟ್ವಿಟರ್ನಲ್ಲಿ ಕೆಲ ಷೇರುಗಳನ್ನು ಖರೀದಿ ಮಾಡಿದ್ದರು. ಬಳಿಕ ಸಂಸ್ಥೆಯು ಆಫರ್ ಮಾಡಿದ್ದ ಆಡಳಿತ ಮಂಡಳಿಯ ಸದಸ್ಯತ್ವ ಸ್ಥಾನವನ್ನು ತಾವೇ ತಿರಸ್ಕರಿಸಿ ಸುದ್ದಿಯಾಗಿದ್ದರು. ಇದೀಗ ಟ್ವಿಟರ್ನಲ್ಲಿ ಹೂಡಿಕೆ ಮಾತ್ರವಲ್ಲ, ಇಡೀ ಟ್ವಿಟರ್ ಸಂಸ್ಥೆಯನ್ನೇ ಖರೀದಿ ಮಾಡಲು ಮುಂದಾಗಿದ್ದಾರೆ.
ಅಮೆರಿಕ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಕಮಿಷನ್‌ಗೆ ತಾವು ಸಲ್ಲಿಸಿದ ಫೈಲಿಂಗ್‌ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ಎಲಾನ್ ಮಸ್ಕ್, ಟ್ವಿಟರ್ನಲ್ಲಿ ಈ ಹಿಂದೆ ಕೆಲ ಪ್ರಮಾಣದಲ್ಲಿ ಹೂಡಿಕೆ ಮಾಡಿದ್ದೆ. ಈಗ ನಾನು ಅದರಲ್ಲಿ 100% ಹೂಡಿಕೆ ಮಾಡಲು ಬಯಸಿದ್ದೇನೆ. ಇಡೀ ಸಾಮಾಜಿಕ ಮಾಧ್ಯಮವನ್ನು ಖರೀದಿ ಮಾಡಲು ಇಚ್ಚಿಸುವೆ ಎಂದು ನಮೂದಿಸಿದ್ದಾರೆ.
ಟ್ವಿಟರ್ ಖರೀದಿಗಾಗಿ 100 ಪ್ರತಿಶತ ಹಣದಲ್ಲಿ 54.20 ಪ್ರತಿಶತದಷ್ಟು ನಗದನ್ನೇ ನೀಡುವೆ. ಟ್ವಿಟರ್ ಸಾಮಾಜಿಕ ಮಾಧ್ಯಮ ಬಲಯುತವಾಗಿದೆ. ಹೀಗಾಗಿ ನಾನು ಅದನ್ನು ನನ್ನ ಒಡೆತನಕ್ಕೆ ತೆಗೆದುಕೊಳ್ಳಲು ಬಯಸುವೆ. ಒಂದು ವೇಳೆ ಸಂಸ್ಥೆ ನನ್ನ ಬೇಡಿಕೆಯನ್ನು ತಿರಸ್ಕರಿಸಿದಲ್ಲಿ ನಾನೀಗ ಹೂಡಿಕೆ ಮಾಡಿರುವುದನ್ನು ಮುಂದುವರಿಸಬೇಕೆ, ಬೇಡವೇ ಎಂಬುದನ್ನು ತೀರ್ಮಾನಿಸುವೆ ಎಂದು ಹೇಳಿದ್ದಾರೆ.
ಟ್ವಿಟರ್ ಮುಕ್ತ ಅಭಿವ್ಯಕ್ತಿಗೆ ದೊಡ್ಡ ವೇದಿಕೆಯಾಗಿದೆ. ನನ್ನ ಹೂಡಿಕೆಯಿಂದ ಸಂಸ್ಥೆಯು ಅಭಿವೃದ್ಧಿ ಹೊಂದುವುದಿಲ್ಲ ಅಥವಾ ಅದರ ಪ್ರಸ್ತುತ ಸ್ವರೂಪವನ್ನು ಬದಲಿಸಲು ಸಾಧ್ಯವಿಲ್ಲ. ಟ್ವಿಟರ್ ಅನ್ನು ಖಾಸಗಿ ಕಂಪನಿಯಾಗಿ ಪರಿವರ್ತಿಸಬೇಕಾಗಿದೆ. ಇದಕ್ಕಾಗಿ ನಾನು ಸಂಸ್ಥೆಯನ್ನು ಖರೀದಿ ಮಾಡಲಿಚ್ಚಿಸುತ್ತೇನೆ. ನನ್ನ ಪ್ರಸ್ತಾಪವು ಅತ್ಯುತ್ತಮ ಮತ್ತು ಅಂತಿಮ ನಿರ್ಧಾರವಾಗಿದೆ. ಇದು ಕೈಗೂಡದಿದ್ದರೆ ಷೇರುದಾರನ ನನ್ನ ಸ್ಥಾನವನ್ನು ಮರುಪರಿಶೀಲಿಸುವೆ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.
ಇದನ್ನೂ ಓದಿ: ಗೃಹಬಳಕೆಯ ಪಿಎನ್ಜಿ ಬೆಲೆಯಲ್ಲಿ 4.25 ರೂ. ಹೆಚ್ಚಳ!