ETV Bharat / business

ಗೃಹ ಸಾಲದ ಬಡ್ಡಿ ದರ ಹೊರೆಯಾಗಿದೆಯಾ?.. ಇಲ್ಲಿದೆ ಹೊರೆ ಇಳಿಕೆಯ ಬೆಸ್ಟ್​​ ಟಿಪ್ಸ್​​ - ಬಡ್ಡಿದರದಲ್ಲಿ ಮತ್ತೆ ಹೆಚ್ಚಳ

ಬಡ್ಡಿದರ ಹೆಚ್ಚಿಸಿದಾಗ, ಕಡಿಮೆ ದರದಲ್ಲಿ ಅಂದರೆ ಶೇ 6.75ರಿಂದ ಶೇ 7ರಷ್ಟು ಸಾಲ ಪಡೆದವರಿಗೆ ಇದರ ಹೊರೆ ಭಾರೀ ಹೆಚ್ಚಲಿದೆ.

ಗೃಹ ಸಾಲದ ಬಡ್ಡಿ ದರ ಹೊರೆಯಾಗಿದೆಯಾ? ಇಲ್ಲಿದೆ ಭಾರ ಇಳಿಕೆಗೆ ಟಿಪ್ಸ್​​
are-home-loan-interest-rates-burden-here-are-tips-for-lighten-burden
author img

By

Published : Dec 14, 2022, 1:45 PM IST

ಹೈದ್ರಾಬಾದ್​: ಬಡ್ಡಿದರದಲ್ಲಿ ಮತ್ತೆ ಹೆಚ್ಚಳವಾಗಿದ್ದು, ಗೃಹ ಸಾಲ ಮತ್ತಷ್ಟು ಹೊರೆಯಾಗಿದೆ. ಈಗಾಗಲೇ ಅನೇಕ ಬ್ಯಾಂಕ್​ಗಳು ಬಡ್ಡಿದರ ಹೆಚ್ಚಳದ ಬಗ್ಗೆ ಘೋಷಿಸಿದೆ. ಜೊತೆಗೆ ಇಎಂಐ ಟರ್ಮ್​ಗಳು ಕೂಡ ಹೆಚ್ಚಳದ ಬಗ್ಗೆ ತಿಳಿಸಲಾಗಿದೆ. ಇಂತಹ ಬಡ್ಡಿದರವನ್ನು ಕಡಿಮೆ ಮಾಡುವುದು ಹೇಗೆ ಎಂದು ಎಂದಾದರೂ ಯೋಚಿಸಿದ್ದೀರಾ?

ಕೇಂದ್ರ ಬ್ಯಾಂಕ್​ ವಾಣಿಜ್ಯ ಬ್ಯಾಂಕ್​ಗಳಿಗೆ ನೀಡುಣ ಹಣದ ಮೇಲೆ ವಿಧಿಸುವ ಬಡ್ಡಿ ರೇಪೋದರವಾಗಿದ್ದು, ಇದರಿಂದ ಆರ್ಥಿಕ ವರ್ಷ ಆರಂಭವಾಗುತ್ತದೆ. ಇದು 35 ಬೇಸಿಸ್​ ಪಾಯಿಂಟ್​ನಿಂದ ಶೇ 6.25ರಷ್ಟು ಹೆಚ್ಚಿಸಲಾಗಿದೆ. ಈ ಕಾರಣದಿಂದ ಹೋಮ್​ ಲೋನ್​ 8.75ರಿಂದ ಶೇ 9ಕ್ಕೆ ಮತ್ತೆ ಜಿಗಿದಿದೆ. ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆದವರಿಗೆ ಈಗ ಬಡ್ಡಿದರ ದುಬಾರಿಯಾಗುತ್ತಿದೆ. 20 ವರ್ಷಗಳಲ್ಲಿ ಮುಗಿಯುವ ಸಾಲ ಇದೀಗ 30 ವರ್ಷದವರೆಗೆ ಮುಂದುವರೆಯಲಿದೆ.

ಬಡ್ಡಿದರ ಹೆಚ್ಚಿಸಿದಾಗ, ಕಡಿಮೆ ದರದಲ್ಲಿ ಅಂದರೆ ಶೇ 6.75ರಿಂದ ಶೇ 7ರಷ್ಟು ಸಾಲ ಪಡೆದವರಿಗೆ ಇದರ ಹೊರೆ ಭಾರಿ ಪ್ರಮಾಣದಲ್ಲಿ ಹೆಚ್ಚಲಿದೆ. 8.5 ರಿಂದ ಶೇ 9ರಷ್ಟು ಬಡ್ಡಿದರದಲ್ಲಿ ಸಾಲ ಪಡೆದವರಿಗೆ ಈ ಸ್ಥಿತಿ ಸಾಧಾರಣವಾಗಿರಲಿದೆ. ಸಾಲದ ಪಾವತಿ ಅವಧಿ ಕಡಿಮೆ ಆದಾಗ ಇದರ ಬಡ್ಡಿದರ ಕೂಡ ಇಳಿಯಲಿದೆ. ಆದರೆ, ಒಮ್ಮೆ ಬಡ್ಡಿದರ ಹೆಚ್ಚಿದರೆ, ಹಳೆಯ ಅವಧಿ ಮತ್ತೊಮ್ಮೆ ಮರುಕಳಿಸಲಿದೆ.

ಬಡ್ಡಿ ಹೆಚ್ಚಳದೊಂದಿಗೆ ಸಾಲದ ಅವಧಿಯೂ ಹೆಚ್ಚಳ: ಬಡ್ಡಿದರ ಹೆಚ್ಚಳದಿಂದ ಸಾಲದ ಅವಧಿ ಎರಡೂ ಮೂರು ವರ್ಷ ಹೆಚ್ಚಿದ್ದರೆ, ಅದು ಹೊರೆ ಎಂದೇ ಪರಿಗಣಿಸಲ್ಪಡುತ್ತದೆ. ನಿಮ್ಮ ಸಾಲದ ಕುರಿತು ಹೊಸ ವಿವರವನ್ನು ನೀವು ಪಡೆಯಬೇಕು. ಯಾವ ಬಡ್ಡಿದರ ಅನ್ವಯವಾಗಿದೆ? ಎಷ್ಟು ಅವಧಿ ಹೆಚ್ಚಲಿದೆ? ಇಎಂಐ ಕಡಿಮೆಮಾಡಲು ಏನಾದರೂ ಮಾರ್ಗ ಇದೆಯಾ ಎಂದು ತಿಳಿದು ನಿಮ್ಮ ಬ್ಯಾಂಕ್​ ಅನ್ನು ಸಂಪರ್ಕಿಸಬೇಕು.

ಬಡ್ಡಿದರ ಹೆಚ್ಚಳ ನಿಮ್ಮ ತಿಂಗಳ ಇಎಂಐ ಅಥವಾ ಗೃಹ ಸಾಲದ ಅವಧಿ ಹೆಚ್ಚಿಸಲಿದೆ. ಉದಾಹರಣೆಗೆ, ನೀವು 20 ವರ್ಷದ ಅವಧಿಗೆ 6.75ರಷ್ಟು ಬಡ್ಡಿದರಲ್ಲಿ 30 ಲಕ್ಷ ರೂ ಹಣ ಪಡೆದರೆ, ತಿಂಗಳಿಗೆ 22,367 ಇಎಂಐ ಕಟ್ಟಬೇಕು. ಒಂದು ವೇಳೆ 30 ವರ್ಷದ ಅವಧಿಗೆ 8.75ರಷ್ಟು ಬಡ್ಡಿದರದಲ್ಲಿ ಸಾಲ ಪಡೆದರೆ, 23,610 ಕಟ್ಟಬೇಕು. ಅವಧಿಯಲ್ಲಿ ಬದಲಾವಣೆಯಾಗದೇ ಇಎಂಐ ಹೆಚ್ಚಾದರೆ, ಅದರ ಮೊತ್ತ 26, 520 ಆಗಲಿದೆ.

ಕಡಿಮೆ ಬಡ್ಡಿಯಲ್ಲಿ ಸಾಲ ನೀಡುವ ಸಂಸ್ಥೆಗಳಿವೆಯಾ ಒಮ್ಮೆ ಪರಿಶೀಲಿಸಿ: ನಿಮ್ಮ ಬ್ಯಾಂಕ್‌ಗಿಂತ ಕಡಿಮೆ ಬಡ್ಡಿ ದರಗಳನ್ನು ನೀಡುವ ಯಾವುದೇ ಸಂಸ್ಥೆಗಳು ಇವೆಯೇ ಎಂದು ತಿಳಿಯಲು ಗೃಹ ಸಾಲದ ಮಾರುಕಟ್ಟೆಯನ್ನು ಸಮೀಕ್ಷೆ ಮಾಡಬೇಕು. 0.75ರಷ್ಟು ಬಡ್ಡಿದರ ತಗ್ಗಿದರೂ ಅದು ನಿಮಗೆ ಹೊರೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಕೆಲವೊಮ್ಮೆ ನಿಮ್ಮ ಬ್ಯಾಂಕ್​ಗೆ ನಿಮಗೆ ಕಡಿಮೆ ಬಡ್ಡಿದರಕ್ಕೆ ಬದಲಾಗುವಂತೆ ಸೂಚಿಸುತ್ತದೆ. ಇದರಲ್ಲ ಕೆಲವು ವೆಚ್ಚ ಇರಲಿದ್ದು, ಇದು ಸರ್ಪ್ಲಸ್​ ಮತ್ತು ವೆಚ್ಚವನ್ನು ಒಳಗೊಂಡಿರುತ್ತದೆ.

ಮುಂದೆ ಬಡ್ಡಿದರ ಹೆಚ್ಚಳ ನಿರೀಕ್ಷೆ ಮಾಡಲಾಗುವುದು. ಇದಕ್ಕೆ ಇಂದಿನಿಂದಲೇ ಸಿದ್ಧರಾಗಬೇಕು. ಹೆಚ್ಚಿನ ಬಡ್ಡಿಯನ್ನು ವಿಧಿಸುವ ಯಾವುದೇ ಸಾಲವನ್ನು ಮೊದಲೇ ತೆಗೆದು ಹಾಕಬೇಕು. ಯಾವಾಗಲೂ ಸಾಲದ ಇಎಂಐಗಳನ್ನು ಸರಿಯಾದ ಸಮಯಕ್ಕೆ ಪಾವತಿಸಿ. ಇಲ್ಲದಿದ್ದರೆ ವಿಳಂಬ ಶುಲ್ಕ ಹೆಚ್ಚುವರಿ ಹೊರೆಯಾಗುತ್ತದೆ. ಕ್ರೆಡಿಟ್ ಸ್ಕೋರ್ ಹಾನಿಯಾಗುತ್ತದೆ. ಕನಿಷ್ಠ 3-6 ತಿಂಗಳ ವೆಚ್ಚಗಳು ಮತ್ತು ಸಾಲದ ಕಂತುಗಳಿಗೆ ಸಾಕಷ್ಟು ಮೊತ್ತವು ಲಭ್ಯವಿರಬೇಕು.

ದೀರ್ಘಕಾಲಾವಧಿಯ ಗೃಹ ಸಾಲಗಳ ಕಂತುಗಳನ್ನು ಹೆಚ್ಚಿಸಬೇಕು. ಕಡಿಮೆ ಬಡ್ಡಿದರ ಹೆಚ್ಚಿನ ಸಾಲದ ಹೊರೆಗೆ ಕಾರಣವಾಗುತ್ತದೆ. ಸಾಲವನ್ನು ತೆಗೆದುಕೊಂಡ ಸಮಯಕ್ಕೆ ಹೋಲಿಕೆ ಮಾಡಿದಾಗ ನಿಮ್ಮ ಆದಾಯವು ಈಗ ಹೆಚ್ಚಿರಬಹುದು. ಅದರ ಅನುಗುಣವಾಗಿ ಇಎಂಐ ಅನ್ನು ಹೆಚ್ಚಿಸುವುದು ಉತ್ತಮ.

ಇದನ್ನೂ ಓದಿ: ಈ ವರ್ಷದಿಂದ ಟಿಡಿಎಸ್​ ಮೇಲೂ ತೆರಿಗೆ: ಸಿಬಿಡಿಟಿ ಆದೇಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.