ETV Bharat / business

Crude Oil: ಸೌದಿಯಿಂದ ಭಾರತಕ್ಕೆ ಕಚ್ಚಾತೈಲ ಪೂರೈಕೆ ಶೇ 34ರಷ್ಟು ಇಳಿಕೆ; ರಷ್ಯಾದಿಂದ ಹೆಚ್ಚಳ - ಸೌದಿ ಅರೇಬಿಯಾದಿಂದ ಕಚ್ಚಾತೈಲ ಆಮದು

Crude oil imports: ಭಾರತದ ಸಾಂಪ್ರದಾಯಿಕ ಕಚ್ಚಾ ತೈಲ ಪೂರೈಕೆ ರಾಷ್ಟ್ರಗಳಾದ ಸೌದಿ ಅರೇಬಿಯಾ ಹಾಗೂ ಇರಾಕ್​ನಿಂದ ಪೂರೈಕೆಯಾಗುವ ಕಚ್ಚಾ ತೈಲದ ಪ್ರಮಾಣ ಇಳಿಕೆಯಾಗಿದೆ.

India's crude oil imports from Saudi Arabia drop

author img

By

Published : Aug 2, 2023, 2:40 PM IST

ಬೆಂಗಳೂರು : ಭಾರತಕ್ಕೆ ಸೌದಿ ಅರೇಬಿಯಾದಿಂದ ಪೂರೈಕೆಯಾಗುತ್ತಿದ್ದ ಕಚ್ಚಾ ತೈಲದ ಪ್ರಮಾಣದಲ್ಲಿ ಗಮನಾರ್ಹ ಇಳಿಕೆಯಾಗಿದೆ. ಸೌದಿ ಅರೇಬಿಯಾ ಜುಲೈನಲ್ಲಿ ದಿನಕ್ಕೆ 4,84,000 ಬ್ಯಾರೆಲ್ ಕಚ್ಚಾ ತೈಲವನ್ನು ಭಾರತಕ್ಕೆ ಪೂರೈಸಿದೆ. ಹಿಂದಿನ ತಿಂಗಳುಗಳಲ್ಲಿ ಈ ಪ್ರಮಾಣ ದಿನಕ್ಕೆ 734,000 ಬ್ಯಾರೆಲ್‌ (ಬಿಪಿಡಿ) ಆಗಿತ್ತು. ಅಂದರೆ ಸೌದಿ ಅರೇಬಿಯಾದಿಂದ ಬರುತ್ತಿದ್ದ ಕಚ್ಚಾ ತೈಲದ ಪ್ರಮಾಣ ಶೇ 34 ರಷ್ಟು ಕಡಿಮೆಯಾಗಿದೆ. ಜುಲೈನಲ್ಲಿ ದೇಶವು 1 ಮಿಲಿಯನ್ ಬಿಪಿಡಿ ಹೆಚ್ಚುವರಿ ಪೂರೈಕೆ ಕಡಿತವನ್ನು ಘೋಷಿಸಿದ ನಂತರ ಸೌದಿಯಿಂದ ಆಮದುಗಳಲ್ಲಿ ಇಳಿಮುಖವಾಗಿದೆ.

ಮೇ ತಿಂಗಳಲ್ಲಿ ಸೌದಿ ಅರೇಬಿಯಾವು 5,00,000 bpd ಯಷ್ಟು ಕಚ್ಚಾ ತೈಲದ ಉತ್ಪಾದನೆಯನ್ನು ಕಡಿಮೆ ಮಾಡಿದೆ. ಹಾಗೆಯೇ ಇರಾಕ್ ವರ್ಷದ ಅಂತ್ಯದವರೆಗೆ 2,00,000 bpd ಗಿಂತ ಹೆಚ್ಚು ಕಡಿತಗೊಳಿಸಿದೆ. ಮೇ ನಿಂದ 2023 ರ ಅಂತ್ಯದವರೆಗೆ ರಷ್ಯಾ 50,000 ಬಿಪಿಡಿ ಯಷ್ಟು ಉತ್ಪಾದನೆಯನ್ನು ಕಡಿಮೆ ಮಾಡಿದೆ. ಒಟ್ಟಾರೆಯಾಗಿ, ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ ಮತ್ತು ಸಾಮಾನ್ಯವಾಗಿ ಒಪೆಕ್ + ಎಂದು ಕರೆಯಲ್ಪಡುವ ಅದರ ಮಿತ್ರರಾಷ್ಟ್ರಗಳು 2023 ರ ಮೇ ತಿಂಗಳಲ್ಲಿ 1.6 ಮಿಲಿಯನ್ ಬಿಪಿಡಿ ತೈಲ ಉತ್ಪಾದನೆ ಕಡಿತವನ್ನು ಘೋಷಿಸಿವೆ.

ಏತನ್ಮಧ್ಯೆ ಜುಲೈನಲ್ಲಿ ರಷ್ಯಾ ಭಾರತದ ಅಗ್ರ ಕಚ್ಚಾ ತೈಲ ಪೂರೈಕೆದಾರನಾಗಿ ಮುಂದುವರೆದಿದೆ. ಸದ್ಯ ಸೌದಿ ಅರೇಬಿಯಾ ಮತ್ತು ಇರಾಕ್​ನಿಂದ ಪೂರೈಕೆಯಾಗುತ್ತಿರುವ ಒಟ್ಟು ಕಚ್ಚಾ ತೈಲಕ್ಕಿಂತಲೂ ಅಧಿಕ ಪ್ರಮಾಣದ ತೈಲ ರಷ್ಯಾವೊಂದರಿಂದಲೇ ಬರುತ್ತಿದೆ. ಭಾರತವು ಜುಲೈನಲ್ಲಿ ರಷ್ಯಾದಿಂದ 1.9 ಮಿಲಿಯನ್ ಬಿಪಿಡಿ ಕಚ್ಚಾ ತೈಲ ಆಮದು ಮಾಡಿಕೊಂಡಿದೆ. ಇದೇ ಅವಧಿಯಲ್ಲಿ ಇರಾಕ್ 891,000 ಬಿಪಿಡಿ ತೈಲ ಪೂರೈಸಿದೆ.

ರಷ್ಯಾ ಭಾರತಕ್ಕೆ ಪೂರೈಸುತ್ತಿರುವ ಕಚ್ಚಾ ತೈಲದಲ್ಲಿ ರಷಿಯನ್ ಯುರಲ್ಸ್​ (Russian Urals) ಎಂದು ಕರೆಯಲಾಗುವ ಒಂದು ನಿರ್ದಿಷ್ಟ ಗ್ರೇಡ್​​ನ ತೈಲದ ಪ್ರಮಾಣ ಹೆಚ್ಚಾಗಿದೆ. ಜುಲೈನಲ್ಲಿ ಭಾರತವು 1.6 ಮಿಲಿಯನ್ ಬಿಪಿಡಿ ರಷ್ಯಾದ ಯುರಲ್ಸ್ ಅನ್ನು ಆಮದು ಮಾಡಿಕೊಂಡಿದೆ.

ಫೆಬ್ರವರಿ 2022 ರಲ್ಲಿ ಮಾಸ್ಕೋ ಉಕ್ರೇನ್‌ ಮೇಲೆ ಯುದ್ಧ ಆರಂಭಿಸಿದಾಗಿನಿಂದ ರಷ್ಯಾ ಭಾರತಕ್ಕೆ ಕಚ್ಚಾ ತೈಲದ ಪ್ರಮುಖ ಪೂರೈಕೆದಾರನಾಗಿ ಹೊರ ಹೊಮ್ಮಿದೆ. ಸೌದಿ ಅರೇಬಿಯಾ ಮತ್ತು ಇರಾಕ್ ಅನ್ನು ಹಿಂದಿಕ್ಕಿ ರಷ್ಯಾ ಭಾರತದ ಅಗ್ರ ಕಚ್ಚಾ ತೈಲ ಪೂರೈಕೆದಾರನಾಗಿದೆ. ಅಕ್ಟೋಬರ್ 2022 ರಿಂದ ಭಾರತವು ರಷ್ಯಾದಿಂದ ಗರಿಷ್ಠ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ.

ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ ನಂತರ ಯುರೋಪಿಯನ್ ಯೂನಿಯನ್ (EU) ಮತ್ತು ಯುಎಸ್​​ ಮಾಸ್ಕೋ ಮೇಲೆ ನಿರ್ಬಂಧಗಳನ್ನು ಹೇರಿದಾಗಿನಿಂದ ಮಾಸ್ಕೋ ತನ್ನ ತೈಲವನ್ನು ಏಷ್ಯಾದ ದೇಶಗಳಿಗೆ, ವಿಶೇಷವಾಗಿ ಭಾರತ ಮತ್ತು ಚೀನಾಕ್ಕೆ ರಿಯಾಯಿತಿ ದರದಲ್ಲಿ ನೀಡುತ್ತಿದೆ. ಭಾರತವು ರಿಯಾಯಿತಿ ದರದಲ್ಲಿ ಸಿಗುತ್ತಿರುವ ರಷ್ಯಾದ ಕಚ್ಚಾ ತೈಲದ ಖರೀದಿಯನ್ನು ಹೆಚ್ಚಿಸಿದೆ. ಭಾರತವು ಜೂನ್‌ನಲ್ಲಿ ರಷ್ಯಾ, ಸೌದಿ, ಇರಾಕ್, ಯುಎಸ್, ಯುಎಇ ಮತ್ತು ಇತರ ಕೆಲವು ದೇಶಗಳಿಂದ ದಿನಕ್ಕೆ ಒಟ್ಟು 4.57 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದೆ.

ಇದನ್ನೂ ಓದಿ : Startup Funding ಕುಸಿತ; ಜಾಗತಿಕವಾಗಿ ಹೊಸ Unicorn ಸಂಖ್ಯೆ ಶೇ 80ರಷ್ಟು ಇಳಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.