ನವದೆಹಲಿ: ಐಟಿ ರಿಫಂಡ್ ಬಂದಿದೆ ಅಂತಾ ನಿಮಗೆ ಮೆಸೇಜ್ ಬಂದಿದ್ದೇಯಾ?.. ಇದರ ಜೊತೆ ನಿಮ್ಮ ಬ್ಯಾಂಕ್ ಖಾತೆ ಸರಿಪಡಿಸಿಕೊಳ್ಳಿ ಅಂತಾ ಯಾವುದಾದರೂ ಲಿಂಕ್ ಕಳುಹಿಸುತ್ತಿದ್ದಾರಾ?.. ಹಾಗಾದರೆ ನೀವು ತುಂಬಾ ಜಾಗರೂಕರಾಗಿರಬೇಕು. ಏಕೆಂದ್ರೆ ಐಟಿ ರಿಫಂಡ್ಗಾಗಿ ಕಾಯುತ್ತಿರುವವರನ್ನು ಸೈಬರ್ ಅಪರಾಧಿಗಳು ಗುರಿಯಾಗಿಸಿಕೊಂಡಿದ್ದಾರೆ. ಲಿಂಕ್ ಅಥವಾ ಮೆಸೇಜ್ ಕಳುಹಿಸುವ ಮೂಲಕ ನಿಮ್ಮನ್ನು ವಂಚನೆಯ ಜಾಲಕ್ಕೆ ಕೆಡವಲಿದ್ದಾರೆ.
-
A viral message claims that the recipient has been approved for an income tax refund of ₹ 15,490.#PIBFactCheck
— PIB Fact Check (@PIBFactCheck) August 2, 2023 " class="align-text-top noRightClick twitterSection" data="
✔️ This claim is 𝐅𝐚𝐤𝐞.
✔️ @IncomeTaxIndia has 𝐧𝐨𝐭 sent this message.
✔️𝐁𝐞𝐰𝐚𝐫𝐞 of such scams & 𝐫𝐞𝐟𝐫𝐚𝐢𝐧 from sharing your personal information. pic.twitter.com/dsRPkhO3gg
">A viral message claims that the recipient has been approved for an income tax refund of ₹ 15,490.#PIBFactCheck
— PIB Fact Check (@PIBFactCheck) August 2, 2023
✔️ This claim is 𝐅𝐚𝐤𝐞.
✔️ @IncomeTaxIndia has 𝐧𝐨𝐭 sent this message.
✔️𝐁𝐞𝐰𝐚𝐫𝐞 of such scams & 𝐫𝐞𝐟𝐫𝐚𝐢𝐧 from sharing your personal information. pic.twitter.com/dsRPkhO3ggA viral message claims that the recipient has been approved for an income tax refund of ₹ 15,490.#PIBFactCheck
— PIB Fact Check (@PIBFactCheck) August 2, 2023
✔️ This claim is 𝐅𝐚𝐤𝐞.
✔️ @IncomeTaxIndia has 𝐧𝐨𝐭 sent this message.
✔️𝐁𝐞𝐰𝐚𝐫𝐞 of such scams & 𝐫𝐞𝐟𝐫𝐚𝐢𝐧 from sharing your personal information. pic.twitter.com/dsRPkhO3gg
‘ನಿಮ್ಮ ಬ್ಯಾಂಕ್ ಅಕೌಂಟ್ ನಂಬರ್ ತಪ್ಪಾಗಿದೆ. ಆದಷ್ಟು ಬೇಗ ಸರಿಪಡಿಸಿಕೊಳ್ಳಿ’ ಅಂತಾ ನಿಮ್ಮ ಮೊಬೈಲ್ಗಾಗಲಿ ಅಥವಾ ಇಮೇಲ್ಗೆ ಆಗಲಿ ಮೆಸೇಜ್ ಕಳುಹಿಸುತ್ತಾರೆ. ಮೆಸೇಜ್ ಜೊತೆ ಲಿಂಕ್ವೊಂದನ್ನು ಕಳುಹಿಸುತ್ತಾರೆ. ಆ ಲಿಂಕ್ ಕ್ಲಿಕ್ ಮಾಡಿದ್ರೆ ನಿಮ್ಮ ಖಾತೆಯಲ್ಲಿರುವ ಹಣವೆಲ್ಲವೂ ಮಂಗಮಾಯವಾಗುವುದು ಖಚಿತ. ಈಗ ರಿಟರ್ನ್ ಹಣ ಸಂಪೂರ್ಣ ಖಾತೆಗೆ ಜಮಾ ಆಗುವ ಸಮಯ ಆಗಿದ್ದರಿಂದ ಇಂತಹ ಸಂದೇಶಗಳನ್ನು ನಿಜ ಎಂದು ಹಲವರು ನಂಬುತ್ತಾರೆ. ಹೀಗಾಗಿ ಕೇಂದ್ರ ಸರ್ಕಾರ ರಿಟರ್ನ್ ಸಲ್ಲಿಸದವರಿಗೆ ಎಚ್ಚರಿಕೆಯೊಂದನ್ನು ಟ್ವೀಟ್ ಮೂಲಕ ರವಾನಿಸಿದೆ.
ಆದಾಯ ತೆರಿಗೆ (ಐಟಿ) ರಿಟರ್ನ್ಸ್ ಅನುಮೋದನೆ ಆಗಿದೆ ಎಂಬ ಮೆಸೇಜ್ಗಳು ಆಗಾಗ ಬರುತ್ತಿರುತ್ತವೆ. ಇವೆಲ್ಲವೂ ನಿಮ್ಮನ್ನು ಯಾಮಾರಿಸುವ ಸಂದೇಶಗಳಾಗಿರುತ್ತವೆ. ಆದಾಯ ತೆರಿಗೆ ಇಲಾಖೆ ಇಂತಹ ಮೆಸೇಜ್ಗಳನ್ನು ಯಾರಿಗೂ ಕಳುಹಿಸುವುದಿಲ್ಲ. ಸೈಬರ್ ಅಪರಾಧಿಗಳು ನಿಮ್ಮ ವೈಯಕ್ತಿಕ ಮಾಹಿತಿಯನ್ನು ತಿಳಿಯಲು ಮಾತ್ರ ಇಂತಹ ಮೆಸೇಜ್ಗಳನ್ನು ಕಳುಹಿಸುತ್ತಲೇ ಇರುತ್ತಾರೆ. ಇದರಿಂದ ನೀವು ಬಹಳ ಜಾಗರೂಕರಾಗಿರಬೇಕು ಎಂದು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (ಪಿಐಬಿ) ಟ್ವೀಟ್ ಮಾಡಿದೆ. ಇದರ ಜೊತೆ ಅವರು ಸಂದೇಶದ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ.
ಮರುಪಾವತಿ ಇಲ್ಲವೇ?: ವೈಯಕ್ತಿಕ ವಿವರಗಳನ್ನು ಕೇಳುವ ಯಾವುದೇ ಸಂದೇಶ/ಮೇಲ್ ಅನ್ನು ಐಟಿ ಇಲಾಖೆ ಕಳುಹಿಸುವುದಿಲ್ಲ ಎಂದು ಪಿಐಬಿ ಹೇಳಿದೆ. ನೀವು ಅಂತಹ ಸಂದೇಶವನ್ನು ಸ್ವೀಕರಿಸಿದರೆ ಅದರಲ್ಲಿರುವ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ. ಯಾರಿಗೂ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ. ತಪ್ಪಾಗಿ ಲಿಂಕ್ ಮೇಲೆ ಕ್ಲಿಕ್ ಮಾಡಿದ್ರೂ ಸಹ ಅಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸಬೇಡಿ. ಅಷ್ಟೇ ಅಲ್ಲ ಆ ಲಿಂಕ್ ಅನ್ನು ಕಾಪಿ ಮಾಡಿ ಮತ್ತೊಂದು ಬ್ರೌಸರ್ ಹಾಕಿ ಹುಡುಕದಂತೆ ಕಟ್ಟೆಚ್ಚರ ವಹಿಸಬೇಕೆಂದು ಕೇಂದ್ರ ಸಲಹೆ ನೀಡಿದೆ.
ಇನ್ನು ಸೈಬರ್ ಅಪರಾಧಿಗಳ ಬಲೆಗೆ ಸಿಲುಕಿಕೊಂಡಿದ್ರೆ ಕೂಡಲೇ ನಿಮ್ಮ ಹತ್ತಿರದ ಪೊಲೀಸ್ ಠಾಣೆ ಅಥವಾ ಸೈಬರ್ ಕ್ರೈಂ ಬ್ರಾಂಚ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದೆ. ನಿಮ್ಮ ಹಣ ಮತ್ತೊಂದು ಖಾತೆಗೆ ವರ್ಗಾವಣೆ ಆಗದಂತೆ ಸೈಬರ್ ಕ್ರೈಂ ಬ್ರಾಂಚ್ ಪೊಲೀಸರು ತಡೆಹಿಡಿಯುತ್ತಾರೆ.
ಓದಿ: Stock Market: ಲಾಭ ಘೋಷಣೆಯ ಪರಿಣಾಮ; Zomato ಶೇರು ಬೆಲೆ ಶೇ 14 ರಷ್ಟು ಏರಿಕೆ